ಟೀಂ ಇಂಡಿಯಾದಲ್ಲಿದೆ ಚಿನ್ನದ ಮೊಟ್ಟೆ ಇಡೋ ಕೋಳಿ..!: ತಂಡದಲ್ಲಿದ್ರೆ ನಾಯಕ ಕೊಹ್ಲಿಗೆ ನೋ ಟೆಕ್ಷನ್

Published : Oct 02, 2017, 03:22 PM ISTUpdated : Apr 11, 2018, 12:57 PM IST
ಟೀಂ ಇಂಡಿಯಾದಲ್ಲಿದೆ ಚಿನ್ನದ ಮೊಟ್ಟೆ ಇಡೋ ಕೋಳಿ..!: ತಂಡದಲ್ಲಿದ್ರೆ ನಾಯಕ ಕೊಹ್ಲಿಗೆ ನೋ ಟೆಕ್ಷನ್

ಸಾರಾಂಶ

ಟೀಂ ಇಂಡಿಯಾದಲ್ಲಿ ಚಿನ್ನದ ಮೊಟ್ಟೆ ಇಡೋ ಕೋಳಿ ಇದೆ. ಈ ಕೋಳಿ ತಂಡದಲ್ಲಿದ್ರೆ ನಾಯಕ ವಿರಾಟ್​​ ಕೊಹ್ಲಿಗೆ ನೋ ಟೆಕ್ಷನ್​. ವಿಕೆಟ್​​ ಬೇಕು ಅಂದ್ರೆ ಸಾಕು ಥಟ್​​ ಅಂತ ವಿಕೆಟ್​​ ತೆಗೆಯುತ್ತೆ. ಮ್ಯಾಚ್​​ ಫಿನಿಶ್​​​​ ಮಾಡು ಅಂದ್ರೆ ಕ್ರೀಸ್​ನಲ್ಲೇ ನಿಂತು ಮ್ಯಾಚ್​​ ಕ್ಲೋಸ್​​ ಮಾಡುತ್ತೆ ಈ ಕೋಳಿ. ಇನ್ನೂ ಎರಡೂ ಬೇಡ ಕೀಪಿಂಗ್​ ಮಾಡು ಅಂದ್ರೆ ಅದಕ್ಕೂ ಸೈ.

ಇದೇನಪ್ಪ ಟೀಂ ಇಂಡಿಯಾದಲ್ಲಿ ಚಿನ್ನದ ಕೋಳಿ ಇದೆ ಅಂತ್ತಿದ್ದಾರಲ್ಲ. ನಾವೆಂದೂ ನೋಡೇ ಇಲ್ವಲ್ಲ ಅಂತ ಕನ್​ಫ್ಯೂಸ್​​ ಆಗಬೇಡಿ. ನಾವು ಚಿನ್ನದ ಕೋಳಿ ಅಂದಿದ್ದು ಟೀಂ ಇಂಡಿಯಾದಲ್ಲಿರೋ ಚಿನ್ನದಂತ ಹುಡುಗ ಕೇದಾರ್​​ ಜಾಧವ್​​​ರನ್ನ. ಹೌದು, ಈತ ಕೊಹ್ಲಿ ಟೀಂನಲ್ಲಿರೋ ಚಿನ್ನದ ಕೋಳಿ. ಪ್ರತೀ ಪಂದ್ಯದಲ್ಲೂ ಬ್ಯಾಟ್​​ ಮತ್ತು ಬಾಲ್​​​​ನಲ್ಲಿ ನಾಯಕನಿಗೆ ತನ್ನದೇ ಕೊಡುಗೆ ನೀಡಿ ಗೆಲುವಿಗೆ ಕಾರಣನಾಗ್ತಾನೆ.

ಸಕಲಕಲಾವಲ್ಲಭ ಕೇದಾರ್​​​ ಜಾಧವ್​​

30ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜಾಧವ್​​ ಲೇಟಾಗಿ ಬಂದ್ರೂ ಲೇಟೆಸ್ಟಾಗಿ ಎಂಟ್ರಿ ಕೊಟ್ಟಿದ್ದಾರೆ. ಈತನ ಭತ್ತಳಿಕೆಯಲ್ಲಿಲ್ಲದ ಬಾಣಗಳೇ ಇಲ್ಲ. ಬ್ಯಾಟಿಂಗ್-ಬೌಲಿಂಗ್​ ಎರಡರಲ್ಲೂ ಮ್ಯಾಜಿಕ್​ ಮಾಡೋ ಜಾದೂಗಾರ. ಈ ಎರಡು ಸಾಲದೆಂಬಂತೆ ವಿಕೆಟ್​​ ಕೀಪಿಂಗ್​ನಲ್ಲೂ ಈತ ಬೆಸ್ಟ್​​.

ಬ್ಯಾಟಿಂಗ್​ನಲ್ಲಿ ಫಿನಿಶರ್..​​ ಬೌಲಿಂಗ್​ನಲ್ಲಿ ಸ್ಲಿಂಗರ್​​​..

