ಸೆಹ್ವಾಗ್'ಗೆ ಅವರದ್ದೇ ಕಷಾಯದ ರುಚಿ ತೋರಿಸಿದ ಟೇಲರ್..! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

Published : Nov 06, 2017, 05:44 PM ISTUpdated : Apr 11, 2018, 01:04 PM IST
ಸೆಹ್ವಾಗ್'ಗೆ ಅವರದ್ದೇ ಕಷಾಯದ ರುಚಿ ತೋರಿಸಿದ ಟೇಲರ್..! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಸಾರಾಂಶ

ಇದೀಗ ರಾಜ್'ಕೋಟ್'ನಲ್ಲಿ ನಡೆದ 2ನೇ ಟಿ20 ಪಂದ್ಯದ ಗೆಲುವಿನ ಬಳಿಕ ಸೆಹ್ವಾಗ್'ಗೆ ಟಾಂಗ್ ನೀಡಿರುವ ಟೇಲರ್, 'ರಾಜ್'ಕೋಟ್ ಪಂದ್ಯದ ಬಳಿಕ (ದರ್ಜಿ) ಟೈಲರ್ ಅಂಗಡಿ ಮುಚ್ಚಿದೆ, ಮುಂದಿನ ಹೊಲಿಗೆ ತ್ರಿವೆಂಡ್ರಂನಲ್ಲಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣವಾದ ಟ್ವಿಟರ್ ಹಾಗೂ ಇನ್'ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ.

ನವದೆಹಲಿ(ನ.06): 'ಮುಲ್ತಾನಿನ ಸುಲ್ತಾನ' ಖ್ಯಾತಿಯ ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್'ಗೆ ಮತ್ತೊಮ್ಮೆ ಕಾಲೆಳೆಯುವಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಯಶಸ್ವಿಯಾಗಿದ್ದಾರೆ.

ಹೌದು, ಕ್ರಿಕೆಟ್'ಗೆ ವಿದಾಯ ಹೇಳಿದ ಬಳಿಕ ವಿರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣವಾದ ಟ್ವಿಟರ್'ನಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಕೆಲವೊಮ್ಮೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರ ಕಾಲೆಳೆಯುವ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಆದರೆ ದೀಪಾವಳಿಯ ಬಳಿಕ ಸೆಹ್ವಾಗ್ ಟೈಮ್ ಸ್ವಲ್ಪ ಕೈಕೊಟ್ಟಿರುವ ಹಾಗೆ ಕಾಣುತ್ತದೆ.

ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ರಾಸ್ ಟೇಲರ್ ಭರ್ಜರಿ 95 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಈ ವೇಳೆ ಟ್ವೀಟ್ ಮಾಡಿದ್ದ ಸೆಹ್ವಾಗ್, ' ಟೇಲರ್'ಗೆ(ದರ್ಜಿ)  ದೀಪಾವಳಿಯ ಒತ್ತಡದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ರಾಸ್ ಟೇಲರ್ ಹಿಂದಿಯಲ್ಲೇ ಧನ್ಯವಾದ ಹೇಳಿ, ಮುಂದಿನ ಸರಿ ಆದಷ್ಟು ಬೇಗ ಆರ್ಡರ್ ಕೊಡಿ, ಮುಂದಿನ ದೀಪಾವಳಿ ಆರಂಭವಾಗುವುದರೊಳಗಾಗಿ ಆರ್ಡರ್ ಪೂರೈಸುವುದಾಗಿ ಸೆಹ್ವಾಗ್'ಗೆ ಟಾಂಗ್ ನೀಡಿದ್ದರು.

ಇದೀಗ ರಾಜ್'ಕೋಟ್'ನಲ್ಲಿ ನಡೆದ 2ನೇ ಟಿ20 ಪಂದ್ಯದ ಗೆಲುವಿನ ಬಳಿಕ ಸೆಹ್ವಾಗ್'ಗೆ ಟಾಂಗ್ ನೀಡಿರುವ ಟೇಲರ್, 'ರಾಜ್'ಕೋಟ್ ಪಂದ್ಯದ ಬಳಿಕ (ದರ್ಜಿ) ಟೈಲರ್ ಅಂಗಡಿ ಮುಚ್ಚಿದೆ, ಮುಂದಿನ ಹೊಲಿಗೆ ತ್ರಿವೆಂಡ್ರಂನಲ್ಲಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣವಾದ ಟ್ವಿಟರ್ ಹಾಗೂ ಇನ್'ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ.

ರಾಜ್'ಕೋಟ್'ನಲ್ಲಿ ವಿರಾಟ್ ಕೊಹ್ಲಿ ಪಡೆಯು ನ್ಯೂಜಿಲೆಂಡ್ ವಿರುದ್ಧ ಶರಣಾಗಿತ್ತು. ಈ ಮೂಲಕ ನ್ಯೂಜಿಲೆಂಡ್ ಟಿ20 ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಇದೀಗ ಮೂರನೇ ಹಾಗೂ ಸರಣಿಯ ನಿರ್ಣಾಯಕ ಪಂದ್ಯವು ಮಂಗಳವಾರ ತ್ರಿವೆಂಡ್ರಂನಲ್ಲಿ ನಡೆಯಲಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!