ಸ್ಪೇನ್ Vs ಈಜಿಫ್ಟ್ ಬೀಚ್ ವಾಲಿಬಾಲ್ ಮ್ಯಾಚ್‌: ಒಲಿಂಪಿಕ್ಸ್‌ ಆಟಕ್ಕಿಂತ ಸ್ಪರ್ಧಿಗಳ ಬಟ್ಟೆ ಬಗ್ಗೆ ಭಾರಿ ಚರ್ಚೆ

Published : Aug 04, 2024, 04:18 PM ISTUpdated : Aug 04, 2024, 04:19 PM IST
ಸ್ಪೇನ್ Vs ಈಜಿಫ್ಟ್ ಬೀಚ್ ವಾಲಿಬಾಲ್ ಮ್ಯಾಚ್‌: ಒಲಿಂಪಿಕ್ಸ್‌ ಆಟಕ್ಕಿಂತ ಸ್ಪರ್ಧಿಗಳ ಬಟ್ಟೆ ಬಗ್ಗೆ ಭಾರಿ ಚರ್ಚೆ

ಸಾರಾಂಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಬೀಚ್ ವಾಲಿಬಾಲ್‌ ಸ್ಪರ್ಧೆಯಲ್ಲಿ ಮಹಿಳೆಯರ ಆಟಕ್ಕಿಂತ ಹೆಚ್ಚು ಅವರು ಧರಿಸಿದ ಧಿರಿಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಬೀಚ್ ವಾಲಿಬಾಲ್‌ ಸ್ಪರ್ಧೆಯಲ್ಲಿ ಮಹಿಳೆಯರ ಆಟಕ್ಕಿಂತ ಹೆಚ್ಚು ಅವರು ಧರಿಸಿದ ಧಿರಿಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಬೀಚ್‌ ವಾಲಿಬಾಲ್‌ ಸ್ಪರ್ಧೆಯಲ್ಲಿ ಸ್ಪೇನ್ ಹಾಗೂ ಈಜಿಫ್ಟ್ ಮಹಿಳಾ ತಂಡಗಳು  ಪರಸ್ಪರ ಎದುರಾಳಿಗಳಾಗಿ ಮೈದಾನಕ್ಕಿಳಿದಿದ್ದವು. ಈ ವೇಳೆ ಎರಡು ತಂಡಗಳ ವಿಭಿನ್ನ ಬಟ್ಟೆಗಳು ಸಾಕಷ್ಟು ಗಮನ ಸೆಳೆದರು. ಸ್ಪೇನ್ ತಂಡದ ಆಟಗಾರರು ಬೀಚ್ ವಾಲಿಬಾಲ್ ಮ್ಯಾಚ್‌ಗೆ ಬೀಚ್‌ ಉಡುಗೆಯಂತೆಯೇ ಅರೆಬರೆ ಕಾಣುವ ಬಟ್ಟೆ ತೊಟ್ಟು ಬೀಚ್‌ನ ತಾಪವನ್ನು ಮತ್ತಷ್ಟು ಹೆಚ್ಚಿಸಿದ್ದರೆ,  ಇತ್ತ ಮುಸ್ಲಿಂ ರಾಷ್ಟ್ರವಾಗಿರುವ ಈಜಿಫ್ಟ್‌ನ ಆಟಗಾರರು ಸಂಪ್ರದಾಯಿಕವಾಗಿ ಮುಖವೊಂದನ್ನು ಹೊರತುಪಡಿಸಿ ತಮ್ಮ ದೇಹವವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಕವರ್ ಮಾಡಿದ್ದರು.  ಇದೇ ವಿಚಾರ ಈಗ ವ್ಯಾಪಕ ಚರ್ಚೆಯಲ್ಲಿದೆ. 

ಒಲಿಂಪಿಕ್ ವಾಲಿಬಾಲ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪಂದ್ಯದ ನಂತರ ಕೊನೆಯ ಸುತ್ತಿನ ಪೂಲ್ ಆಟದ ಭಾಗವಾಗಿ ಸ್ಪೇನ್ ಹಾಗೂ ಈಜಿಪ್ಟ್ ತಂಡಗಳು ಎದುರುಬದುರಾದವು. ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ತನ್ನ ಅದ್ಭುತ ಆಟದ ಮೂಲಕ ಸ್ಪೇನ್ ಗಮನ ಸೆಳೆದಿದ್ದರೂ  ಸ್ಪೇನ್‌ನ ಸ್ಟಾರ್ ಜೋಡಿ ಲಿಲಿಯಾನಾ ಫೆರ್ನಾಂಡಿಸ್ ಮತ್ತು ಪೌಲಾ ಸೋರಿಯಾ ಅವರ ಆಟದ ಸಾಮರ್ಥ್ಯಕ್ಕಿಂತ ಬಟ್ಟೆಯ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹೆಚ್ಚಾಯ್ತು.

Paris Olympics 2024 ಬ್ರಿಟೀಷರನ್ನು ಮಣಿಸಿದ ಭಾರತ ಹಾಕಿ ತಂಡ ಸೆಮಿಫೈನಲ್‌ಗೆ ಲಗ್ಗೆ..!

