ಶ್ರೀಲಂಕಾ ಕ್ರಿಕೆಟ್ ಕ್ಯಾಪ್ಟನ್ ಅರೆಸ್ಟ್..!

By Web DeskFirst Published Apr 1, 2019, 12:27 PM IST
Highlights

ಏಕದಿನ ವಿಶ್ವಕಪ್ ತಂಡಕ್ಕೆ ಯಾರನ್ನು ನಾಯಕನನ್ನಾಗಿ ಮಾಡಬೇಕು ಎಂದು ಲಂಕಾ ಕ್ರಿಕೆಟ್ ಸಂಸ್ಥೆ ಹುಡುಕಾಟ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿರುವುದರಿಂದ ದಿಮುತ್‌ಗೆ ನಾಯಕತ್ವ ಕೈತಪ್ಪುವ ಸಾಧ್ಯತೆ ಇದೆ. ಅಷ್ಟಕ್ಕೂ ಏನಿದು ಸ್ಟೋರಿ ನೀವೇ ನೋಡಿ.

ಕೊಲೊಂಬೊ[ಏ.01]: ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ್ ಕರುಣರತ್ನೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದಾರೆ. ದಿಮುತ್ ಕಾರು ಅಪಘಾತಕ್ಕೀಡಾದಾಗ ಪರಿಶೀಲನೆ ನಡೆಸುವ ವೇಳೆ ಅವರು ಮದ್ಯ ಸೇವಿಸಿರುವುದು ಪೊಲೀಸರಿಗೆ ತಿಳಿದಿದೆ. 

ಸೌತ್ಆಫ್ರಿಕಾದಲ್ಲಿ ಟೆಸ್ಟ್ ಸರಣಿಗೆ ಗೆದ್ದ ಏಷ್ಯಾದ ಮೊದಲ ತಂಡ ಶ್ರೀಲಂಕಾ!

ಈ ಘಟನೆಯಲ್ಲಿ ಆಟೋ ರಿಕ್ಷಾ ಚಾಲಕನಿಗೆ ಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನಕ್ಕೊಳಗಾಗಿದ್ದ ದಿಮುತ್, ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಆದರೆ ಸೋಮವಾರ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.  ಏಕದಿನ ವಿಶ್ವಕಪ್ ತಂಡಕ್ಕೆ ಯಾರನ್ನು ನಾಯಕನನ್ನಾಗಿ ಮಾಡಬೇಕು ಎಂದು ಲಂಕಾ ಕ್ರಿಕೆಟ್ ಸಂಸ್ಥೆ ಹುಡುಕಾಟ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿರುವುದರಿಂದ ದಿಮುತ್‌ಗೆ ನಾಯಕತ್ವ ಕೈತಪ್ಪುವ ಸಾಧ್ಯತೆ ಇದೆ.

ಕಳೆದ ತಿಂಗಳಷ್ಟೇ ದಿಮುತ್ ಕರುಣರತ್ನೆ ನಾಯಕತ್ವದಲ್ಲಿ ಶ್ರೀಲಂಕಾ ತಂಡವು ದಕ್ಷಿಣ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. ಈ ಮೂಲಕ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾದ ತಂಡ ಎನ್ನುವ ಕೀರ್ತಿಗೂ ಶ್ರೀಲಂಕಾ ಪಾತ್ರವಾಗಿತ್ತು. ಎಡಗೈ ಬ್ಯಾಟ್ಸ್’ಮನ್ ದಿಮುತ್ ಕರುಣರತ್ನೆ ಲಂಕಾ ಪರ 60 ಟೆಸ್ಟ್ ಪಂದ್ಯಗಳನ್ನು ಪ್ರತಿನಿಧಿಸಿದ್ದಾರೆ.

 

click me!