ಮತ್ತೆ ಭುಗಿಲೆದ್ದಿದೆ ಮ್ಯಾಚ್ ಫಿಕ್ಸಿಂಗ್- ಶ್ರೀಲಂಕಾ ಕೋಚ್ ಅಮಾನತು!

By Web Desk  |  First Published Oct 31, 2018, 9:30 PM IST

ಕ್ರಿಕೆಟ್  ಕಳ್ಳಾಟ ಮತ್ತೆ ಕಾಣಿಸಿಕೊಂಡಿದೆ. ಇದೀಗ ಶ್ರೀಲಂಕಾ ಬೌಲಿಂಗ್ ಕೋಚ್ ಫಿಕ್ಸಿಂಗ್ ಆರೋಪದಡಿ ಅಮಾನತ್ತಾಗಿದ್ದಾರೆ. ಅಷ್ಟಕ್ಕೂ ಐಸಿಸಿ ದಿಢೀರ್ ಈ ನಿರ್ಧಾರ ಕೈಗೊಂಡಿದ್ದೇಕೆ? ಇಲ್ಲಿದೆ.


ಕೊಲೊಂಬೊ(ಅ.31): ಕ್ರಿಕೆಟ್‌ನಿಂದ ಫಿಕ್ಸಿಂಗ್ ದೂರವಿಡಲು ಐಸಿಸಿ ಅವಿರತ ಪ್ರಯತ್ನ ಮಾಡುತ್ತಿದ್ದರೂ ಮತ್ತೆ ಮತ್ತೆ ಆರೋಪಗಳು ಕೇಳಿಬರುತ್ತಿದೆ. ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಶ್ರೀಲಂಕಾ ಬೌಲಿಂಗ್ ಕೋಚ್ ನುವಾನ್ ಜೋಯ್ಸಾ ಅಮಾನತ್ತಾಗಿದ್ದಾರೆ.

ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 90 ಏಕದಿನ ಪಂದ್ಯ ಆಡಿರುವ ನುವಾನ್ ಜೋಯ್ಸಾ, ಲಂಕಾ ತಂಡ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜೋಯ್ಸಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಗಂಭೀರ ಆರೋಪ ಕೇಳಿಬಂದಿದೆ. ಅಂತಾರಾಷ್ಟ್ರೀಯ ಪಂದ್ಯವನ್ನ ಫಿಕ್ಸ್ ಮಾಡಿದ, ಆಟಗಾರರನ್ನ ಫಿಕ್ಸಿಂಗ್‌ಗೆ ಪ್ರಚೋದನೆ ಮಾಡಿದ ಹಾಗೂ ಫಿಕ್ಸಿಂಗ್‌ಗೆ ಅನುವು ಮಾಡಿಕೊಟ್ಟ ಆರೋಪದಡಿ ಜೋಯ್ಸಾ ಅವರನ್ನ ಐಸಿಸಿ ಅಮಾನತು ಮಾಡಿದೆ.

Tap to resize

Latest Videos

 

The ICC has charged Sri Lankan bowling coach Nuwan Zoysa with three counts of breaching the ICC Anti-Corruption Code. He has been provisionally suspended with immediate effect. https://t.co/ixMOVaPY66 pic.twitter.com/YtEAKvWBzl

— ICC (@ICC)

 

ನವೆಂಬರ್ 1 ರಿಂದ 14 ದಿನಗಳವರೆಗೆ ಜೋಯ್ಸಾ ಅವರಿಗೆ ಉತ್ತರಿಸಲು ಸಮಯವಕಾಶ ನೀಡಿದೆ. ಶ್ರೀಲಂಕಾ ಕ್ರಿಕೆಟ್ ಮೇಲೆ ಕೇಳಿಬಂದಿರು ಫಿಕ್ಸಿಂಗ್ ಆರೋಪವನ್ನ ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತನಿಖೆ ನಡೆಸುತ್ತಿದೆ.

ತನಿಖೆಗೆ ಸಹಕರಿಸಿದ ಮಾಜಿ ನಾಯಕ ಸನತ್ ಜಯಸೂರ್ಯಗೆ ಐಸಿಸಿ ಖಡಕ್ ಎಚ್ಚರಿಕೆಯನ್ನ ನೀಡಿತ್ತು. ಇದೀಗ ಬೌಲಿಂಗ್ ಕೋಚ್ ಅಮಾನತಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

click me!