ಭಾರತ ಪ್ರವಾಸಕ್ಕೆ ರೆಡಿಯಾದ ಲಂಕಾ; ಪ್ರಮುಖ ಆಟಗಾರನನ್ನೇ ಕೈಬಿಟ್ಟ ಲಂಕಾ..!

By Suvarna Web DeskFirst Published Nov 6, 2017, 6:52 PM IST
Highlights

ಶ್ರೀಲಂಕಾ ಇದುವರಗೂ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಲಂಕಾ ಕಡೆಯ ಬಾರಿ 2009ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಆ ವೇಳೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿ 2-0 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು.

ಕೊಲಂಬೊ(ನ.06): ನವೆಂಬರ್ 16ರಿಂದ ಆರಂಭವಾಗಲಿರುವ ಭಾರತ ಪ್ರವಾಸಕ್ಕೆ 15 ಆಟಗಾರರನ್ನೊಳಗೊಂಡ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ದಿನೇಶ್ ಚಾಂಡಿಮಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ವಿರುದ್ಧ ಶ್ರೀಲಂಕಾ 3 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ನ.16ರಂದು ಕೋಲ್ಕತಾದ ಈಡನ್ ಗಾರ್ಡನ್‌'ನಲ್ಲಿ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ.

ಮ್ಯಾಥ್ಯೂಸ್ ವಾಪಸ್: ಗಾಯದ ಸಮಸ್ಯೆಯಿಂದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದ ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ. ಇನ್ನು ಯುಎಇಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿದ್ದ ಆರಂಭಿಕ ಆಟಗಾರ ಕೌಶಲ್ ಸಿಲ್ವಾ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಲಂಕಾದಿಂದ ಅಚ್ಚರಿ: 2015ರಲ್ಲಿ ಟೆಸ್ಟ್‌'ಗೆ ಪರ್ದಾಪಣೆ ಮಾಡಿದ ಬಳಿಕ ತಂಡದ ಅವಿಭಾಜ್ಯ ಅಂಗವಾಗಿದ್ದ ಕುಶಾಲ್ ಮೆಂಡಿಸ್‌'ರನ್ನು ತಂಡದಿಂದ ಕೈ ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಕುಮಾರ್ ಸಂಗಕ್ಕರ ಹಾಗೂ ಮಹೇಲಾ ಜಯವರ್ಧನೆ ನಿವೃತ್ತಿ ಘೋಷಿಸಿದ ಬಳಿಕ ಮೆಂಡಿಸ್ ಲಂಕಾದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದರು. ಇನ್ನು ಸತತ 22 ಟೆಸ್ಟ್ ಪಂದ್ಯಗಳ ಬಳಿಕ ಇದೇ ಮೊದಲ ಬಾರಿ ಮೆಂಡಿಸ್ ತಂಡದಿಂದ ಹೊರಬಿದ್ದಿದ್ದಾರೆ. ಬುಧವಾರ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಲಿದೆ.

ಶ್ರೀಲಂಕಾ ಇದುವರಗೂ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಲಂಕಾ ಕಡೆಯ ಬಾರಿ 2009ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಆ ವೇಳೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿ 2-0 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು.

ತಂಡ: ದಿನೇಶ್ ಚಾಂಡಿಮಲ್ (ನಾಯಕ), ದಿಮುತ್ ಕರುಣರತ್ನೆ, ಧನಂಜಯ್ ಡಿ ಸಿಲ್ವಾ, ಸದೀರಾ ಸಮರವಿಕ್ರಮ, ಏಂಜಲೋ ಮ್ಯಾಥ್ಯೂಸ್, ಲಹಿರು ತಿರುಮನ್ನೆ, ರಂಗಾನ ಹೆರಾತ್, ಸುರಂಗ ಲಕ್ಮಲ್, ದಿಲ್ರುವನ್ ಪೆರೇರಾ, ಲಹಿರು ಗಾಮಗೆ, ಲಕ್ಷನ್ ಸಂದಕನ್, ವಿಶ್ವ ಫೆರ್ನಾಂಡೊ, ದಸುನ್ ಶನಕ, ನಿರೊಶನ್ ಡಿಕ್'ವೆಲ್ಲಾ, ರೋಶನ್ ಸಿಲ್ವಾ

click me!