ಏಷ್ಯಾಕಪ್ 2018: ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ ಸುಲಭ ಗೆಲುವು

By Web DeskFirst Published Sep 16, 2018, 10:29 PM IST
Highlights

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಶುಭಾರಂಭ ಮಾಡಿದೆ. ಹಾಂಗ್ ಕಾಂಗ್ ವಿರುದ್ಧ ಹೋರಾಟ ನಡೆಸಿದ ಪಾಕಿಸ್ತಾನ ದಾಖಲೆಯ ಗೆಲುವು ಸಾಧಿಸಿದೆ. ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ದುಬೈ(ಸೆ.16): ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಸುಲಭ ಗೆಲುವು ದಾಖಲಿಸಿದೆ. ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕ್ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹಾಂಗ್ ಕಾಂಗ್ ಪಾಕ್ ದಾಳಿಗೆ ತತ್ತರಿಸಿತು. ಕಿಂಚಿತ್ ಶಾಹ 26 ಹಾಗೂ ಐಜಾಜ್ ಖಾನ್ 27 ರನ್ ಸಿಡಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿಲ್ಲ. ಹೀಗಾಗಿ ಹಾಂಗ್ ಕಾಂಗ್ 37.1 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಏಷ್ಯಾಕಪ್ ಟೂರ್ನಿಯಲ್ಲಿ ಹಾಂಗ್ ಕಾಂಗ್ ತಂಡವನ್ನ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಮಾಡಿದ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಯಿತು. 

117 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಫಕರ್ ಜಮಾನ್ 24 ರನ್ ಸಿಡಿಸಿ ಔಟಾದರು. ಬಾಬರ್ ಅಜಮ್ 33 ರನ್ ಸಿಡಿಸಿ ಔಟಾದರು.  ಆದರೆ ಇಮಾಮ್ ಉಲ್ ಹಕ್ ಅಜೇಯ 50  ಹಾಗೂ ಶೋಯಿಬ್ ಮಲ್ಲಿಕ್ ಅಜೇಯ 9 ರನ್‌ ಸಿಡಿಸೋ ಮೂಲಕ ಪಾಕಿಸ್ತಾನ 23.4 ಓವರ್‌ಗಳಲ್ಲಿ 8 ನಷ್ಟಕ್ಕೆ ಗುರಿ ತಲುಪಿತು.  

click me!