ಕೊಹ್ಲಿಯನ್ನೇ ಮೀರಿಸುವಂತಿದ್ದಾನೆ ಈ ಹುಡುಗ; ಭಾರತ ಎ ತಂಡಕ್ಕೆ 18 ವರ್ಷದ ಗಿಲ್ ಲಗ್ಗೆ

Published : Oct 02, 2017, 03:51 PM ISTUpdated : Apr 11, 2018, 12:59 PM IST
ಕೊಹ್ಲಿಯನ್ನೇ ಮೀರಿಸುವಂತಿದ್ದಾನೆ ಈ ಹುಡುಗ; ಭಾರತ ಎ ತಂಡಕ್ಕೆ 18 ವರ್ಷದ ಗಿಲ್ ಲಗ್ಗೆ

ಸಾರಾಂಶ

ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್​​​​ ಕೊಹ್ಲಿ ವಿಶ್ವದ ಶ್ರೇಷ್ಠ  ಬ್ಯಾಟ್ಸ್​​ಮನ್​. ಈತನ ಆಟಕ್ಕೆ ವಿಶ್ವವೇ ಸಲಾಂ ಹೊಡೆಯುತ್ತೆ. ಹೀಗಿರುವಾಗ ನಮ್ಮ ಭಾರತದಲ್ಲೇ ಮತ್ತೊಬ್ಬ ವಿರಾಟ್​​ ಕೊಹ್ಲಿ ರೆಡಿಯಾಗ್ತಿದ್ದಾನೆ. ಟೀಂ ಇಂಡಿಯಾ ನಾಯಕನನ್ನೇ ಮೀರಿಸುವಂತಹ ಒಬ್ಬ ಅದ್ಭುತ ಬ್ಯಾಟ್ಸ್'​​​​ಮನ್​​​ ತಯಾರಾಗುತ್ತಿದ್ದಾನೆ. ಭಾರತ ಎ ತಂಡಕ್ಕೆ ಲಗ್ಗೆ ಹಾಕಿರುವ ಈ ಪ್ರತಿಭೆ ಸೀನಿಯರ್ ಟೀಮ್'ಗೆ ಯಾವಾಗ ಬೇಕಾದರೂ ಸೆಲೆಕ್ಟ್ ಆಗಬಹುದು.

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್​​​​ ಕೊಹ್ಲಿಯನ್ನ ಮೀರಿಸೋ ಆಟಗಾರ ವಿಶ್ವದಲ್ಲೆಲ್ಲಾದ್ರೂ ಇದ್ದಾನಾ ಅಂತ ಯಾರನ್ನೇ ಕೇಳಿದ್ರು ಅದಕ್ಕೆ ಉತ್ತರ ನೋ ಎಂದೇ ಇರುತ್ತದೆ. ಕೊಹ್ಲಿಗೆ ಕೊಹ್ಲಿಯೇ ಸಾಟಿ ಎನ್ನುತ್ತಾರೆ. ಕೊಹ್ಲಿ ಕ್ರೀಸ್'​​ಗಿಳಿದ್ರೆ ಎಂಥ ಬೌಲರ್​​​ ಆದ್ರೂ ಗಪ್​ಚುಪ್​​. ಪಂದ್ಯವನ್ನ ಮುಗಿಸೇ ಕೊಹ್ಲಿ ಮತ್ತೆ ಡ್ರಸ್ಸಿಂಗ್​​​ ರೂಂಗೆ ಮರಳೋದು. ಇಂತಹ ಆಟಗಾರ ನಮ್ಮ ತಂಡದಲ್ಲೂ ಇರಬಾರದಿತ್ತ ಎಂದು ಎಷ್ಟೋ ಕ್ರಿಕೆಟ್​​​​ ಸಂಸ್ಥೆಗಳು ಪರಿತಪಿಸಿವೆ. ಟೋಟಲ್ಲಾಗಿ ಹೇಳಬೇಕಾದ್ರೆ ವರ್ಲ್ಡ್ಸ್ ಬೆಸ್ಟ್ ಬ್ಯಾಟ್ಸ್'ಮ್ಯಾನ್ ನಮ್ಮ ವಿರಾಟ್​​​ ಕೊಹ್ಲಿ.

