ಪ್ಯಾರಾ ಅಥ್ಲೆಟಿಕ್ಸ್: ಕರಮ್'ಜ್ಯೋತಿಗೆ ಒಲಿದ ಕಂಚು

By Suvarna Web DeskFirst Published Jul 22, 2017, 6:12 PM IST
Highlights

ಪ್ರಸ್ತುತ 8ನೇ ಶ್ರೇಯಾಂಕ ಹೊಂದಿರುವ ದಲಾಲ್'ಗೆ, 2014ರಲ್ಲಿ ಬೀಜಿಂಗ್'ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಸಿಕ್ಕಿರಲಿಲ್ಲ. ಆದರೆ ಛಲ ಬಿಡದ ದಲಾಲ್ ತಮ್ಮ ಸ್ವಂತ ಖರ್ಚಿನಲ್ಲೇ ಕ್ರೀಡಾಕೂಟದಲ್ಲಿ ಭಾಗವಹಿಸಿ 2 ಕಂಚಿನ ಪದಕ ಗೆದ್ದುಕೊಂಡಿದ್ದರು.

ಲಂಡನ್(ಜು.22): ಭಾರತದ ಡಿಸ್ಕಸ್ ಥ್ರೋಪಟು ಕರಮ್‌'ಜ್ಯೋತಿ ದಲಾಲ್ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಕ್ರೀಡಾಕೂಟದಲ್ಲಿ ಭಾರತ 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು ಸೇರಿ ಒಟ್ಟು 3 ಪದಕ ಗೆದ್ದುಕೊಂಡಿದೆ.

ಮಹಿಳೆಯರ ಎಫ್‌ 55 ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದ ಕರಮ್‌'ಜ್ಯೋತಿ 19.02 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಕಂಚಿನ ಪದಕ ಜಯಿಸಿದರು. ತೀರ್ಪು ಪ್ರಕಟಕ್ಕೂ ಮೊದಲು ಕರಮ್‌'ಜ್ಯೋತಿ 4ನೇ ಸ್ಥಾನ ಪಡೆದಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ, ಚೀನಾದ ಯಂಗ್ ಲಿವಾನ್ಸ್ ಅನರ್ಹರಾಗಿದ್ದು ಕರಮ್‌'ಜ್ಯೋತಿಗೆ ವರವಾಗಿ ಪರಿಣಮಿಸಿತು. ಹಾಗಾಗಿ ಭಾರತದ ಆಟಗಾರ್ತಿಗೆ ಕಂಚಿನ ಪದಕ ಜಯಿಸಲು ನೆರವಾಯಿತು.

ಪ್ರಸ್ತುತ 8ನೇ ಶ್ರೇಯಾಂಕ ಹೊಂದಿರುವ ದಲಾಲ್'ಗೆ, 2014ರಲ್ಲಿ ಬೀಜಿಂಗ್'ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಸಿಕ್ಕಿರಲಿಲ್ಲ. ಆದರೆ ಛಲ ಬಿಡದ ದಲಾಲ್ ತಮ್ಮ ಸ್ವಂತ ಖರ್ಚಿನಲ್ಲೇ ಕ್ರೀಡಾಕೂಟದಲ್ಲಿ ಭಾಗವಹಿಸಿ 2 ಕಂಚಿನ ಪದಕ ಗೆದ್ದುಕೊಂಡಿದ್ದರು. ಇನ್ನು 2016ರ ರಿಯೊ ಒಲಿಂಪಿಕ್ಸ್'ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದ ದಲಾಲ್, ಕಳೆದ ಮಾರ್ಚ್'ನಲ್ಲಿ ದುಬೈನಲ್ಲಿ ನಡೆದ ಐಪಿಸಿ ಇಂಟರ್'ನ್ಯಾಶನಲ್ ಅಥ್ಲೇಟಿಕ್ಸ್ ಗ್ರ್ಯಾಂಡ್'ಫಿಕ್ಸ್'ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಸಫಲವಾಗಿದ್ದರು.  

ಭಾರತಕ್ಕೆ ಮೂರನೇ ಪದಕ:

ಜಾವೆಲಿನ್ ಥ್ರೋನ ಎಫ್‌46 ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಸುಂದರ್‌ ಸಿಂಗ್ ಗುರ್ಜರ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರು. ಇದಾದ ಬಳಿಕ ಕ್ಲಬ್ ಥ್ರೋ ಎಫ್‌46 ವಿಭಾಗದಲ್ಲಿ ಅಮಿತ್ ಕುಮಾರ್ ಸರೊಹ್ ಬೆಳ್ಳಿ ಗೆದ್ದಿದ್ದರು. ಇದೀಗ ದಲಾಲ್ ಕಂಚು ಗೆಲ್ಲುವ ಮೂಲಕ ಭಾರತಕ್ಕೆ 3ನೇ ಪದಕ ತಂದಿತ್ತಿದ್ದಾರೆ.

click me!