ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ಆಲ್ಕರಜ್ vs ಜೋಕೋ ಫೈನಲ್ ಕದನ ಇಂದು..!

By Kannadaprabha News  |  First Published Jul 14, 2024, 12:30 PM IST

2024ನೇ ಸಾಲಿನ ಬಹುನಿರೀಕ್ಷಿತ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಶಸ್ತಿಗಾಗಿ ಸರ್ಬಿಯಾದ ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಚ್ ಹಾಗೂ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಕಾದಾಡಲಿದ್ದಾರೆ.


ಲಂಡನ್: ಬಹುನಿರೀಕ್ಷಿತ ವಿಂಬಲ್ಡನ್ ಗ್ರಾನ್‌ಸ್ಲಾಂ ಟೆನಿಸ್ ಟೂರ್ನಿಯ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜು ಗೊಂಡಿದ್ದು, ಪ್ರಶಸ್ತಿಗಾಗಿ ಭಾನುವಾರ 7 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಹಾಗೂ ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ಪರಸ್ಪರ ಸೆಣಸಾಡಲಿದ್ದಾರೆ. 

ಈ ವರ್ಷ ಫ್ರೆಂಚ್ ಓಪನ್ ಟ್ರೋಫಿ ಗೆದ್ದಿರುವ ಸ್ಪೇನ್‌ನ 21 ಆಲ್ಕರಜ್, ಶನಿವಾರ ಸೆಮಿಫೈನಲ್‌ನಲ್ಲಿ 5ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡೈಡೆನ್ ರನ್ನು ಸೋಲಿಸಿ ಪ್ರಶಸ್ತಿ ಸುತ್ತಿರುತ್ತಾರೆ. ಜೋಕೋವಿಚ್‌ರನ್ನೇ ಸೋಲಿಸಿ ಟ್ರೋಫಿ ಗೆದ್ದಿದ್ದ ಆಲ್ಕರಜ್, ಈ ಬಾರಿ ಮತ್ತೊಮ್ಮೆ ದಿಗ್ಗಜ ಟೆನಿಸಿಗನ ಸೋಲಿಸುವ ಕಾತರದ ಲ್ಲಿದ್ದಾರೆ. ಈ ಮೂಲಕ ಗ್ರಾನ್‌ಸ್ಲಾಂ ಪ್ರಶಸ್ತಿ ಸಂಖ್ಯೆಯನ್ನು 4ಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದಾರೆ.

Latest Videos

undefined

ಭಾರತ vs ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..! ಇಲ್ಲಿದೆ ಹೊಸ ಅಪ್‌ಡೇಟ್

ಮತ್ತೊಂದೆಡೆ ಜೋಕೋ ಸತತ 6ನೇ ಹಾಗೂ ಒಟ್ಟಾರೆ 10ನೇಬಾರಿ ವಿಂಬಲ್ಡನ್ ಫೈನಲ್ ಆಡುತ್ತಿದ್ದು, 8ನೇ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸೆಮಿ ಫೈನಲ್‌ನಲ್ಲಿ ವಿಶ್ವ ನಂ.2 ಜೋಕೋ, ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ 6-4, 7-6(1/2), 6-4 ಸೆಟ್‌ಗಳಲ್ಲಿ ಗೆದ್ದಿದ್ದರು. 

ಗ್ಯಾನ್‌ಸ್ಲಾಂ ಫೈನಲ್‌ನಲ್ಲಿ ಅಲ್ಕರಜ್ ಅಜೇಯ ಸಾಧನೆ

ಆಲ್ಕರಜ್ ಈ ವರೆಗೂ 3 ಬಾರಿ ಗ್ಯಾನ್‌ಸ್ಲಾಂ ಫೈನಲ್ ಆಡಿದ್ದಾರೆ. 3 ಬಾರಿ ಟ್ರೋಫಿ ಗೆದ್ದಿದ್ದಾರೆ. 2022ರ ಯುಎಸ್ ಓಪನ್, 2023ರ ವಿಂಬಲ್ಡನ್ ಹಾಗೂ 2024ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಎನಿಸಿಕೊಂಡಿದ್ದಾರೆ.

ವಾರೆವ್ಹಾ...ವಿಂಬಲ್ಡನ್ ಗೆದ್ದ ಕ್ರೇಜಿಕೋವಾ! 2ನೇ ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದ ಚೆಕ್‌ ಗಣರಾಜ್ಯದ ಟೆನಿಸ್ ತಾರೆ

37 ವರ್ಷದ ಜೋಕೋಗೆ 37ನೇ ಗ್ಯಾನ್‌ಸ್ಲಾಂ ಫೈನಲ್!

37 ವರ್ಷದ ಜೋಕೋವಿಚ್ ದಾಖಲೆಯ 37ನೇ ಗ್ಯಾನ್‌ಸ್ಟಾಂ ಫೈನಲ್ ಆಡಲು ಸಜ್ಜಾಗಿದ್ದಾರೆ. ಈ ವರೆಗೂ 24 ಬಾರಿ ಗ್ಯಾನ್ ಸ್ಲಾಂ ಗೆದ್ದಿರುವ ಅವರು 12 ಬಾರಿ ರನ್ನರ್-ಅಪ್ ಆಗಿದ್ದಾರೆ. 7 ಬಾರಿ ವಿಂಬಲ್ಡನ್, 10 ಬಾರಿ ಆಸ್ಟ್ರೇಲಿಯನ್, 3 ಬಾರಿ ಫ್ರೆಂಚ್, 4 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ. ವಿಂಬಲ್ಡನ್ ನಲ್ಲಿ 2 ಬಾರಿ(2013, 2023) ಫೈನಲ್‌ನಲ್ಲಿ ಸೋತಿದ್ದಾರೆ.

ಪಂದ್ಯ: ಸಂಜೆ 6.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್

click me!