ರೆಡಿಯಾಗಿದ್ದಾನೆ  ಕೊಹ್ಲಿಯನ್ನೇ ಮಿರಿಸೋ ಬ್ಯಾಟ್ಸ್​​ಮನ್​​​..!
ವಿಶ್ವ ಶ್ರೇಷ್ಠ ಬ್ಯಾಟ್ಸ್​'​ಮನ್​​ ವಿರಾಟ್​​ ಕೊಹ್ಲಿಯನ್ನೇ ಮಿರಿಸೋ ಬ್ಯಾಟ್ಸ್'​​ಮನ್ವೊಬ್ಬ​ ಭಾರತದಲ್ಲೇ ರೆಡಿಯಾಗ್ತಿದ್ದಾನೆ.  ಕೊಹ್ಲಿಯಷ್ಟೇ ಅಗ್ರೆಸ್ಸೀವ್​​, ಪವರ್​​​, ಬ್ಯಾಟಿಂಗ್​​ ಸ್ಟೈಲ್​​ ಇರೋ ಮತ್ತೊಬ್ಬ ಯುವ ಆಟಗಾರನೊಬ್ಬ ಟೀಂ ಇಂಡಿಯಾಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾನೆ. ಈ ಆಟಗಾರನೇ ಪಂಜಾಬ್'ನ ಶುಬ್'ಮನ್ ಗಿಲ್. ಈತ ಅಂಡರ್-19 ಕ್ರಿಕೆಟ್'ನಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸುತ್ತಿದ್ದಾನೆ. ಈತ ಈಗ ಭಾರತ ಎ ತಂಡಕ್ಕೆ ಲಗ್ಗೆ ಇಟ್ಟಿದ್ದಾನೆ. ಅ. 6ರಿಂದ ನಡೆಯುವ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಈತನನ್ನು ಆಯ್ಕೆ ಮಾಡಲಾಗಿದೆ.

ದ್ರಾವಿಡ್ ಗರಡಿಯಲ್ಲಿ...
ಶುಬ್'​ಮನ್​​ ಗಿಲ್​ ಈಗ ಭಾರತದ ಕ್ರಿಕೆಟ್​​ ಪ್ರೇಮಿಗಳನ್ನ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ತನ್ನ ಅದ್ಭುತ ಬ್ಯಾಟಿಂಗ್​​ನಿಂದ ವಿಶ್ವದ ಗಮನ ಸೆಳೆಯುತ್ತಿದ್ದಾನೆ. ಆದ್ರೆ  ಶುಬ್'​ಮನ್​​ ಗಿಲ್'ನನ್ನು​ ಮಿನಿ ವಿರಾಟ್​​ ಕೊಹ್ಲಿಯನ್ನಾಗಿಸಿರೋದು ಮಾತ್ರ ಬಿಸಿಸಿಐನ ದ್ರೋಣಾಚಾರ್ಯ ರಾಹುಲ್​​ ದ್ರಾವಿಡ್​​.

ರಾಹುಲ್​ ದ್ರಾವಿಡ್'​​ನ ಗರಡಿಯಲ್ಲಿ ಪಳಗುತ್ತಿರುವ ಗಿಲ್​​ ತನ್ನ ಗುರು ಹೇಳಿದಂತೆ ಕೇಳುತ್ತಿದ್ದಾರೆ. ಇನ್ನು, ಮತ್ತೊಬ್ಬ ವಿರಾಟ್​​ ಕೊಹ್ಲಿಯನ್ನ ತಯಾರಿಸಲೇಬೇಕೆಂದು ಪಣ ತೊಟ್ಟಿರುವ ದ್ರಾವಿಡ್​​ ಆ ಕಾರ್ಯಕ್ಕೆ ಗಿಲ್'​ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ದ್ರಾವಿಡ್​​ ಈ ಮಹಾನ್​ ಕಾರ್ಯದಲ್ಲಿ ಎಷ್ಟು ಯಶಸ್ವಿಯಾಗಿದ್ದಾರೆ ಅನ್ನೋದಕ್ಕೆ ಮೊನ್ನೆ ಮುಕ್ತಾಯವಾದ ಇಂಗ್ಲೆಂಡ್​​​ ಅಂಡರ್​​​ 19 ವಿರುದ್ಧದ ಸರಣಿ.

