ವಿಶ್ವದ ಅತ್ಯಂತ ಕಿರಿಯ ನಾಯಕನೆಂಬ ಹಿರಿಮೆಗೆ ಪಾತ್ರರಾದ ಸನ್ ರೈಸರ್ಸ್ ಹೈದರಾಬಾದ್ ಆಟಗಾರ

Published : Feb 27, 2018, 06:59 PM ISTUpdated : Apr 11, 2018, 12:52 PM IST
ವಿಶ್ವದ ಅತ್ಯಂತ ಕಿರಿಯ ನಾಯಕನೆಂಬ ಹಿರಿಮೆಗೆ ಪಾತ್ರರಾದ ಸನ್ ರೈಸರ್ಸ್ ಹೈದರಾಬಾದ್ ಆಟಗಾರ

ಸಾರಾಂಶ

ಈ ಹಿಂದೆ 1998ರಲ್ಲಿ ಪಾಕಿಸ್ತಾನ ಲೆಗ್'ಸ್ಪಿನ್ನತ್ ಸಕ್ಲೈನ್ ಮುಷ್ತಾಕ್  ತಮ್ಮ 21ನೇ ವಯಸ್ಸಿನಲ್ಲಿ ಅತಿ ಕಿರಿಯ ನಾಯಕನಾಗಿ ಆಯ್ಕೆಯಾಗಿದ್ದರು.

ಅಪ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ವಿಶ್ವದ ಅತ್ಯಂತ ಕಿರಿಯ ನಾಯಕನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಏಕದಿನ ಹಾಗೂ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ನಂ.1 ಬೌಲರ್ ಆಗಿರುವ 19 ವರ್ಷದ ರಶೀದ್ ಖಾನ್   ನಾಯಕ ಅಸ್ಗರ್ ಸ್ಟ್ಯಾನಿಕ್ಝೈ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅಸ್ಗರ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ರಶೀದ್ ಅವರು ಅಫ್ಘಾನ್  ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ 1998ರಲ್ಲಿ ಪಾಕಿಸ್ತಾನ ಲೆಗ್'ಸ್ಪಿನ್ನತ್ ಸಕ್ಲೈನ್ ಮುಷ್ತಾಕ್  ತಮ್ಮ 21ನೇ ವಯಸ್ಸಿನಲ್ಲಿ ಅತಿ ಕಿರಿಯ ನಾಯಕನಾಗಿ ಆಯ್ಕೆಯಾಗಿದ್ದರು. ಮುಂದಿನ ತಿಂಗಳು ಮಾರ್ಚ್ 4ರಿಂದ  2019ರ ವಿಶ್ವಕಪ್ ಅರ್ಹತೆಗೆ ಭಾಗವಹಿಸಲು ಸ್ಕಾಲ್ಯಾಂಡ್ ವಿರುದ್ಧ ಸರಣಿ ಕೈಗೊಳ್ಳಲಿದೆ.ಆ ಸರಣಿಗೆ ರಶೀದ್ ತಂಡದ ಸಾರಥ್ಯ ವಹಿಸಲಿದ್ದಾರೆ.

37 ಏಕದಿನ ಪಂದ್ಯಗಳಿಂದ 86 ಹಾಗೂ 29 ಟಿ20 ಪಂದ್ಯಗಳಿಂದ 47 ವಿಕೇಟ್'ಗಳನ್ನು ರಶೀದ್ ಪಡೆದಿದ್ದಾರೆ. 2018ರ ಐಪಿಎಲ್'ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 6 ಕೋಟಿಗೆ ಹರಾಜಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಮಿನಿ ಹರಾಜಿನಲ್ಲಿ ಈ 4 ಆಟಗಾರರ ಮೇಲೆ ಕಣ್ಣಿಟ್ಟಿವೆ ಎಲ್ಲಾ ಫ್ರಾಂಚೈಸಿಗಳು!
ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!