
ಆಸೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಕೆಲವರು ಆಶ್ಚರ್ಯ ಎಂಬಂತೆ ತಂಡಕ್ಕೆ ವಾಪಸ್ಸಾದ್ರೆ ಕೆಲವರು ರೆಸ್ಟ್ ಎಂಬ ನೆಪದಲ್ಲಿ ಕೈಬಿಡಲಾಗಿದೆ. ಅಳೆದೂ ತೂಗಿ ಆಯ್ಕೆ ಸಮಿತಿ ಸಮತೋಲನದಿಂದ ಕೂಡಿರುವ ತಂಡವನ್ನ ಪ್ರಕಟಿಸಿದೆ. ಆದ್ರೆ ಟೀಂ ಇಂಡಿಯಾದ ಹಿರಿಯ ಆಟಗಾರರಾದ ಆರ್. ಆಸ್ವಿನ್ ಮತ್ತು ರವೀಂದ್ರ ಜಡೇಜಾರನ್ನ ಕೈಬಿಟ್ಟಿದ್ದಕ್ಕೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.
ವರ್ಷಗಳ ಆರ್ಭಟಕ್ಕೆ ಬ್ರೇಕ್ ಹಾಕಿದ್ರು ಯುವ ಸ್ಪಿನ್ನರ್ಸ್: ತಾತ್ಕಾಲಿಕ ರೆಸ್ಟ್ ನಂತರ ಪರ್ಮನೆಂಟ್ ರೆಸ್ಟಾಗಿಬಿಡ್ತಾ..?
ನಿಮಗೆ ನೆನಪಿರಬಹುದು, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೆಸ್ಟ್ ನೆಪದಲ್ಲಿ ಇವರಿಬ್ಬರನ್ನ ತಂಡದಿಂದ ಕೈಬಿಟ್ಟು ಯುವ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಮತ್ತು ಯುಜವೇಂದ್ರ ಚಹಲ್ ರನ್ನ ಆಯ್ಕೆ ಮಾಡಲಾಗಿತ್ತು. ಅಂದು ಎಲ್ರೂ ಆಯ್ಕೆ ಸಮಿತಿಯನ್ನ ನಂಬಿದ್ರು. ಅವರಿಗೆ ನಿಜವಾಗ್ಲೂ ರೆಸ್ಟ್ ನೀಡಲಾಗಿದೆ ಎಂಬ ಸಮಧಾನದಲ್ಲೇ ಇದ್ರು. ಯುವ ಸ್ಪಿನ್ನರ್'ಗಳು ಆರ್ಭಟಿಸುವುದನ್ನು ನೋಡಿ ಖುಷಿ ಪಟ್ಟಿದ್ರು.
ಯುವ ಸ್ಪಿನ್ನರ್ಗಳೇನೋ ಲಂಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿ ಎಲ್ಲರನ್ನ ದಂಗು ಬಡಿಸಿದ್ರು. ಆದ್ರೆ ನಿಜಕ್ಕೂ ಇವರ ಪ್ರದರ್ಶನದಿಂದ ತಲೆನೋವಾಗಿದ್ದು ಆಯ್ಕೆ ಸಮಿತಿಗೆ. ಕಾರಣ ಲಂಕಾ ಸರಣಿಯಲ್ಲಿ ಉತ್ತಮವಾಗಿ ಬೌಲ್ ಮಾಡಿದ್ದ ಯುವ ಸ್ಪಿನ್ನರ್ಗಳನ್ನ ಆಸೀಸ್ ಸರಣಿಯಿಂದ ಕೈಬಿಡಲು ಸಾಧ್ಯವಾಗಲಿಲ್ಲ. ಇತ್ತ ಸೀಮಿತ ಓವರ್ಗಳಲ್ಲಿ ಜಡ್ಡು ಮತ್ತು ಅಶ್ವಿನ್ರ ಮೋಡಿ ಕಡಿಮೆಯಾಗಿಬಿಟ್ಟಿತ್ತು. ಇದೇ ಕಾರಣಕ್ಕೆ ಮತ್ತೆ ಅಭಿಮಾನಿಗಳಿಗೆ ರೆಸ್ಟ್ ಎಂಬ ನೆಪವೊಡ್ಡಿ ಮತ್ತೆ ಅಶ್ವಿನ್ ಮತ್ತು ಜಡ್ಡುರನ್ನ ಆಸೀಸ್ ಸರಣಿಯಿಂದ ಕೈಬಿಡಲಾಯ್ತು.
