ವಿಶ್ವಕಪ್ 2019: ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಇಮ್ರಾನ್ ತಾಹಿರ್..!

By Web DeskFirst Published May 30, 2019, 5:22 PM IST
Highlights

ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೊಂದು ಅಪರೂಪದ ದಾಖಲೆ ನಿರ್ಮಾಣವಾಗಿದೆ. ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯದಲ್ಲೇ ಆ ದಾಖಲೆ ನಿರ್ಮಾಣವಾಗಿದ್ದು, ಸ್ಪಿನ್ನರ್ ಇಮ್ರಾನ್ ತಾಹಿರ್ ಹೊಸ ಇತಿಹಾಸ ಬರೆದ ಕ್ರಿಕೆಟಿಗ ಎನಿಸಿದ್ದಾರೆ. ಏನದು ದಾಖಲೆ ಎನ್ನುವುದನ್ನು ನೀವೇ ನೋಡಿ

ಲಂಡನ್[ಮೇ.30]: 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 

ಸಾಮಾನ್ಯವಾಗಿ ವೇಗದ ಬೌಲರ್‌ಗಳು ಮೊದಲು ದಾಳಿ ನಡೆಸುತ್ತಾರೆ. ಕೆಲವೊಮ್ಮೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳು ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದ್ದಿದೆ. ಆದರೆ 1975ರಿಂದ ಆರಂಭವಾಗಿರುವ ವಿಶ್ವಕಪ್ ಟೂರ್ನಿಯಲ್ಲಿ ಯಾವೊಬ್ಬ ಸ್ಪಿನ್ನರ್ ಕೂಡಾ ಹೊಸ ಚೆಂಡಿನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಮೊದಲ ಓವರ್ ಬೌಲಿಂಗ್ ಮಾಡಿರಲಿಲ್ಲ.

2019ರ ವಿಶ್ವಕಪ್‌ ಆಡುತ್ತಿರುವ ಟಾಪ್ 5 ಹಿರಿಯ ಆಟಗಾರರಿವರು

ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಹೊಸ ಇತಿಹಾಸವೊಂದು ನಿರ್ಮಾಣವಾಗಿದ್ದು, ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ ಮೊದಲ ಓವರ್ ಸ್ಪಿನ್ ಬೌಲಿಂಗ್ ಮಾಡಿದ ಜಗತ್ತಿನ ಮೊದಲ ಸ್ಪಿನ್ನರ್ ಎನ್ನುವ ಕೀರ್ತಿಗೆ ಇಮ್ರಾನ್ ತಾಹಿರ್ ಭಾಜನರಾಗಿದ್ದಾರೆ. ಈ ಆವೃತ್ತಿಯಲ್ಲಿ ವಿಶ್ವಕಪ್ ಪ್ರತಿನಿಧಿಸುತ್ತಿರುವ ಅತಿ ಹಿರಿಯ ಕ್ರಿಕೆಟಿಗ ಎನಿಸಿರುವ ದಕ್ಷಿಣ ಆಫ್ರಿಕಾದ ಮಣಿಕಟ್ಟು ಸ್ಪಿನ್ನರ್, ಮೊದಲ ಓವರ್ ನಲ್ಲೇ ಜಾನಿ ಬೇರ್‌ಸ್ಟೋ  ವಿಕೆಟ್ ಕಬಳಿಸುವ ಮೂಲಕ ಮ್ಯಾಜಿಕ್ ಮಾಡಿದ್ದಾರೆ.

Second ball of and we have a wicket!

What a call from to open with !

FOLLOW LIVE ⬇️ https://t.co/nH52002J64 pic.twitter.com/8cCDq9jA2l

— Cricket World Cup (@cricketworldcup)

ವಿಶ್ವಕಪ್ ಇತಿಹಾಸದಲ್ಲಿ ಕೇವಲ 2 ಬಾರಿ ಮಾತ್ರ ಮೊದಲ ಓವರ್ ನಲ್ಲಿ ವಿಕೆಟ್ ಬಿದ್ದಂತಾಗಿದೆ. ಈ ಮೊದಲು 1992ರ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾದ ಮೆಕ್ ಡರ್ಮಾಟ್ ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜಾನ್ ರೈಟ್‌ರನ್ನು ಬಲಿಪಡೆದಿದ್ದರು. 

ಇದೀಗ 30 ಓವರ್ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿದ್ದು, ನಾಯಕ ಮಾರ್ಗನ್ 40 ಹಾಗೂ ಬೆನ್ ಸ್ಟೋಕ್ಸ್ 22 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

click me!