ಆದರೆ ನಿಷೇಧ ಅವರಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಸದ್ಯ ಹಾಲೆಪ್ ಸ್ಪರ್ಧಿಸಲು ಮುಕ್ತರಾಗಿದ್ದಾರೆ.
ಬೂಖರೆಸ್ಟ್(ರೊಮೇನಿಯಾ): ಡೋಪಿಂಗ್ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರೊಮೇನಿಯಾದ ಟೆನಿಸ್ ತಾರೆ, 2 ಗ್ರ್ಯಾನ್ ಸ್ಲಾಂ ವಿಜೇತೆ ಸಿಮೋನಾ ಹಾಲೆಪ್ ಮತ್ತೆ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಸ್ಪರ್ಧಿಸಲು ಮುಕ್ತರಾಗಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ಹಾಲೆಪ್ ಮೇಲೆ 4 ವರ್ಷಗಳ ನಿಷೇಧ ಹೇರಿಲಾಗಿತ್ತು.
ಆದರೆ ನಿಷೇಧ ಅವರಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಸದ್ಯ ಹಾಲೆಪ್ ಸ್ಪರ್ಧಿಸಲು ಮುಕ್ತರಾಗಿದ್ದಾರೆ.
ಒಲಿಂಪಿಕ್ಸ್ ಹಾಕಿ: ಭಾರತಕ್ಕೆ ಕಿವೀಸ್ ಮೊದಲ ಎದುರಾಳಿ
ಲುಸ್ಸಾನ್: ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಹಾಕಿ ಸ್ಪರ್ಧೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತ ಜು.27ರಂದು ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಭಾರತ ತಂಡ ಈ ಸಲ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜು.29ರಂದು ಅರ್ಜೆಂಟೀನಾ, ಜು.30ರಂದು ಐರ್ಲೆಂಡ್, ಆ.1ರಂದು ಬೆಲ್ಜಿಯಂ ಹಾಗೂ ಆ.2ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ‘ಎ’ ಗುಂಪಿನಲ್ಲಿ ನೆದರ್‌ಲೆಂಡ್ಸ್, ಸ್ಪೇನ್, ಜರ್ಮನಿ, ಫ್ರಾನ್ಸ್, ಬ್ರಿಟನ್ ಹಾಗೂ ದ.ಆಫ್ರಿಕಾ ತಂಡಗಳಿವೆ.
Dharamsala Test: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಕನ್ನಡಿಗ ಟೆಸ್ಟ್‌ಗೆ ಪಾದಾರ್ಪಣೆ..!
ಬಾಕ್ಸಿಂಗ್: ಗೆದ್ದ ನಿಶಾಂತ್, ಸೋತು ಹೊರಬಿದ್ದ ಶಿವ
ಲುಸ್ಸಾನ್: ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಹಾಕಿ ಸ್ಪರ್ಧೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತ ಜು.27ರಂದು ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಭಾರತ ತಂಡ ಈ ಸಲ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜು.29ರಂದು ಅರ್ಜೆಂಟೀನಾ, ಜು.30ರಂದು ಐರ್ಲೆಂಡ್, ಆ.1ರಂದು ಬೆಲ್ಜಿಯಂ ಹಾಗೂ ಆ.2ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ‘ಎ’ ಗುಂಪಿನಲ್ಲಿ ನೆದರ್‌ಲೆಂಡ್ಸ್, ಸ್ಪೇನ್, ಜರ್ಮನಿ, ಫ್ರಾನ್ಸ್, ಬ್ರಿಟನ್ ಹಾಗೂ ದ.ಆಫ್ರಿಕಾ ತಂಡಗಳಿವೆ.
ಖೇಲೋ ಇಂಡಿಯಾ ಪದಕ ಗೆದ್ದವ್ರಿಗೂ ಸರ್ಕಾರಿ ನೌಕರಿ
ನವದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಅಥ್ಲೀಟ್‌ಗಳೂ ಇನ್ನು ಮುಂದೆ ಸರ್ಕಾರಿ ಹುದ್ದೆ ಪಡೆಯಲು ಅರ್ಹರು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ.