ಯಾವಾಗ ಇವರಿಬ್ಬರನ್ನ ಆಸೀಸ್ ಸರಣಿಯಮದ ಕೈಬಿಟ್ರೋ ಆಗಲೇ ಅಶ್ವಿನ್ ಮತ್ತು ಜಡ್ಡು ಅಭಿಮಾನಿಗಳಿಗೆ ಅನುಮಾನ ಶುರುವಾಗಿಬಿಟ್ಟಿತ್ತು. ಆದ್ರೆ ಮೊನ್ನೆ ಆ ಅನುಮಾನ ನಿಜವಾಗಿಬಿಡ್ತು. ಆಯ್ಕೆ ಸಮಿತಿ ಮತ್ತು ಬಿಸಿಸಿಐ ಸೇರಿಕೊಂಡು ಸ್ಪಿನ್ ಮಾಂತ್ರಕರ ಕೆರಿಯರ್ ಕ್ಲೋಸ್ ಮಾಡ್ತಿದ್ದಾರೆ ಅನ್ನೋದು ಕನ್ಫರ್ಮ್ ಆಗಿಬಿಡ್ತು. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಅವರ ಅಭಿಮಾನಿಗಳು ರೊಚ್ಚಿಗೆದ್ದಿರೋದು.
ಜಡ್ಡು-ಅಶ್ವಿನ್ ಕೆರಿಯರ್ ಕ್ಲೋಸ್..?: ಟೆಸ್ಟ್'ಗೆ ಸೀಮಿತವಾಗಿಬಿಟ್ತಾ ಸ್ಪಿನ್ ಜೋಡಿ
ಸದ್ಯದ ಬೆಳವಣಿಗೆ ನೋಡ್ತಿದ್ರೆ ಜಡ್ಡು ಮತ್ತು ಅಶ್ವಿನ್ರ ಸೀಮಿತ ಓವರ್ಗಳ ಕೆರಿಯರ್ ಕ್ಲೋಸ್ ಆಯ್ತು ಅನಿಸ್ತಿದೆ. ಅವರ ಜಾಗಕ್ಕೆ ನೂತನ ವೃಸ್ಟ್ ಸ್ಪಿನ್ನರ್ಗಳು ಮುಂದುವರೆಯೋದು ಗ್ಯಾರೆಂಟಿ ಅನಿಸ್ತಿದೆ. ಇನ್ನೇನಿದ್ರೂ ಇವರ ಆಟ ಟೆಸ್ಟ್ ಕ್ರಿಕೆಟ್ಗೆ ಸೀಮಿತ ಅನಿಸ್ತಿದೆ.
ಏನೇ ಆದ್ರೂ ಕಳೆದ ಐದಾರು ವರ್ಷಗಳಿಂದ ಟೀಂ ಇಂಡಿಯಾವನ್ನ ತಲೆಯ ಮೇಲೆ ಹೊತ್ತು ಮೆರಸಿದ ದಿಗ್ಗಜ ಬೌಲರ್ಗಳಿಗೆ ಈ ಸ್ಥಿತಿ ಬರಬಾರ್ದಿತ್ತು. ಆದ್ರೆ ಕ್ರಿಕೆಟ್ ಅನ್ನೊ ಮಾಯ ಲೋಕದಲ್ಲಿ ಎಲ್ಲವೂ ಸಾಧ್ಯ ಅನ್ನೋದಕ್ಕೆ ಇವರಿಬ್ಬರೇ ಬೆಸ್ಟ್ ಎಕ್ಸಾಂಪಲ್. ಆದ್ರೆ ಇವರಿಬ್ಬರೂ ಸಂಪೂರ್ಣವಾಗಿ ಮಾಯವಾಗದೆ. ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲಿ ಕಮಾಲ್ ಮಾಡಲಿದ್ದಾರಲ್ಲ ಎಂಬುದೇ ಅವರ ಕೋಟ್ಯಾಮತರ ಅಭಿಮಾನಿಗಳಿಗೆ ಸಮಾಧಾನದ ವಿಷ್ಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.