13 ನೋ ಬಾಲ್ ಹಾಕಿದರೂ ಅಂಪೈರ್‌ಗೆ ಗೊತ್ತಾಗಲೇ ಇಲ್ಲ!

By Web DeskFirst Published Nov 26, 2018, 7:47 PM IST
Highlights

ರೋಚಕ ಪಂದ್ಯದಲ್ಲಿ ಒಂದೆರಡು ನೋ ಬಾಲ್ ಸಾಮಾನ್ಯ. ಇನ್ನು ಟೆಸ್ಟ್ ಪಂದ್ಯದಲ್ಲೂ ಅಷ್ಟೇ. ಆದರೆ ಶ್ರೀಲಂಕಾ ಸ್ಪಿನ್ನರ್ ಬರೋಬ್ಬರಿ 13 ನೋ ಬಾಲ್ ಹಾಕಿ, ಅಂಪೈರ್‌ನಿಂದ ಗುಡ್ ಬಾಲ್ ಸರ್ಟಿಫಿಕೆಟ್  ಪಡೆದಿದ್ದಾರೆ.

ಕೊಲೊಂಬೊ(ನ.26): ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ನೋ ಬಾಲ್‌ಗಳದ್ದೇ ಆರ್ಭಟ. ಆದರೆ ಅಂಪೈರ್‌ಗೆ ಮಾತ್ರ ಗೊತ್ತೇ ಆಗಲಿಲ್ಲ ಅನ್ನೋದು ವಿಪರ್ಯಾಸ. ಪಂದ್ಯದ ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ ಸ್ಪಿನ್ನರ್ ಲಕ್ಷನ್ ಸಂದಕನ್ ನೋಬಾಲ್ ಎಕ್ಸ್‌ಪರ್ಟ್ ಅನ್ನೋ ಕುಖ್ಯಾತಿಗೆ ಗುರಿಯಾಗಿದ್ದಾರೆ.

ಸಂದಕನ್ ಬರೋಬ್ಬರಿ 13 ನೋಬಾಲ್ ಹಾಕಿದ್ದಾರೆ. ಆದರೆ ಅಂಪೈರ್‌ಗೆ ಮಾತ್ರ ಗೊತ್ತೇ ಆಗಲಿಲ್ಲ. ಮೈದಾನದಲ್ಲಿ ಅಳವಡಿಸಿರುವ ಕ್ಯಾಮರದಲ್ಲಿ ಇದು ಸೆರೆಯಾಗಿದೆ. ಇಂಗ್ಲೆಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಎರಡು ಬಾರಿ ಔಟಾದಾಗ ಅದು ನೋ ಬಾಲ್ ಆಗಿತ್ತು. ಇದು ರಿವ್ಯೂವ್ ಅಂಪೈರ್ ಪರೀಕ್ಷಿಸಿ ಬಳಿಕ ನಾಟೌಟ್ ಎಂದು ತೀರ್ಪು ನೀಡಿದ್ದರು. ಹೀಗಾಗಿ ಸ್ಟೋಕ್ಸ್ ಬಚಾವ್ ಆಗಿದ್ದರು.

ಸಂದಕನ್ ಪದೇ ಪದೇ ಲಕ್ಷ್ಮಣ ಗೆರೆ ದಾಟುತ್ತಿದ್ದರೂ ಅಂಪೈರ್‌ ಗಮನಹರಿಸಲಿಲ್ಲ. ದಿನದಾಟದಲ್ಲಿ ಸಂದಕನ್ ಶೇಕಡಾ 40 ರಷ್ಟು ಎಸೆತಗಳು ನೋ ಬಾಲ್ ಆಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲೂ ಸಂದಕನ್ ನೋ ಬಾಲ್ ಭಾರಿ ಚರ್ಚೆಯಾಗಿದೆ.

click me!