ಹೊಸ ಶೈಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಧವನ್-ಅಭಿಮಾನಿಗಳಿಂದ ಮೆಚ್ಚುಗೆ!

Published : Nov 26, 2018, 05:34 PM IST
ಹೊಸ ಶೈಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಧವನ್-ಅಭಿಮಾನಿಗಳಿಂದ ಮೆಚ್ಚುಗೆ!

ಸಾರಾಂಶ

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್  ಸೆಲೆಬ್ರೇಷನ್ ಯಾವುತ್ತೂ ಡಿಫ್ರೆಂಟ್ ಆಗಿರುತ್ತೆ. ಮೈದಾನದಲ್ಲಿ ಯಾವುತ್ತೂ ಥೈ ಫೈ ನೀಡುವ ಧವನ್ ಕೆಲವೊಮ್ಮೆ ಪಂಜಾಬಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೀಗ ಧವನ್ ಪ್ರಶಸ್ತಿ ಸ್ವೀಕರಿಸೋ ವೇಳೆ ಹೊಸ ಶೈಲಿ ಮಾಡಿದ್ದಾರೆ.

ಸಿಡ್ನಿ(ನ.26): ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನ ಭಾರತ 1-1 ಅಂತರದಲ್ಲಿ ಸಮಬಲಗೊಳಿಸಿದೆ. ಅಂತಿಮ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡೋ ಮೂಲಕ ಭಾರತ ಗೆಲುವು ಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ  ಅದ್ಬುತ ಪ್ರದರ್ಶನ ನೀಡಿದ ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೆ ಧವನ್ ಪ್ರಶಸ್ತಿ ಸ್ವೀಕರಿಸಿದ ರೀತಿ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ತಂದಿದೆ.

ಪಂದ್ಯದ  ಬಳಿಕ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಧವನ್ ವಿಶಿಷ್ಠ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದರು. ಪ್ರಶಸ್ತಿ ಸ್ವೀಕರಿಸೋ ಮೊದಲು ಟ್ರೋಫಿ ಹಿಡಿದು ನಿಂತಿದ್ದ ಹುಡುಗನನ್ನ ಎತ್ತಿ ಸಂಭ್ರಮಿಸಿದರು. ಇಷ್ಟೇ ಅಲ್ಲ ನೆರೆದಿದ್ದ ಅಭಿಮಾನಿಗಳಿಗೆ ಥೈ ಫೈ ನೀಡಿದರು.

 

 

ಧವನ್ ಡಿಫ್ರೆಂಟ್ ಶೈಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ. ಸರಣಿಯ 2 ಇನ್ನಿಂಗ್ಸ್‌ಗಳಿಂದ ಧವನ್ 117 ರನ್ ಸಿಡಿಸಿದ್ದರು. ಸದ್ಯ ಧವನ್ ತವರಿಗೆ ಮರಳಿದ್ದಾರೆ. ಟೆಸ್ಟ್ ತಂಡದಲ್ಲಿ ಧವನ್ ಸ್ಥಾನ ಪಡೆದಿಲ್ಲ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?