ಬೃಹತ್ ಮುನ್ನಡೆ ಪಡೆದ ಕರ್ನಾಟಕ, ಶ್ರೇಯಸ್ ಆಕರ್ಷಕ ಶತಕ: ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿ ಮುಂಬೈ

By Suvarna Web DeskFirst Published Dec 9, 2017, 5:57 PM IST
Highlights

ಶ್ರೇಯಸ್ ಗೋಪಾಲ್ ಹಾಗೂ ಶ್ರೀನಾಥ್ ಅರವಿಂದ್ ಅವರ ಜುಗಲ್ ಬಂದಿ. 15.1 ಓವರ್'ಗಳಲ್ಲಿ ಇವರಿಬ್ಬರು 92 ರನ್'ಗಳ ದಾಖಲೆ ಜೊತೆಯಾಟವಾಡಿದರು

ನಾಗ್ಪುರ(ಡಿ.09): ಶ್ರೇಯಸ್ ಗೋಪಾಲ್ ಅವರ ಅಜೇಯ ಶತಕ(150) ಹಾಗೂ ವೇಗಿ ಮಧ್ಯಮ ವೇಗಿ ಶ್ರೀನಾಥ್ ಅರವಿಂದ್ ಅವರ ಅರ್ಧ ಶತಕದ(51) ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ರಣಜಿ ಕ್ವಾರ್ಟ್'ರ್ ಫೈನಲ್ ಪಂದ್ಯದಲ್ಲಿ 396 ರನ್'ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಮೂರನೆ ದಿನವಾದ ಇಂದು 395/6 ರನ್'ನೊಂದಿಗೆ ದಿನದಾಟ ಪ್ರಾರಂಭಿಸಿದ ರಾಜ್ಯ ತಂಡ ಪಂದ್ಯ ಶುರುವಾದ 2ನೇ ಓವರ್'ನಲ್ಲಿಯೇ ನಾಯಕ ವಿನಯ್ ಕುಮಾರ್(37) ಅವರ ವಿಕೇಟ್ ಕಳೆದು ಕೊಂಡಿತು.ಮತ್ತೊಬ್ಬ ಬೌಲರ್  ಕೆ. ಗೌತಮ್  ಒದೆರಡು ಗಂಟೆಗಳ ಕಾಲ ಆಟವಾಡಿ ಧವಳ್ ಕುಲಕರ್ಣಿಗೆ(38) ವಿಕೇಟ್ ಒಪ್ಪಿಸಿದರು. ಮತ್ತೊಬ್ಬ ಬೌಲರ್ ಅಭಿಮನ್ಯು ಮಿಥುನ್ ಬಂದ ದಾರಿಯಲ್ಲೇ ವಾಪಸ್ ಆದರು.

ಅನಂರತ ಶುರುವಾದದ್ದೆ ಶ್ರೇಯಸ್ ಗೋಪಾಲ್ ಹಾಗೂ ಶ್ರೀನಾಥ್ ಅರವಿಂದ್ ಅವರ ಜುಗಲ್ ಬಂದಿ. 15.1 ಓವರ್'ಗಳಲ್ಲಿ  ಇವರಿಬ್ಬರು 92 ರನ್'ಗಳ ದಾಖಲೆ ಜೊತೆಯಾಟವಾಡಿದರು.   ತಂಡ 570 ರನ್ ಗಳಿಸಿದ್ದಾಗ ಎಸ್. ಅರವಿಂದ್(51: 41 ಎಸೆತ, 9 ಬೌಂಡರಿ, 1 ಸಿಕ್ಸ್'ರ್) ಶಿವಂ ಮಲ್ಹೋತ್ರಾ ಅವರಿಗೆ ವಿಕೇಟ್ ಒಪ್ಪಿಸುವುದರೊಂದಿಗೆ ರಾಜ್ಯದ ಆಟ ಮುಕ್ತಾಯವಾಯಿತು. 274 ಎಸೆತಗಳಲ್ಲಿ  11 ಬೌಂಡರಿ ಗಳೊಂದಿಗೆ 150 ರನ್ ಗಳಿಸಿದ ಶ್ರೇಯಸ್ ಅಜೇಯರಾಗಿ ಉಳಿಸಿದರು. ಮುಂಬೈ ತಂಡದ ಪರ ಸ್. ದುಬೆ 98/5  ಹಾಗೂ ಎಸ್. ಮಲ್ಹೋತ್ರಾ 97/3 ವಿಕೇಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.

ಮುಂಬೈಗೆ 397 ರನ್ ಹಿನ್ನಡೆ

397 ರನ್ ಹಿನ್ನಡೆ ಅನುಭವಿಸಿ 2ನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡ 120 ರನ್'ಗಳಿಗೆ 3 ವಿಕೇಟ್'ಕೊಂಡು ಸಂಕಷ್ಟದಲ್ಲಿದೆ. ಆರಂಭಿಕ ಆಟಗಾರರಾದ ಪೃಥ್ವಿ ಶಾ(14) ಅವರನ್ನು ಶ್ರೀನಾಥ್ ಅರವಿಂದ್ ಬೌಲ್ಡ್ ಮಾಡಿದರು. ಮತ್ತೊಬ್ಬ ಆರಂಭಿಕ ಆಟಗಾರ ಗೋಕುಲ್ ಬಿಸ್ತಾ(20) ಹಾಗೂ 2ನೇ ಕ್ರಮಾಂಕದ ಆಟಗಾರ ಅಕಿಲ್ ಅರ್ವೇಡ್ಕ'ರ್(27) ಅವರನ್ನು ಕೆ. ಗೌತಮ್ ಪೆವಿಲಿಯನ್'ಗೆ ಕಳಿಸಿದರು. ಎದುರಾಳಿ ತಂಡ 120/3 ಕಳೆದುಕೊಂಡಿದ್ದು, ಸೂರ್ಯ'ಕುಮಾರ್ ಯಾದವ್ (55) ಹಾಗೂ ಆಕಾಶ್ ಪಾರ್ಕ'ರ್(3) ಆಟವಾಡುತ್ತಿದ್ದಾರೆ.

 

ಸ್ಕೋರ್

ಕರ್ನಾಟಕ ಮೊದಲ ಇನ್ನಿಂಗ್ಸ್ 163.3 ಓವರ್'ಗಳಲ್ಲಿ  570/10

(ಶ್ರೇಯಸ್ ಗೋಪಾಲ್ 150,ಸಿ.ಕೆ. ಗೌತಮ್ 79, ಮಾಯಾಂಕ್ ಅಗರ್'ವಾಲ್ 78, ಎಸ್.ಅರವಿಂದ್ 51, ಎಸ್. ದುಬೆ 98/5 )

ಮುಂಬೈ ಮೊದಲ ಇನ್ನಿಂಗ್ಸ್ 173 ಹಾಗೂ 2ನೇ ಇನ್ನಿಂಗ್ಸ್  44 ಓವರ್'ಗಳಲ್ಲಿ  120/3

(ಎಸ್. ಯಾದವ್ 55, ಕೆ. ಗೌತಮ್ 30/2)

(3ನೇ ದಿನಾಂತ್ಯಕ್ಕೆ)

click me!