ಆಕರ್ಷಕ ಸ್ಮ್ಯಾಷ್, ಡ್ರಾಪ್‌ಗಳ ಮೂಲಕ ಸುಲಭವಾಗಿ ಗೇಮ್ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಿಂಧು ವಿಶ್ವ ನಂ.29 ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ವಿರುದ್ಧ ಸೆಣಸಲಿದ್ದಾರೆ.
ಬ್ಯಾಂಕಾಕ್(ಜು.14]: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಕೊನೆ ಭರವಸೆ ಎನಿಸಿರುವ ಸಿಂಧು, ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಸೋನಿಯಾ ಚೇಯಾ ವಿರುದ್ಧ 21-17, 21-13 ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
ಮೊದಲ ಗೇಮ್‌ನಲ್ಲಿ 4 ಅಂಕಗಳ ಮುನ್ನಡೆಯನ್ನು ಮಲೇಷ್ಯಾ ಆಟಗಾರ್ತಿಗೆ ಬಿಟ್ಟುಕೊಟ್ಟಿದ್ದ ಸಿಂಧು, ತುಸು ಆತಂಕ ಎದುರಿಸಿದರು. ಆದರೆ, ತಕ್ಷಣ ಎಚ್ಚೆತ್ತುಕೊಂಡು ಪುಟಿದೆದ್ದ ವಿಶ್ವ ನಂ.3 ಆಟಗಾರ್ತಿ 4 ಅಂಕಗಳ ಅಂತರದಲ್ಲಿ ಗೇಮ್ ಗೆದ್ದುಕೊಂಡರು. 2ನೇ ಗೇಮ್‌ನಲ್ಲಿ ಸಿಂಧುಗೆ ತಕ್ಕ ಪೈಪೋಟಿ ನೀಡಲು ಸೋನಿಯಾಗೆ ಸಾಧ್ಯವಾಗಲಿಲ್ಲ.
ಆಕರ್ಷಕ ಸ್ಮ್ಯಾಷ್, ಡ್ರಾಪ್‌ಗಳ ಮೂಲಕ ಸುಲಭವಾಗಿ ಗೇಮ್ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಿಂಧು ವಿಶ್ವ ನಂ.29 ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ವಿರುದ್ಧ ಸೆಣಸಲಿದ್ದಾರೆ.