
ಜೋಹಾನ್ಸ್‌ಬರ್ಗ್(ಜ.15): ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ 3-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ. ಸೋಮವಾರ ಮುಕ್ತಾಯಗೊಂಡ 3ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 107 ರನ್‌ಗಳ ಗೆಲುವು ಸಾಧಿಸಿತು. ದ.ಆಫ್ರಿಕಾ ತಂಡ ಪಾಕಿಸ್ತಾನಕ್ಕೆ 381 ರನ್‌ಗಳ ಗುರಿ ನೀಡಿತ್ತು. ಪಂದ್ಯದ 4ನೇ ದಿನವಾದ ಸೋಮವಾರ 3 ವಿಕೆಟ್‌ಗೆ 153 ರನ್‌ಗಳಿಂದ 2ನೇ ಇನ್ನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ 273 ರನ್ ಗಳಿಸಿ ಆಲೌಟ್ ಆಯಿತು. ದ.ಆಫ್ರಿಕಾ ಪರ ಆಲಿವರ್ ಮತ್ತು ರಬಾಡಾ ತಲಾ 3 ವಿಕೆಟ್ ಪಡೆದರು.
ಇದನ್ನೂ ಓದಿ: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ತಂಡ ಪ್ರಕಟಿಸಿದ ಬಿಸಿಸಿಐ!
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ಆಫ್ರಿಕಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಡುಯಾನೆ ಒಲಿವರ್ ಮಾರಕ ದಾಳಿ ಹಾಗೂ ಹಾಶಿಮ್ ಆಮ್ಲಾ, ಡಿನ್ ಎಲ್ಗರ್ ಬ್ಯಾಟಿಂಗ್ ನೆರವಿನಿಂದ ಸೌತ್ಆಫ್ರಿಕಾ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿತ್ತು.
ಇದನ್ನೂ ಓದಿ:ಭಾರತದಲ್ಲೇ ನಡೆಯಲಿದೆ IPL: ನಿಗದಿಗಿಂತ ಮೊದಲೇ IPL ಕಿಕ್ ಸ್ಟಾರ್ಟ್
ಕೇಪ್‌ಟೌನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೌತ್ಆಫ್ರಿಕಾ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು. ನಾಯಕ ಫಾಫ್ ಡುಪ್ಲೆಸಿಸ್ ಶತಕ, ಡೇಲ್ ಸ್ಟೇನ್ ಹಾಗೂ ಕಾಗಿಸೋ ರಬಾಡ ದಾಳಿಯಿಂದ ಪಾಕಿಸ್ತಾನ ತತ್ತರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.