ಭಾರತಕ್ಕೆ ಏಷ್ಯಾ ಕಪ್ ಕ್ರಿಕೆಟ್ ಆತಿಥ್ಯ ಕೈತಪ್ಪುವ ಆತಂಕ..?

By Suvarna Web DeskFirst Published Dec 9, 2017, 2:39 PM IST
Highlights

ಕಳೆದ ವರ್ಷ ನಡೆದಿದ್ದ ಅಂಡರ್ 19 ಏಷ್ಯಾಕಪ್‌'ಗೂ ಭಾರತ ಸರ್ಕಾರ ಅನುಮತಿ ನೀಡಿರಲಿಲ್ಲ. ಆಗ ಆತಿಥ್ಯ ಶ್ರೀಲಂಕಾ ಪಾಲಾಗಿತ್ತು. ನ.21ರಂದು ನಡೆದ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತಾದರೂ, ಈ ಬಗ್ಗೆ ಯಾವುದೇ ನಿರ್ಧಾರ ಹೊರಬಂದಿಲ್ಲ.

ಮುಂಬೈ(ಡಿ.09): ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ಭಾರತದ ಕೈತಪ್ಪುವ ಸಾಧ್ಯತೆ ದಿನ ಕಳೆದಂತೆ ದಟ್ಟವಾಗುತ್ತಿದೆ. ಪಾಕಿಸ್ತಾನದ ಆಟಗಾರರಿಗೆ ಭಾರತ ಸರ್ಕಾರ ವೀಸಾ ನೀಡುವುದು ಅನುಮಾನ ಇರುವ ಕಾರಣ, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಕಳೆದ ವರ್ಷ ನಡೆದಿದ್ದ ಅಂಡರ್ 19 ಏಷ್ಯಾಕಪ್‌'ಗೂ ಭಾರತ ಸರ್ಕಾರ ಅನುಮತಿ ನೀಡಿರಲಿಲ್ಲ. ಆಗ ಆತಿಥ್ಯ ಶ್ರೀಲಂಕಾ ಪಾಲಾಗಿತ್ತು. ನ.21ರಂದು ನಡೆದ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತಾದರೂ, ಈ ಬಗ್ಗೆ ಯಾವುದೇ ನಿರ್ಧಾರ ಹೊರಬಂದಿಲ್ಲ.

ಪಂದ್ಯಾವಳಿ ನಡೆಸಲು ಸರ್ಕಾರ ಅನುಮತಿ ನೀಡುವುದು ಕಷ್ಟ ಸಾಧ್ಯವಾಗಿದೆ. ಇತ್ತೀಚೆಗೆ ನಡೆದ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್ ವೇಳೆ ಪಾಕಿಸ್ತಾನದ ಕ್ರೀಡಾಪಟುಗಳಿಗೆ ಭಾರತ ಸರ್ಕಾರ ವೀಸಾ ನೀಡಿತ್ತು. ಆದರೆ, ಕ್ರಿಕೆಟ್ ವಿಷಯದಲ್ಲಿ ಮಾತ್ರ ಭಾರತ ಸರ್ಕಾರದ ನಡೆ ಬಹಳ ಖಡಕ್ ಆಗಿದೆ. ಕ್ರಿಕೆಟ್ ಭಾವನಾತ್ಮಕ ವಿಷಯವಾಗಿರುವ ಕಾರಣ ಭಾರತ ಸರ್ಕಾರ, ಪಾಕ್ ಆಟಗಾರಿಗೆ ವೀಸಾ ನೀಡುವುದು ಅನುಮಾನವಾಗಿದ್ದು, ಏಷ್ಯಾಕಪ್ ಆತಿಥ್ಯ ಭಾರತದ ಕೈತಪ್ಪುವ ಸಾಧ್ಯತೆದಟ್ಟವಾಗಿದೆ.

click me!