Singapore Open 2024: ವಿಶ್ವ ನಂ.1 ಜೋಡಿ ಸಾತ್ವಿಕ್‌-ಚಿರಾಗ್‌ಗೆ ಮೊದಲ ಸುತ್ತಲ್ಲೇ ಶಾಕ್‌!

By Kannadaprabha News  |  First Published May 29, 2024, 8:47 AM IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಫೇವರಿಟ್ಸ್‌ ಎನಿಸಿರುವ ಸಾತ್ವಿಕ್‌-ಚಿರಾಗ್‌ ಕೇವಲ 47 ನಿಮಿಷಗಳಲ್ಲಿ ಪರಾಭವಗೊಂಡರು. ಎರಡು ವಾರಗಳ ಹಿಂದಷ್ಟೇ ಭಾರತೀಯ ಜೋಡಿ ಥಾಯ್ಲೆಂಡ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿತ್ತು.


ಸಿಂಗಾಪುರ: ವಿಶ್ವ ನಂ.1, ಭಾರತ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಮಂಗಳವಾರದಿಂದ ಇಲ್ಲಿ ಆರಂಭಗೊಂಡ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಪುರುಷರ ಡಬಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.34, ಡೆನ್ಮಾರ್ಕ್‌ನ ಡೇನಿಯಲ್‌ ಲುಂಗಾರ್ಡ್‌ ಹಾಗೂ ಮ್ಯಾಡ್ಸ್‌ ವೆಸ್ಟರ್‌ಗಾರ್ಡ್‌ ವಿರುದ್ಧ 20-22, 18-21 ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿಗೆ ಸೋಲು ಎದುರಾಯಿತು. 

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಫೇವರಿಟ್ಸ್‌ ಎನಿಸಿರುವ ಸಾತ್ವಿಕ್‌-ಚಿರಾಗ್‌ ಕೇವಲ 47 ನಿಮಿಷಗಳಲ್ಲಿ ಪರಾಭವಗೊಂಡರು. ಎರಡು ವಾರಗಳ ಹಿಂದಷ್ಟೇ ಭಾರತೀಯ ಜೋಡಿ ಥಾಯ್ಲೆಂಡ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿತ್ತು.

Tap to resize

Latest Videos

2024ನೇ ಸಾಲಿನ ಬಲಿಷ್ಠ ಐಪಿಎಲ್ ತಂಡ ಕಟ್ಟಿದ ಹರ್ಷಾ ಬೋಗ್ಲೆ..! ಇಬ್ಬರು ಆರ್‌ಸಿಬಿ ಆಟಗಾರರಿಗೆ ಸ್ಥಾನ

ಮಂಗಳವಾರ ಭಾರತೀಯರ ಪಾಲಿಗೆ ದುರದೃಷ್ಟಕರವಾಗಿತ್ತು. ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌, ಪುರುಷರ ಸಿಂಗಲ್ಸ್‌ನಲ್ಲಿ ಪ್ರಿಯಾನ್ಶು ರಾಜಾವತ್‌ ಮೊದಲ ಸುತ್ತಿನಲ್ಲೇ ಸೋತ ಹೊರಬಿದ್ದರು.