ರನ್ ಮೆಷೀನ್:
ಇಂಗ್ಲೆಂಡ್'ನಲ್ಲಿ ನಡೆದ ಇಂಗ್ಲೆಂಡ್​​ ಅಂಡರ್​​ 19 ತಂಡದ ವಿರುದ್ಧದ ಸರಣಿಯಲ್ಲಿ ಶುಬ್​ಮನ್​​ ಗಿಲ್​ ಒಟ್ಟು 4 ಇನ್ನಿಂಗ್ಸ್'​​​ಗಳಲ್ಲಿ ಬರೊಬ್ಬರಿ 278ರನ್​ಗಳನ್ನ ಕಲೆಹಾಕಿದ್ದಾರೆ. 93 ರನ್ ಸರಾಸರಿ ಹಾಗೂ ​​ 108 ಸ್ಟ್ರೈಕ್​ ರೇಟ್'ನಲ್ಲಿ ಇವರು ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಮತ್ತು 1 ಅರ್ಧಶತಕ ಕೂಡ ಕೂಡಿದೆ.  147 ಅವರ ಬೆಸ್ಟ್​​ ಸ್ಕೋರ್​​ ಆಗಿದೆ.

ಅದಕ್ಕೂ ಮೊದಲು ಭಾರತದಲ್ಲಿ ಅದೇ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಗಿಲ್ ಬರೋಬ್ಬರಿ 117 ರನ್ ಸರಾಸರಿಯಂತೆ 351 ರನ್ ಚಚ್ಚಿದ್ದ. ಸತತ 2 ಶತಕಗಳನ್ನು ಭಾರಿಸಿದ್ದ.

ಈ ರೆಕಾರ್ಡ್​ ನೋಡಿದ್ರೆನೇ ಗೊತ್ತಾಗುತ್ತೆ ದ್ರಾವಿಡ್​​​ ಗರಡಿಯಲ್ಲಿ ಮಿನಿ ಕೊಹ್ಲಿ ಹೇಗೆ ರೆಡಿಯಾಗ್ತಿದ್ದಾನೆ ಅಂತ. ಸದ್ಯ ವಿಶ್ವ ಕ್ರಿಕೆಟ್​​ನಲ್ಲಿ ಕೇವಲ ಶುಬ್​'ಮನ್​​ ಗಿಲ್'​ನದ್ದೇ ಮಾತಾಗಿಬಿಟ್ಟಿದೆ. ಒಬ್ಬ ಕೊಹ್ಲಿಯ ಕಾಟವೇ ತಾಳಲಾಗುತ್ತಿಲ್ಲ. ಇನ್ನು ಮತ್ತೊಬ್ಬ ಕೊಹ್ಲಿ ಬಂದ್ರೆ ನಮ್ಮ ತಂಡಗಳ ಕಥೆ ಏನು ಅಂತ ಕೈ ಕೈ ಹಿಸಿಕಿಕೊಳ್ಳುತ್ತಿವೆ ಎಲ್ಲಾ ದೇಶದ ಕ್ರಿಕೆಟ್​​​ ಸಂಸ್ಥೆಗಳು.

- ಅಮಿತ್ ನೆಲಗದರನಹಳ್ಳಿ, ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆ್ಯಶಸ್‌ ಮೂರನೇ ಟೆಸ್ಟ್‌ನಲ್ಲಿ ಭುಗಿಲೆದ್ದ ಸ್ನಿಕೋ ಮೀಟರ್ ವಿವಾದ!
Ind vs SA 5th T20I: ಇಂದು ಭಾರತ vs ದಕ್ಷಿಣ ಆಫ್ರಿಕಾ ಫೈನಲ್ ಫೈಟ್