
ವಿಶಾಖಪಟ್ಟಣಂ(ಅ.23): ಕ್ರಿಕೆಟ್ ಜಗತ್ತಿನ ಟ್ರೆಂಡಿಂಗ್ ಸ್ಟೈಲ್ ಪರಿಚಯಿಸಿದ ಕೀರ್ತಿ ಎಂ.ಎಸ್.ಧೋನಿಗೆ ಸಲ್ಲುತ್ತೆ. ಉದ್ದ ಕೂದಲಿನೊಂದಿಗೆ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಧೋನಿ, ಬಳಿಕ ಶಾರ್ಟ್, ಸ್ಪೈಕ್, ಮೊಹವಾಕ್, ಟ್ರಿಮ್ ಸೇರಿದಂತೆ ಹಲವು ಶೈಲಿಯಲ್ಲಿ ಧೋನಿ ಮಿಂಚಿದ್ದಾರೆ. ಇತ್ತೀಚೆಗೆ ಸ್ಟೈಲ್‌ನಲ್ಲಿ ಸೈಲೆಂಟ್ ಆಗಿದ್ದ ಧೋನಿ ಇದೀಗ ಮತ್ತೆ ಹೊಸ ಸ್ಟೈಲ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಧೋನಿ ಹೊಸ ಬಿಯರ್ಡ್(ಗಡ್ಡ) ಸ್ಟೈಲ್ ಮಾಡಿದ್ದಾರೆ. ಇಷ್ಟು ದಿನ ಕೂದಲಿಗೆ ಶೇಪ್ ಕೊಡುತ್ತಿದ್ದ ಧೋನಿ ಇದೇ ಮೊದಲ ಬಾರಿಗೆ ಬಿಯರ್ಡ್ ಸ್ಟೈಲ್ ಮಾಡಿದ್ದಾರೆ. ಈ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಎಂ.ಎಸ್ ಧೋನಿ ಲೈಟ್ ಬಿಯರ್ಡ್ ಇದೀಗ ಟ್ರೆಂಡಿಂಗ್ ಆಗಿದೆ. ಹೊಸ ಸ್ಟೈಲ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯ ಗೆಲುವಿನ ಬಳಿಕ ಇದೀಗ ಟೀಂ ಇಂಡಿಯಾ 2ನೇ ಪಂದ್ಯಕ್ಕೆ ರೆಡಿಯಾಗಿದೆ. ನಾಳಿನ ಪಂದ್ಯದಲ್ಲಿ ಧೋನಿ ಇನ್ಯಾವ ಶೈಲಿಯಲ್ಲಿ ಕಣಕ್ಕಿಳಿಯುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.