ವಿಶ್ವ ನಂ.41 ಆಕರ್ಷಿ 7-21, 15-21ರಲ್ಲಿ ಥಾಯ್ಲೆಂಡ್‌ನ ಪೊರ್ನ್‌ಪಿಚಾ ಚೊಯಿಕೀವೊಂಗ್‌ ವಿರುದ್ಧ ಸೋತರೆ, ವಿಶ್ವ ನಂ.42 ಪ್ರಿಯಾನ್ಶು 21-23, 19-21ರಲ್ಲಿ ಹಾಂಕಾಂಗ್‌ನ ಲೀ ಚೆಯುಕ್‌ ವಿರುದ್ಧ ಸೋಲುಂಡರು. ಮಹಿಳಾ ಡಬಲ್ಸ್‌ನಲ್ಲಿ ಋತುಪರ್ಣಾ ಪಾಂಡ ಹಾಗೂ ಶ್ವೇತಪರ್ಣಾ ಪಾಂಡ ಸಹ ಮೊದಲ ಸುತ್ತಿನಲ್ಲಿ ಸೋತು ನಿರಾಸೆ ಅನುಭವಿಸಿದರು. ಪಿ.ವಿ.ಸಿಂಧು, ಲಕ್ಷ್ಯ ಸೇನ್‌ ಹಾಗೂ ಎಚ್‌.ಎಸ್‌.ಪ್ರಣಯ್‌ ಬುಧವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ: ಸಬಲೆಂಕಾ, ರಬೈಕೆನಾ ಶುಭಾರಂಭ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೈನಾ ಸಬಲೆಂಕಾ, 3ನೇ ಶ್ರೇಯಾಂಕಿತೆ ಅಮೆರಿಕದ ಕೊಕೊ ಗಾಫ್‌, 4ನೇ ಶ್ರೇಯಾಂಕಿತೆ ಕಜಕಸ್ತಾನದ ಎಲೈನಾ ರಬೈಕೆನಾ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ 2 ಬಾರಿ ಗ್ರ್ಯಾನ್‌ ಸ್ಲಾಂ ವಿಜೇತೆ ಸಬಲೆಂಕಾ, ರಷ್ಯಾದ ಎರಿಕಾ ಆ್ಯಂಡ್ರೀವಾ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.

ಕೋಚ್ ಹುದ್ದೆಗೆ ಅರ್ಜಿ ಡೆಡ್‌ಲೈನ್ ಮುಕ್ತಾಯ: ಕಪ್ ಗೆಲ್ಲುವ ಮುಂಚೆ ಬಿಸಿಸಿಐಗೆ ಕಂಡೀಷನ್ ಹಾಕಿದ್ದ ಗಂಭೀರ್!

ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ ಕೊಕೊ ಗಾಫ್‌, ರಷ್ಯಾದ ಜ್ಯೂಲಿಯಾ ಆ್ಯವ್ಡೀವಾ ವಿರುದ್ಧ 6-1, 6-1 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇನ್ನು 2022ರ ವಿಂಬಲ್ಡನ್‌ ಚಾಂಪಿಯನ್‌ ರಬೈಕೆನಾ, ಬೆಲ್ಜಿಯಂನ ಗ್ರೀಟ್‌ ಮಿನ್ನೆನ್ ವಿರುದ್ಧ 6-2, 6-3ರಲ್ಲಿ ಗೆದ್ದರು. ಇದೇ ವೇಳೆ 6ನೇ ಶ್ರೇಯಾಂಕಿತೆ ಗ್ರೀಸ್‌ನ ಮರಿಯಾ ಸಕ್ಕಾರಿಗೆ ಮೊದಲ ಸುತ್ತಿನಲ್ಲೇ ಸೋಲು ಎದುರಾಯಿತು.

ಇನ್ನು ಪುರುಷರ ಮೊದಲ ಸುತ್ತಿನಲ್ಲಿ 5ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಜರ್ಮನಿಯ ಡೊಮಿನಿಕ್‌ ಕೊಫರ್‌ ವಿರುದ್ಧ 6-3, 6-4, 5-7, 6-3ರಲ್ಲಿ ಜಯಿಸಿದರೆ, 7ನೇ ಶ್ರೇಯಾಂಕಿತ ನಾರ್ವೆಯ ಕ್ಯಾಸ್ಪರ್‌ ರುಡ್‌ ಬ್ರೆಜಿಲ್‌ನ ಫಿಲಿಪೆ ಆ್ಯಲ್ವೆಸ್‌ ವಿರುದ್ಧ 6-3, 6-4, 6-3ರಲ್ಲಿ ಗೆದ್ದು 2ನೇ ಸುತ್ತಿಗೇರಿದರು.
 

click me!