ಜಾಧವ್​ ಎಂಥ ಮ್ಯಾಚ್​​ ಫಿನಿಶರ್​​ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಈತ ಬೌಲಿಂಗ್​​ ಒಳಮರ್ಮ ಮಾತ್ರ ಯಾರಿಗೂ ಗೊತ್ತೇ ಇಲ್ಲ. ಲಂಕಾ ನಾಡಿನ ಮಾಲಿಂಗ ರೀತಿ ಬೌಲ್​​ ಮಾಡೋ ಈತನ ಸ್ಟೈಲ್​ಗೆ ವಿಶ್ವವೇ ಫಿದಾ ಆಗ್ಬಿಟ್ಟಿದೆ. ಅಷ್ಟೇ ಅಲ್ಲ ಜಾಧವ್​ ಬೌಲಿಂಗ್​ ಸ್ಟೈಲ್​'ಗೆ ಸ್ಲಿಂಗರ್​​​ ಬೌಲಿಂಗ್​ ಎಂದು ನಾಮಕರಣ ಮಾಡಿದ್ದಾರೆ.

ಬೌಲಿಂಗ್​ ಮಾಡಿದ್ರೆ ವಿಕೆಟ್​​ ಗ್ಯಾರೆಂಟಿ: 10 ಓವರ್ ಕೋಟ ಮುಗಿಸಿದ್ದು ನಿನ್ನೆಯೇ

ಇದುವರೆಗೂ ಸ್ಲಿಂಗರ್​​​ ಜಾಧವ್​ ಬೌಲಿಂಗ್​ ಮಾಡಲು ಇಳಿದ್ದಾಗಲೆಲ್ಲಾ ವಿಕೆಟ್​​ ಪಡೆಯೋದು ಗ್ಯಾರೆಂಟಿ. ಅಷ್ಟೇ ಅಲ್ಲ ಈತ ಬ್ರೇಕ್​ ನೀಡೋ ಬೌಲರ್​. ಮೈನ್​ ಬೌಲರ್​​ಗಳೆಲ್ಲಾ ವಿಕೆಟ್​​ ಪಡೆಯಲು ವಿಫಲರಾದಾಗ ನಾಯಕ ವಿರಾಟ್​​ ಕೊಹ್ಲಿ ಹೋಗೋದೇ ಕೇದರ್​ ಬಳಿ. ಅಷ್ಟರ ಮಟ್ಟಿಗೆ ಜಾಧವ್​ ಈಗ ಹವಾ ಕ್ರಿಯೇಟ್​​ ಮಾಡಿದ್ದಾರೆ.

ವಿಚಿತ್ರ ಏನ್​ ಗೊತ್ತಾ ಇಂತಹ ಬೆಸ್ಟ್​​ ಬೌಲರ್​​ ನಿನ್ನೆಯವರೆಗೂ ಒಂದೇ ಒಂದು ಬಾರಿಯೂ 10 ಓವರ್​'ನ ಕೋಟ ಮುಗಿಸಿರಲಿಲ್ಲ. ನಿನ್ನೆಯ 34ನೇ ಪಂದ್ಯದಲ್ಲಿ ಜಾಧವ್​ ಮೊದಲ ಬಾರಿಗೆ 10 ಓವರ್​​ ಬೌಲ್​ ಮಾಡಿದ್ರು.

ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಸದ್ಯ ರಾರಾಜಿಸುತ್ತಿರುವ ಜಾಧವ್​ ವಿಕೆಟ್​​ ಕೀಪಿಂಗ್​ನಲ್ಲೂ ಬೆಸ್ಟ್​​. ಆದ್ರೆ ಸದ್ಯ ಟೀಂ ಇಂಡಿಯಾದಲ್ಲಿ ಧೊನಿ ಇರೋದ್ರಿಂದ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ. ಇದನೆಲ್ಲಾ ನೋಡ್ತಿದ್ರೆ ಜಾಧವ್​ ನಿಜಕ್ಕೂ ಚಿನ್ನದ ಮೊಟ್ಟೆಯನ್ನಿಡೋ ಕೋಳಿನೇ. ಆದ್ರೂ ಕೇದಾರ್ 2019ರ ವಿಶ್ವಕಪ್'​ಗೆ ಆಡೋದು ಡೌಟ್, ಅದಕ್ಕೆ ಒಂದೇ ಕಾರಣ ವಯಸ್ಸು. ಆದ್ರೆ ಜಾಧವ್​ ಇಂತಹ ಅಡೆತಡೆಗಳನ್ನೆಲ್ಲಾ ಮೆಟ್ಟಿ ನಿಲ್ಲಲಿ. ವಿಶ್ವಕಪ್​​ನಲ್ಲಿ ಅಬ್ಬರಿಸಲಿ ಎಂಬುದೆ ನಮ್ಮ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌
ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು?