2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಆತಿಥ್ಯ
ವಿಕ್ಟೋರಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆಗೆ ಅವಕಾಶ
ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕುಸ್ತಿ-ಆರ್ಚರಿಗಿಲ್ಲ ಅವಕಾಶ
ಲಂಡನ್(ಅ.05): ಮುಂಬರುವ 2026ರ ವಿಕ್ಟೋರಿಯಾ ಕಾಮನ್‌ವೆಲ್ತ್ ಗೇಮ್ಸ್‌ಗೆ ಶೂಟಿಂಗ್ ಮತ್ತು ಪ್ಯಾರಾ ಶೂಟಿಂಗ್ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ಸ್ಪರ್ಧೆಯನ್ನು ಕೈಬಿಡಲಾಗಿತ್ತು. ಅಕ್ಟೋಬರ್ 04ರಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್, ಮುಂಬರುವ 2026ರ ವಿಕ್ಟೋರಿಯಾ ಕಾಮನ್‌ವೆಲ್ತ್ ಗೇಮ್ಸ್‌ನ ಸ್ಪರ್ಧೆಗಳ ಹೆಸರನ್ನು ಪ್ರಕಟಿಸಲಾಗಿದ್ದು, ಇದೇ ಮೊದಲ ಬಾರಿಗೆ ಗಾಲ್ಫ್ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ.
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವು ಶೂಟಿಂಗ್ ಸ್ಪರ್ಧೆಯಲ್ಲಿ ಪದಕಗಳ ಬೇಟೆಯಾಡಿದೆ. ಕಾಮನ್‌ವೆಲ್ತ್ ಗೇಮ್ಸ್‌ನ ಇತಿಹಾಸದಲ್ಲಿ ಭಾರತದ ಶೂಟರ್‌ಗಳು ಒಟ್ಟು 135 ಪದಕಗಳನ್ನು ಕೊಳ್ಳೆ ಹೊಡೆದಿದ್ದಾರೆ. ಇದರಲ್ಲಿ 63 ಚಿನ್ನದ ಪದಕಗಳು ಸೇರಿವೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು ಅಸಾಧಾರಣ ಪ್ರದರ್ಶನ ತೋರಿದ್ದಾರೆ. ಇನ್ನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕುಸ್ತಿ, ಭಾರತದ ಯಶಸ್ವಿ ಕ್ರೀಡೆ ಎನಿಸಿಕೊಂಡಿದೆ. ಕುಸ್ತಿಯಲ್ಲಿ ಭಾರತ 49 ಚಿನ್ನ ಸಹಿತ ಒಟ್ಟು 114 ಪದಕಗಳನ್ನು ಜಯಿಸಿದೆ. ಮುಂಬರುವ 2026ರ ವಿಕ್ಟೋರಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕುಸ್ತಿ ಹಾಗೂ ಆರ್ಚರಿಯನ್ನು ಕೈಬಿಡಲಾಗಿದೆ.
ಈ ಮೊದಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು, ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಬಳಿ 2026ರ ವಿಕ್ಟೋರಿಯಾ ಗೇಮ್ಸ್‌ನಲ್ಲಿ ಕುಸ್ತಿ ಹಾಗೂ ಆರ್ಚರಿಯನ್ನು ಸೇರ್ಪಡೆ ಮಾಡುವಂತೆ ಮನವಿ ಮಾಡಿಕೊಟ್ಟಿತ್ತು. ಆದರೆ ಐಒಎನ ಮನವಿಯನ್ನು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಪುರಸ್ಕರಿಸಿಲ್ಲ. ಇನ್ನು 2026ರ ವಿಕ್ಟೋರಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೋಸ್ಟಲ್ ರೋವಿಂಗ್, ಗಾಲ್ಫ್ ಹಾಗೂ ಬಿಎಂಎಕ್ಸ್ ಕ್ರೀಡೆಗಳನ್ನು ಇದೇ ಮೊದಲ ಬಾರಿಗೆ ಹೊಸದಾಗಿ ಪರಿಚಯಿಸಿದೆ.
ಅಥ್ಲೀಟ್‌ಗಳ ಕ್ಷೇಮಾಭಿವೃದ್ಧಿಗೆ ಅಭಿನವ್ ಬಿಂದ್ರಾ ಪಂಚ ಸೂತ್ರ
2026ರ ವಿಕ್ಟೋರಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇರಲಿರುವ ಸ್ಪರ್ಧೆಗಳ ವಿವರ ಹೀಗಿದೆ ನೋಡಿ:
ಆಕ್ವೆಟಿಕ್ಸ್: (ಸ್ವಿಮ್ಮಿಂಗ್, ಪ್ಯಾರಾ ಸ್ವಿಮ್ಮಿಂಗ್ & ಡೈವಿಂಗ್)
ಅಥ್ಲೆಟಿಕ್ಸ್ & ಪ್ಯಾರಾ ಅಥ್ಲೆಟಿಕ್ಸ್
ಬ್ಯಾಡ್ಮಿಂಟನ್
3*3 ಬಾಸ್ಕೆಟ್‌ಬಾಲ್, 3*3 ವೀಲ್‌ಚೇರ್ ಬಾಸ್ಕೆಟ್‌ಬಾಲ್
ಬಾಕ್ಸಿಂಗ್
ಬೀಚ್ ವಾಲಿಬಾಲ್
ಕೋಸ್ಟಲ್ ರೋವಿಂಗ್
ಟಿ20 ಕ್ರಿಕೆಟ್(ಮಹಿಳಾ ಕ್ರಿಕೆಟ್)
ಸೈಕ್ಲಿಂಗ್(ಬಿಎಂಎಕ್ಸ್)
ಸೈಕ್ಲಿಂಗ್(ಮೌಂಟೇನ್ ಬೈಕ್)
ಸೈಕ್ಲಿಂಗ್(ರೋಡ್)
ಸೈಕ್ಲಿಂಗ್(ಟ್ರ್ಯಾಕ್ & ಪ್ಯಾರಾ ಟ್ರ್ಯಾಕ್)
ಗಾಲ್ಫ್
ಜಿಮ್ನಾಸ್ಟಿಕ್ಸ್(ಆರ್ಟಿಸ್ಟಿಕ್)
ಹಾಕಿ
ಲಾನ್ ಬೌಲ್ಸ್ & ಪ್ಯಾರಾ ಲೌನ್ ಬಾಲ್ಸ್
ನೆಟ್‌ಬಾಲ್
ರಗ್ಬಿ ಸವೆನ್ಸ್
ಶೂಟಿಂಗ್ & ಶೂಟಿಂಗ್ ಪ್ಯಾರಾ ಸ್ಪೋರ್ಟ್
ಸ್ಕ್ವಾಶ್
ಟೇಬಲ್ ಟೆನಿಸ್ & ಪ್ಯಾರಾ ಟೇಬಲ್ ಟೆನಿಸ್
ಟ್ರೈಟಲಾನ್ & ಪ್ಯಾರಾ ಟ್ರೈಟಲಾನ್
ವೇಟ್ ಲಿಫ್ಟಿಂಗ್ & ಪ್ಯಾರಾ ವೇಟ್‌ಲಿಫ್ಟಿಂಗ್