ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ಶಾಕ್-ಸಿಎಫ್ಒ ಅರೆಸ್ಟ್!

By Web DeskFirst Published Oct 23, 2018, 12:56 PM IST
Highlights

ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಮಸ್ಯೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆಯ್ಕೆ ಸಮಿತಿ ಮುಖ್ಯಸ್ಥ ಜಯಸೂರ್ಯ ಪ್ರಕರಣ ಕಾವು ಆರುವ ಮುನ್ನವೇ ಇದೀಗ ಲಂಕಾ ಕ್ರಿಕೆಟ್ ಮಂಡಳಿಯ ಪ್ರಮುಖ ಅಧಿಕಾರಿಯ ಬಂಧನವಾಗಿದೆ.

ಕೊಲೊಂಬೊ(ಅ.23): ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಸರಣಿಗೆ ಲಂಕಾ ತಂಡ ಸಜ್ಜಾಗಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಮತ್ತೊಂದು ವಿಕೆಟ್ ಪತನವಾಗಿದೆ. ಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿ ನಂದಿಕಾ ದಿಸ್ಸಾನಾಯಕೆ ಅರೆಸ್ಟ್ ಆಗಿದ್ದಾರೆ.  

ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿ ಮಾಧ್ಯಮ ಹಕ್ಕು ವಿತರಣೆ ಒಪ್ಪಂದದಲ್ಲಿ ಅವ್ಯವಹಾರ ಎಸೆಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಬರೋಬ್ಬರಿ 40 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಅನ್ನೋ ಆರೋಪದಲ್ಲಿ ನಂದಿಕಾ ಅವರನ್ನ ಬಂಧಿಸಲಾಗಿದೆ.

ಇತ್ತೀಚೆಗಷ್ಟೇ ಭ್ರಷ್ಟಾಚಾರ ವಿರುದ್ದದ ತನಿಖೆಗೆ ಸಹಕರಿಸಿದ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸನತ್ ಜಯಸೂರ್ಯ ಮೇಲೆ ಐಸಿಸಿ ಗರಂ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಹಣಕಾಸು ಮುಖ್ಯಸ್ಥರೇ ಅರೆಸ್ಟ್ ಆಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದೆ.

click me!
Last Updated Oct 23, 2018, 12:56 PM IST
click me!