
ಸಿಡ್ನಿ(ಏ.01): ಚೆಂಡು ವಿರೂಪ ಪ್ರಕರಣ ದಲ್ಲಿ ಸಿಕ್ಕಿದ್ದು 1 ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವಮಾನದ ಮೇಲೆ ಅವಮಾನ ಅನುಭವಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಪುಸ್ತಕ
ಮಳಿಗೆಯೊಂದರಲ್ಲಿ ಸ್ಮಿತ್ ಆತ್ಮ ಚರಿತ್ರೆ ‘ದಿ ಜರ್ನಿ ಸ್ಟೀವ್ ಸ್ಮಿತ್' ಬೆಲೆಯನ್ನು 24 ಆಸ್ಟ್ರೇಲಿಯ ಡಾಲರ್ (ಅಂದಾಜು 1200 ರು.)ರಿಂದ ಕೇವಲ 2 ಆಸ್ಟ್ರೇಲಿಯ ಡಾಲರ್ (ಅಂದಾಜು 100 ರು.)ಗೆ ಇಳಿಸಲಾಗಿದೆ. ಅದು ಪುಸ್ತಕವನ್ನು ‘ಕ್ಲಿಯರ್ ಸೇಲ್’ ವಿಭಾಗದಲ್ಲಿ ಇಡಲಾಗಿದೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಆದರೆ ಸ್ಮಿತ್ ಆತ್ಮ ಚರಿತ್ರೆಯ ಬೆಲೆ ಆನ್ ಲೈನ್'ನಲ್ಲಿ ಈಗಲೂ 24 ಡಾಲರ್ ಇದೆ. ಇತ್ತೀಚೆಗಷ್ಟೇ ಪುಸ್ತಕ ಮಳಿಗೆಯೊಂದು ಆತ್ಮ ಚರಿತ್ರೆಯನ್ನು ಅಪರಾಧ ವಿಭಾಗದಲ್ಲಿ ಇರಿಸಿದ್ದು ಭಾರೀ ಸುದ್ದಿಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.