ಶೂಟರ್‌ ಅನೀಶ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ ಟಿಕೆಟ್‌ ಕನ್ಫರ್ಮ್!

By Kannadaprabha NewsFirst Published Oct 31, 2023, 10:00 AM IST
Highlights

ಇದು ಕೂಟದಲ್ಲಿ ಭಾರತಕ್ಕೆ ಲಭಿಸಿದ 5ನೇ ಹಾಗೂ ಒಟ್ಟಾರೆ ಶೂಟಿಂಗ್‌ನಲ್ಲಿ ಲಭಿಸಿದ 12ನೇ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ. ಇದೇ ವೇಳೆ ಪುರುಷರ ಟ್ರ್ಯಾಪ್‌ ತಂಡ ವಿಭಾಗದಲ್ಲಿ ಜೊರವರ್‌ ಸಿಂಗ್‌, ಕೈನನ್‌ ಚೆನೈ, ಪೃಥ್ವಿರಾಜ್‌ ಬೆಳ್ಳಿ ಪದಕ ಜಯಿಸಿದರು. ಭಾರತ ಸದ್ಯ ಕೂಟದಲ್ಲಿ ಒಟ್ಟಾರೆ 13 ಚಿನ್ನ ಸೇರಿ 40 ಪದಕಗಳನ್ನು ಪಡೆದು, ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ.

ಚಾಂಗ್ವೊನ್‌(ಅ.31): ಭಾರತದ ತಾರಾ ಶೂಟರ್‌ ಅನೀಶ್‌ ಭನ್ವಾಲಾ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಸೋಮವಾರ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 21 ವರ್ಷದ ಅನೀಶ್‌ ಪುರುಷರ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರು ಅರ್ಹತಾ ಸುತ್ತಿನಲ್ಲಿ 588 ಅಂಕಗಳಿಸಿ 3ನೇ ಸ್ಥಾನಿಯಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 

ಇದು ಕೂಟದಲ್ಲಿ ಭಾರತಕ್ಕೆ ಲಭಿಸಿದ 5ನೇ ಹಾಗೂ ಒಟ್ಟಾರೆ ಶೂಟಿಂಗ್‌ನಲ್ಲಿ ಲಭಿಸಿದ 12ನೇ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ. ಇದೇ ವೇಳೆ ಪುರುಷರ ಟ್ರ್ಯಾಪ್‌ ತಂಡ ವಿಭಾಗದಲ್ಲಿ ಜೊರವರ್‌ ಸಿಂಗ್‌, ಕೈನನ್‌ ಚೆನೈ, ಪೃಥ್ವಿರಾಜ್‌ ಬೆಳ್ಳಿ ಪದಕ ಜಯಿಸಿದರು. ಭಾರತ ಸದ್ಯ ಕೂಟದಲ್ಲಿ ಒಟ್ಟಾರೆ 13 ಚಿನ್ನ ಸೇರಿ 40 ಪದಕಗಳನ್ನು ಪಡೆದು, ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ.

Latest Videos

ನಂ.1 ಪಟ್ಟದಿಂದ ಸಾತ್ವಿಕ್‌, ಚಿರಾಗ್‌ ಶೆಟ್ಟಿ ಕೆಳಕ್ಕೆ

ನವದೆಹಲಿ: ಇತ್ತೀಚೆಗಷ್ಟೇ ಬಿಡಬ್ಲ್ಯುಎಫ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎನಿಸಿಕೊಂಡಿದ್ದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ನಂ.1 ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದಿತ್ತು. ಹೀಗಾಗಿ ಸುಮಾರು 7000 ಅಂಕಗಳನ್ನು ಕಳೆದುಕೊಳ್ಳಲಿರುವ ಭಾರತೀಯ ಜೋಡಿ ಮಂಗಳವಾರ ಪ್ರಕಟಗೊಳ್ಳಲಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿಯಲಿದೆ ಎಂದು ವರದಿಯಾಗಿದೆ.

ಕೊಹ್ಲಿ ಹುಟ್ಟಹಬ್ಬ ದಿನ INDvSA ಪಂದ್ಯ; ಈಡನ್ ಗಾರ್ಡನ್ಸಲ್ಲಿ ಕೇಕ್, 70 ಸಾವಿರ ಮಾಸ್ಕ್, ಸಿಡಿಮದ್ದು ಪ್ರದರ್ಶನ!

ರಾಷ್ಟ್ರೀಯ ಗೇಮ್ಸ್‌: ಮೂರು ಚಿನ್ನ ಸೇರಿ ರಾಜ್ಯಕ್ಕೆ ಮತ್ತೆ 9 ಪದಕ..!

ಪಣಜಿ: 37ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ ಪದಕ ಬೇಟೆ ಮುಂದುವರಿಸಿದ್ದು, ಸೋಮವಾರ ಮತ್ತೆ 3 ಚಿನ್ನ ಸೇರಿ 9 ಪದಕ ಬಾಚಿಕೊಂಡಿದೆ. ಈಜಿನ ಜೊತೆ ಬಿಲಿಯಾರ್ಡ್ಸ್‌-ಸ್ನೂಕರ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಭಾರಿ ಯಶಸ್ಸು ಸಾಧಿಸಿದ್ದಾರೆ.

ಈಜು ಸ್ಪರ್ಧೆಯ ಮಹಿಳೆಯರ 4*100 ಮೆಡ್ಲೆ ವಿಭಾಗದಲ್ಲಿ ರಿಧಿಮಾ, ಲಿನೈಶಾ, ನೀನಾ ವೆಂಕಟೇಶ್‌, ಧಿನಿಧಿ ಅವರನ್ನೊಳಗೊಂಡ ತಂಡ 4 ನಿಮಿಷ 25.82 ಸೆಕೆಂಡ್‌ಗಳಲ್ಲಿ ಕ್ರಮಿಸಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಪಡೆಯಿತು. ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಿನೈಶಾ, ಲಕ್ಷ್ಯಾ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು. ಮಹಿಳೆಯರ 800 ಮೀ. ಫ್ರೀಸ್ಟೈಲ್‌ನಲ್ಲಿ ಶಿರಿನ್‌ ಹಾಗೂ ಪುರುಷರ 4*100 ಮೆಡ್ಲೆ ವಿಭಾಗದಲ್ಲಿ ಶ್ರೀಹರಿ, ವಿಧಿತ್‌, ಅನೀಶ್‌, ಕಾರ್ತಿಕೇಯನ್‌ ಅವರಿದ್ದ ತಂಡ ಕಂಚಿನ ಪಡೆಯಿತು. ಈಜಿನಲ್ಲಿ ಭಾನುವಾರ 5 ಚಿನ್ನ ಸೇರಿ 6 ಪದಕ ಲಭಿಸಿತ್ತು.

'ದೇಶಕ್ಕೆ ದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..?' ವೇಗಿ ಮೊಹಮ್ಮದ್ ಶಮಿಯ ಹೇಳಿಕೆ ಈಗ ವೈರಲ್..!

ಇದೇ ವೇಳೆ ಬಿಳಿಯಾರ್ಡ್ಸ್‌-ಸ್ನೂಕರ್‌ ಸ್ಪರ್ಧೆಯಲ್ಲಿ ರಾಜ್ಯಕ್ಕೆ 2 ಚಿನ್ನ ಹಾಗೂ 1 ಬೆಳ್ಳಿ ಪದಕ ದೊರೆಯಿತು. ಅಥ್ಲೆಟಿಕ್ಸ್‌ನ ಪುರುಷರ ