ಇಂಡೋ-ವಿಂಡೀಸ್ ಅಂತಿಮ ಏಕದಿನ-ಯಾರಿಗೆ ಸರಣಿ?

By Web DeskFirst Published Oct 31, 2018, 7:57 PM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಪಂದ್ಯ ಕುತೂಹಲ ಇದೀಗ ಅಂತಿಮ ಪಂದ್ಯದತ್ತ ನೆಟ್ಟಿದೆ.  2-1 ಅಂತರದಲ್ಲಿ ಮುನ್ನಡೆ ಸಾಧಿಸಿರುವ  ಸರಣಿ ಗೆಲುವಿಗೆ ಹೊಂಚು ಹಾಕಿದೆ. ಆದರೆ ವಿಂಡೀಸ್ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದೆ. 

ತಿರುವನಂತಪುರಂ(ಅ.31): ವೆಸ್ಟ್ ಇಂಡೀಸ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿ ಅಂತಿಮ ಘಟ್ಟ ತಲುಪಿದೆ. ನಾಳೆ(ನ.01)ರಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯ ಗೆದ್ದು ಸರಣಿ ಗೆಲುವಿಗೆ ಟೀಂ ಇಂಡಿಯಾ ಸಜ್ಜಾಗಿದ್ದರೆ, ಅತ್ತ ವಿಂಡೀಸ್ ಸರಣಿ ಉಳಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.

4ನೇ ಏಕದಿನ ಪಂದ್ಯದಲ್ಲಿ224 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇದೀಗ 5ನೇ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. 2-1 ಅಂತರದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ತಿರುವನಂತಪರುಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಏಕದಿನ ಪಂದ್ಯ ಆಯೋಜಿಸುತ್ತಿದೆ. ಹೀಗಾಗಿ ಪಿಚ್ ಕುತೂಹಲ ಉಭಯ ತಂಡಗಳಿಗೂ ಇದೆ.

ತಂಡದಲ್ಲಿ ಕೆಲ ಬದಲಾವಣೆ ಮಾಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ.  ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಸೋ ಸಾಧ್ಯತೆ ಇದೆ. ಆದರೆ ಮಹತ್ವದ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಬದಲಾವಣೆ ಮನಸ್ಸು ಮಾಡಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.

ರೋಹಿತ್ ಬದಲು ರಾಹುಲ್ ಕಣಕ್ಕಿಳಿದರೆ, ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇನ್ನುಳಿದಂತೆ ನಾಯಕ ವಿರಾಟ್ ಕೊಹ್ಲಿ ಅಂಬಾಟಿ ರಾಯುಡು, ಎಂ.ಎಸ್.ಧೋನಿ, ಕೇದಾರ್ ಜಾದವ್ , ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಖಲೀಲ್ ಅಹಮ್ಮದ್ ಸ್ಥಾನ ಪಡೆಯಲಿದ್ದಾರೆ.

click me!