ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ವಿರಾಟ್ ಕೊಹ್ಲಿ: ಕೋಚ್ ಲ್ಯಾಂಗರ್!

By Web DeskFirst Published Dec 24, 2018, 8:53 PM IST
Highlights

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ 1 ವರ್ಷಗಳ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾದ ವಿರಾಟ್ ಕೊಹ್ಲಿ ಎಂದು ವರ್ಣಿಸಲಾಗಿದೆ. ಆಸಿಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿಕೆ ವಿವರ ಇಲ್ಲಿದೆ.

ಮೆಲ್ಬೋರ್ನ್(ಡಿ.24): ಆಸ್ಟ್ರೇಲಿಯಾ ಮಾಜಿ ನಾಯಕ, ಬಾಲ್ ಟ್ಯಾಂಪರ್‌ನಿಂದ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾದ ವಿರಾಟ್ ಕೊಹ್ಲಿ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಬಣ್ಣಿಸಿದ್ದಾರೆ. ಸ್ಮಿತ್ ಪ್ರತಿ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ಇಷ್ಟೇ ಅಲ್ಲ ದಾಖಲೆಯ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸ್ಮಿತ್, ಆಸಿಸ್ ತಂಡದ ಕೊಹ್ಲಿ ಎಂದಿದ್ದಾರೆ.

ಇದನ್ನೂ ಓದಿ: ಟಿ20 ಸರಣಿಯಿಂದ ಮನೀಶ್ ಪಾಂಡೆಗೆ ಕೊಕ್-ಟ್ವಿಟರಿಗರ ಆಕ್ರೋಶ!

ಬಾಲ್ ಟ್ಯಾಂಪರಿಂಗ್ ಪ್ರಕರಣ ನಿಜಕ್ಕೂ ಸ್ಮಿತ್ ಪಾಲಿಗೆ ಕರಾಳವಾಗಿ ಪರಿಣಮಿಸಿತು. ಸ್ಮಿತ್ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲ, ನಾಯಕನಾಗಿಯೂ ಸೈಎನಿಸಿಕೊಂಡಿದ್ದಾರೆ. ಕೆಲ ವರ್ಷಗಳಲ್ಲೇ ವಿಶ್ವದ ಶ್ರೇಷ್ಠ ನಾಯಕ ಅನ್ನೋದನ್ನ ಸಾಬೀತು ಪಡಿಸಿದ್ದಾರೆ ಎಂದು ಲ್ಯಾಂಗರ್ ಹೇಳಿದ್ದಾರೆ.

ಇದನ್ನೂ ಓದಿ: ಕಿವಿಸ್, ಆಸಿಸ್ ODIs,T20 ಸರಣಿಗೆ ಟೀಂ ಇಂಡಿಯಾ ಪ್ರಕಟ!

ಆಸ್ಟ್ರೇಲಿಯಾ ತಂಡಕ್ಕೆ ಮರಳಲು ಸ್ಮಿತ್ ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ ಎಂದು ಲ್ಯಾಂಗರ್ ಹೇಳಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆಯಲಿದ್ದೇವೆ ಎಂದು ಲ್ಯಾಂಗರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಪಾತ್ರ ಮಾಡುವಾಸೆ ಎಂದ ಶಾರುಕ್’ಗೆ ಅನುಷ್ಕಾ ಹೇಳಿದ್ದೇನು..?

click me!