
ಚೇತೇಶ್ವರ ಪೂಜಾರ ಯಾಕೆ ಟೆಸ್ಟ್ ಸ್ಪೆಷಲಿಸ್ಟ್ ಎನ್ನುತ್ತಾರೆ ಎಂಬ ಪ್ರಶ್ನೆಗೆ ಮತ್ತೊಮ್ಮೆ ಉತ್ತರ ಸಿಕ್ಕಂತಾಗಿದೆ.
ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಮೂರನೇ ಹಾಗೂ ಅಂತಿಮ ಟೆಸ್ಟ್'ನಲ್ಲೂ ಟೀಂ ಇಂಡಿಯಾದ ಆರಂಭಿಕರಿಬ್ಬರೂ ಮತ್ತೆ ನಿರಾಸೆ ಮೂಡಿಸಿದರು. ತಂಡದ ಮೊತ್ತ 13 ರನ್'ಗಳಿದ್ದಾಗ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದ್ದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್'ಗಿಳಿದ ಚೇತೇಶ್ವರ ಪೂಜಾರ ಆಫ್ರಿಕಾ ಬೌಲರ್'ಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಿದ್ದಾರೆ.
ಈ ವೇಳೆ ಪೂಜಾರ ವಿನೂತನ ದಾಖಲೆಗೂ ಪಾತ್ರರಾಗಿದ್ದಾರೆ. ತಾವೆದುರಿಸಿದ 54ನೇ ಎಸೆತದಲ್ಲಿ ಪೂಜಾರ ರನ್ ಖಾತೆ ತೆರೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್'ನ ಪಂದ್ಯವೊಂದರಲ್ಲಿ ಖಾತೆ ತೆರೆಯಲು ಗರಿಷ್ಠ ಎಸೆತಗಳನ್ನು ತೆಗೆದುಕೊಂಡ ಎರಡನೇ ಭಾರತೀಯ ಆಟಗಾರ ಎನ್ನುವ ಅಪರೂಪದ ಖ್ಯಾತಿಗೆ ಪೂಜಾರ ಪಾತ್ರರಾಗಿದ್ದಾರೆ. ಇನ್ನು ಗರಿಷ್ಠ ಎಸೆತಗಳನ್ನು ಎದುರಿಸಿ ಖಾತೆ ತೆರೆದ ಭಾರತೀಯ ಆಟಗಾರ ಎನ್ನುವ ದಾಖಲೆ ರಾಜೇಶ್ ಚೌಹಾಣ್ ಹೆಸರಿನಲ್ಲಿದೆ. ಟೀಂ ಇಂಡಿಯಾದ ಸ್ಪಿನ್ನರ್ ಆಗಿದ್ದ ರಾಜೇಶ್ ಚೌಹ್ಹಾಣ್ 1994ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ರನ್ ಗಳಿಸಲು 57 ಎಸೆತಗಳನ್ನು ಎದುರಿಸಿದ್ದರು.
ಇನ್ನು ಖಾತೆ ತೆರೆಯಲು ಅತಿಹೆಚ್ಚು ಎಸೆತಗಳನ್ನು ಎದುರಿಸಿದ ವಿಶ್ವದಾಖಲೆ ಇಂಗ್ಲೆಂಡ್'ನ ಜಾನ್ ಥಾಮಸ್ ಮರ್ರೆ ಹೆಸರಿನಲ್ಲಿದೆ. 1936ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮರ್ರೆ 80 ಎಸೆತಗಳನ್ನು ಎದುರಿಸಿ ರನ್ ಖಾತೆ ತೆರೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.