ಈ ವಾಲಿಬಾಲ್ ಪಂದ್ಯಾವಲಿಯಲ್ಲಿ ಸ್ಪೇನ್ ಈಜಿಫ್ಟನ್ನು ನೇರ ಸೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯಾವಳಿಯಲ್ಲಿ ಸ್ಪೇನ್‌ನ ಆಟಗಾರರು ಬಿಕಿನಿ ಧರಿಸಿದ್ದರೆ, ಈಜಿಫ್ಟ್ ಆಟಗಾರರು ಹಿಜಾಬ್‌ನೊಂದಿಗೆ ತುಂಬು ತೋಳಿರುವ ಶರ್ಟ್‌, ಪಾದವನ್ನು ಹೊರತುಪಡಿಸಿ ಕಾಲನ್ನು ಸಂಪೂರ್ಣವಾಗಿ ಮುಚ್ಚುವ ಲೆಗಿನ್ಸ್ ಧರಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ವೇಳೆ ಈ ಈಜಿಫ್ಟ್ ತಂಡ ಫ್ರಾನ್ಸ್‌ ದೇಶವನ್ನು ಪ್ರತಿನಿಧಿಸುತ್ತಿದ್ದರೆ ಅವರಿಗೆ ಹಿಜಾಬ್ ಧರಿಸಲು ಅನುಮತಿ ಇರುತ್ತಿರಲಿಲ್ಲ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಿಜಾಬ್ ಧರಿಸಲು ಅನುಮತಿ ಇಲ್ಲ ಎಂಬ ಫ್ರಾನ್ಸ್‌ನ ಆದೇಶದ ವಿರುದ್ಧ ಈ ಹಿಂದೆ ಈಜಿಫ್ಟ್‌ನ ಬೀಚ್‌ ವಾಲಿಬಾಲ್ ಟೀಂ ಸದಸ್ಯರು ಮಾತನಾಡಿದ್ದರು. ನಾನು ಹಿಜಾಬ್ ಧರಿಸಿ ಆಟವಾಡಲು ಬಯಸುವೆ ಆಕೆ ಬಿಕಿನಿ  ಧರಿಸಿ ಆಟವಾಡಲು ಬಯಸುತ್ತಾಳೆ. ನೀವು ಬೆತ್ತಲೆಯಾಗಿ ಆಡುವಿರೋ ಅಥವಾ ಹಿಜಾಬ್ ಧರಿಸಿ ಆಡುವಿರೋ ಎಲ್ಲವೂ ಸರಿಯಾಗಿಯೇ ಇದೆ, ಕೇವಲ ವಿಭಿನ್ನವಾದ ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಗೌರವಿಸಬೇಕು ಎಂದು ಈಜಿಫ್ಟ್ನ ದೋವಾ ಎಲ್ಗೋಬಾಶಿ ಹೇಳಿದ್ದರು.

ಮನು ಭಾಕರ್ ಹ್ಯಾಟ್ರಿಕ್ ಪದಕ ಸಾಧನೆ ಜಸ್ಟ್ ಮಿಸ್, ಕೆಚ್ಚೆದೆಯ ಹೋರಾಟಕ್ಕೆ ಭಾರಿ ಮೆಚ್ಚುಗೆ!

ನಾನು ನಿಮಗೆ ಹಿಜಾಬ್ ಧರಿಸಿ ಎಂದು ಹೇಳುವುದಿಲ್ಲ, ಅದೇ ರೀತಿ ನೀವು ನನಗೆ ಬಿಕಿನಿ  ಧರಿಸಿ ಎಂದು ಹೇಳಬಾರದು. ನಾನು ಹೇಗೆ ಬಟ್ಟೆ ಹಾಕಬೇಕು ಎಂಬ ಬಗ್ಗೆ  ನನಗೆ ಯಾರೂ ಹೇಳಬಾರದು, ಇದು ಸ್ವಾತಂತ್ರ್ಯ ದೇಶ, ಪ್ರತಿಯೊಬ್ಬರು ತಮಗೆ ಬೇಕಾದನ್ನು ಮಾಡಲು ಅವಕಾಶ ಇರಬೇಕು ಎಂದು ಅವರು ಹೇಳಿದ್ದರು. ಇದಾದ ನಂತರ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು ಇತರ 10 ಜಾಗತಿಕ ಗುಂಪುಗಳು ಜೂನ್‌ನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಈ ಹಿಜಾಬ್ (ಐಒಸಿ) ನಿಷೇಧವನ್ನು ರದ್ದುಗೊಳಿಸುವಂತೆ ಕೋರಿದ್ದವು. ಇಂತಹ ತೀರ್ಪು ಮುಸ್ಲಿಂ ಕ್ರೀಡಾಪಟುಗಳ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿತ್ತು. ಇದಾದ ನಂತರ ಕ್ರೀಡಾಪಟುಗಳಿಗೆ ಹಿಜಾಬ್‌ಗೆ ಅವಕಾಶ ನೀಡಲಾಗಿತ್ತು. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!
IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್