
ಕರ್ನಾಟಕ ಬೌಲರ್ ಶ್ರೀನಾಥ್ ಅರವಿಂದ್ ಎಲ್ಲಾ ಮಾದರಿಯ ದೇಶಿ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ. ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್ ಆದ ಬೆನ್ನಲ್ಲೇ ಅರವಿಂದ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಹಲವು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಎಡಗೈ ಬೌಲರ್ ಆಗಿ ಗುರುತಿಸಿಕೊಂಡಿದ್ದ ಅರವಿಂದ್, ಐಪಿಎಲ್'ನಲ್ಲಿ 38 ಪಂದ್ಯಗಳನ್ನಾಡಿ 45 ವಿಕೆಟ್ ಕಬಳಿಸಿದ್ದರು. ಈ ಬಾರಿ 50 ಲಕ್ಷ ಮೂಲಬೆಲೆ ಹೊಂದಿದ್ದ ಅರವಿಂದ್ ಅವರನ್ನು ಐಪಿಎಲ್ ಆಟಗಾರರ ಹರಾಜಿನಲ್ಲಿ ಯಾವೊಬ್ಬ ಪ್ರಾಂಚೈಸಿಯೂ ಖರೀದಿಸಲು ಮನಸು ಮಾಡಿರಲಿಲ್ಲ. ಇನ್ನು 33 ವರ್ಷದ ಅರವಿಂದ್ 56 ಪ್ರಥಮ ದರ್ಜೆ ಪಂದ್ಯಗಳಲ್ಲಿ 186 ವಿಕೆಟ್ ಹಾಗೂ 41 ಲಿಸ್ಟ್ 'ಎ' ಪಂದ್ಯಗಳಲ್ಲಿ 57 ವಿಕೆಟ್ ಕಬಳಿಸಿದ್ದರು.
200ರಲ್ಲಿ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಮೂಲಕ ನನ್ನ ವೃತ್ತಿ ಜೀವನ ಆರಂಭಿಸಿದೆ. ಇದೀಗ ಅದೇ ತಂಡದ ವಿರುದ್ಧ ಚಾಂಪಿಯನ್ ಪಟ್ಟ ಗಳಿಸಿದ ಬಳಿಕ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ವೃತ್ತಿ ಜೀವನಕ್ಕೆ ಸಹಕರಿಸಿದ ಕೆಎಸ್'ಸಿಎ, ಆಯ್ಕೆ ಸಮಿತಿ, ಕೋಚ್'ಗಳಿಗೆ, ಕುಟುಂಬಕ್ಕೆ ಹಾಗೂ ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಎಸ್. ಅರವಿಂದ್ ಹೇಳಿದ್ದಾರೆ.
ಭಾರತ ಪರ ಅರವಿಂದ್ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.