ಈ ಬಗ್ಗೆ ಬುಧವಾರ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅನುರಾಗ್. ‘ಅತ್ಯುತ್ತಮ ಕ್ರೀಡಾ ವ್ಯವಸ್ಥೆ, ತಳಮಟ್ಟದಲ್ಲೇ ಪ್ರತಿಭೆಗಳನ್ನು ಪೋಷಿಸುವುದು, ಕ್ರೀಡಾಪಟುಗಳಿಗೆ ಭವಿಷ್ಯದ ವೃತ್ತಿ ಆಯ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಇದಕ್ಕೆ ಅನುಗುಣವಾಗಿ ಖೇಲೋ ಇಂಡಿಯಾದ ಯೂತ್, ಯುನಿವರ್ಸಿಟಿ, ಪ್ಯಾರಾ ಹಾಗೂ ಚಳಿಗಾಲದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರು ಇನ್ನು ಮುಂದೆ ಸರ್ಕಾರಿ ಹುದ್ದೆಗೆ ಅರ್ಹತೆ ಪಡೆಯಲಿದ್ದಾರೆ. ಇದು ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಸೂಪರ್ ಪವರ್ ಮಾಡುವಲ್ಲಿ ಮಹತ್ವದ ಹೆಜ್ಜೆ’ ಎಂದು ಅವರು ತಿಳಿಸಿದ್ದಾರೆ. ಖೇಲೋ ಇಂಡಿಯಾ ಕ್ರೀಡಾಕೂಟವನ್ನು 2018ರಲ್ಲಿ ಆರಂಭಿಸಲಾಗಿತ್ತು.
RCB ನೀಲಿಗಣ್ಣಿನ ಹುಡುಗಿ ಪೆರ್ರಿ ಬಗ್ಗೆ ನಿಮಗೆ ಗೊತ್ತಿರದ ಟಾಪ್ 8 ಇಂಟ್ರೆಸ್ಟಿಂಗ್ ಸಂಗತಿಗಳಿವು
ಭಾರತ ಟಿಟಿ ತಂಡಗಳು ಮೊದಲ ಸಲ ಒಲಿಂಪಿಕ್ಸ್‌ಗೆ
ನವದೆಹಲಿ: ಭಾರತ ಪುರುಷ ಹಾಗೂ ಮಹಿಳಾ ಟೇಬಲ್ ಟೆನಿಸ್ ತಂಡಗಳು ಚೊಚ್ಚಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ ಇತಿಹಾಸ ಸೃಷ್ಟಿಸಿವೆ. ಇತ್ತೀಚೆಗಷ್ಟೇ ವಿಶ್ವ ಟೇಬಲ್ ಟೆನಿಸ್ ಟೀಂ ಚಾಂಪಿಯನ್‌ಶಿಪ್‌ನ ಉಭಯ ತಂಡಗಳೂ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದವು. ಕ್ವಾರ್ಟರ್ ಫೈನಲ್‌ಗೇರಿದ್ದರೆ ನೇರವಾಗಿ ಒಲಿಂಪಿಕ್ಸ್‌ಗೇರಬಹುದಿತ್ತು. ಆದರೆ ವಿಶ್ವ ರ್‍ಯಾಂಕಿಂಗ್ ಆಧಾರದಲ್ಲೂ ಕೆಲ ತಂಡಗಳು ಒಲಿಂಪಿಕ್ಸ್ ಪ್ರವೇಶ ಪಡೆಯಲಿವೆ. ಈ ಮೂಲಕ ಭಾರತದ 2 ತಂಡಗಳಿಗೂ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಲಭಿಸಿವೆ. ಸದ್ಯ ರ್‍ಯಾಂಕಿಂಗ್‌ನಲ್ಲಿ ಪುರುಷರ ತಂಡ 15ನೇ, ಮಹಿಳಾ ತಂಡ 13ನೇ ಸ್ಥಾನದಲ್ಲಿವೆ.