ಸೌತ್ ಆಫ್ರಿಕಾ ಸ್ಟಾರ್ ಕ್ರಿಕೆಟಿಗ ಏಕದಿನ ಮಾದಿರಿಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಬಳಿಕ ಐಪಿಎಲ್ ಸೇರಿದಂತೆ ವಿಶ್ವದ ಲೀಗ್ ಟೂರ್ನಿಗಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ದಿಢೀರ್ ನಿವೃತ್ತಿ ಹೇಳಿದ ಕ್ರಿಕಟಿಗ ಯಾರು? ಇಲ್ಲಿದೆ ವಿವರ.
ಡರ್ಬನ್(ಮಾ.04): ಸೌತ್ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಇಮ್ರಾನ್ ತಾಹಿರ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗೋದಾಗಿ ಹೇಳಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಾಹಿರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಇಂಡೋ-ಆಸಿಸ್ 2ನೇ ಏಕದಿನ: ಸಂಭನೀಯ ಭಾರತ ತಂಡ ಪ್ರಕಟ!
undefined
ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆ. ವಿಶ್ವಕಪ್ ಟೂರ್ನಿ ಆಡಬೇಕು ಅನ್ನುವುದು ನನ್ನ ಮಹದಾಸೆ. ಹೀಗಾಗಿ ವಿಶ್ವಕಪ್ ಟೂರ್ನಿ ಬಳಿಕ ನಾನು ಏಕದಿನ ಮಾದರಿಯಿಂದ ನಿವೃತ್ತಿ ಪಡೆಯುತ್ತೇನೆ. ಬಳಿಕ 2020ರ ಟಿ20 ವಿಶ್ವಕಪ್ ಟೂರ್ನಿವರೆಗೂ ಚುಟುಕು ಕ್ರಿಕೆಟ್‌ನಲ್ಲಿ ಮುಂದುವರಿಯುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಪತ್ನಿ..!
ಏಕದಿನ ನಿವೃತ್ತಿ ಬಳಿಕ ಐಪಿಎಲ್ ಟೂರ್ನಿ ಸೇರಿದಂತೆ ವಿಶ್ವದ ಇತರ ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ. ಸೌತ್ ಆಫ್ರಿಕಾ ಪರ 95 ಏಕದಿನ ಪಂದ್ಯ ಆಡಿರುವ ತಾಹಿರ್ 156 ವಿಕೆಟ್ ಕಬಳಿಸಿದ್ದಾರೆ. ಇನ್ನು 37 ಟಿ20 ಪಂದ್ಯದಿಂದ 62 ಹಾಗೂ 20 ಟೆಸ್ಟ್ ಪಂದ್ಯಗಳಿಂದ 57 ವಿಕೆಟ್ ಉರುಳಿಸಿದ್ದಾರೆ.