
ಸದ್ಯ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ತೋರಿ ಸರಣಿಯನ್ನ ವಷಪಡಿಸಿಕೊಂಡಿರುವ ಟೀಂ ಇಂಡಿಯಾ ಖುಷಿಯ ಅಲೆಯಲ್ಲಿ ತೇಲಾಡ್ತಿದೆ. 4-1 ರಿಂದ ಸರಣಿ ಗೆದ್ದಿರುವ ಕೊಹ್ಲಿ ಆಂಡ್ ಟೀಂ ಫುಲ್ ಜೋಶ್ನಲ್ಲಿದ್ದಾರೆ. ಅಷ್ಟೇ ಅಲ್ಲ ಇದೇ ಜೋಶ್ನಲ್ಲಿ ಭಾನುವಾರದಿಂದ ಶುರುವಾಗೋ ಟಿ20 ಸರಣಿಗೆ ರೆಡಿಯಾಗ್ತಿದ್ದಾರೆ.
ಅಣ್ಣ ಕೃನಾಲ್'ಗೆ ಹಾರ್ದಿಕ್ ಕೊಟ್ಟಿದ್ದ ಮಾತು ಏನು..?
ಇಡೀ ಟೀಂ ಇಂಡಿಯಾ ಈಗ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದರೆ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಾತ್ರ ಧನ್ಯತೋ ಭಾವದಲ್ಲಿದ್ದಾರೆ. ಕಾರಣ ಆಸೀಸ್ ಸರಣಿಗೆ ಬರೋದಕ್ಕೂ ಮುನ್ನ ತನ್ನ ಅಣ್ಣ ಕೃನಾಲ್ ಪಾಂಡ್ಯಗೆ ನೀಡಿದ್ದ ಭಾಷೆಯನ್ನ ಈಡೇರಿಸಿದ್ದಾರೆ. ಅಂದು ಕೊಟ್ಟ ಮಾತನ್ನ ಚಾಚು ತಪ್ಪದೆ ಮಾಡಿ ಈಗ ಅಣ್ಣನ ಖುಷಿಗೆ ಕಾರಣರಾಗಿದ್ದಾರೆ.
ಅಷ್ಟಕ್ಕೂ ಅಂದು ಹಾರ್ದಿಕ್ ಪಾಂಡ್ಯ ಕ್ರನಾಲ್ಗೆ ಕೊಟ್ಟಿದ್ದ ಮಾತು ಏನು ಗೊತ್ತಾ..? ಆಸೀಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರೋದಲ್ಲದೇ ಸರಣಿ ಶ್ರೇಷ್ಠನಾಗ್ತಿನಿ ಅನ್ನೋದು. ಅವರ ಅಂದಿನ ಮಾತನ್ನ ಹಾರ್ದಿಕ್ ನೆರವೇರಿಸಿದ್ದಾರೆ.
ಅಣ್ಣನಿಗೆ ಕೊಟ್ಟ ಮಾತನ್ನ ನೆರೆವೇರಿಸಿದ ಹಾರ್ದಿಕ್: ಏಕದಿನ ಸರಣಿಯಲ್ಲಿ ಪಾಂಡ್ಯನೇ ಕಿಂಗ್
ಹಾರ್ದಿಕ್ ಅಣ್ಣನಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಆಸೀಸ್ ವಿರುದ್ಧದ ಸರಣಿಯುದ್ಧಕ್ಕೂ ಅದ್ಭುತ ಪ್ರದಶರ್ನ ತೋರುವುದಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆಸೀಸ್ ವಿರುದ್ಧ ಹಾರ್ದಿಕ್ ಪಾಂಡ್ಯನ ರೆಕಾರ್ಡ್ ಇಂತಿದೆ. ಒಟ್ಟು 5 ಪಂದ್ಯಗಳಲ್ಲಿ 222 ರನ್ಗಳಿಸಿದ ಪಾಂಡ್ಯ 6 ವಿಕೆಟ್ಗಳನ್ನ ಪಡೆದಿದ್ದಾರೆ. ಅಷ್ಟೇ ಅಲ್ಲ 2 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.
ತಮ್ಮನ ಸಾಧನೆ ಕಂಡು ಅಣ್ಣ ಫುಲ್ ಖುಷ್: ಟ್ವಿಟ್ಟರ್'ನಲ್ಲೇ ತಮ್ಮನನ್ನ ಹಾಡಿ ಹೊಗಳಿದ ಕೃನಾಲ್
ಹಾರ್ದಿಕ್ ಪಾಂಡ್ಯನ ಈ ಸಾಧನೆಗೆ ಅಣ್ಣ ಕೃನಾಲ್ ಪಾಂಡ್ಯ ಫುಲ್ ಥ್ರಿಲ್ ಆಗಿದ್ದಾರೆ ಅಷ್ಟೇ ಅಲ್ಲ ನನಗೆ ಕೊಟ್ಟಿದ್ದ ಮಾತನ್ನ ಉಳಿಸಿಕೊಂಡಿದ್ಯ ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ಟ್ವಿಟ್ಟರ್'ನಲ್ಲಿ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಅಣ್ಣನಿಗೆ ಮಾತು ಕೊಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಅಬ್ಬರಿಸಿದ್ರೋ ಅಥವಾ ಅವರ ಪ್ರತಾಪವೇ ಅಂಥದ್ದೊ ಗೊತ್ತಿಲ್ಲ. ಆದ್ರೆ ಟೀಂ ಇಂಡಿಯಾಗೆ ಒಬ್ಬ ಅದ್ಭುತ ಆಲ್ರೌಂಡರ್ ಸಿಕ್ಕಿದಂತೂ ಸುಳ್ಳಲ್ಲ. ಕೃನಾಲ್ ಪ್ರತೀ ಸರಣಿಗೂ ಹಾರ್ದಿಕ್ ಬಳಿ ಇಂಥಹ ಭಾಷೆಗಳನ್ನ ತಗೆದುಕೊಳ್ಳುತ್ತಿರಲಿ ಹಾರ್ದಿಕ್ ಹೀಗೆ ಅಬ್ಬರಿಸುತ್ತಿರಲಿ ಎಂಬುದು ಎಲ್ಲರ ಆಶಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.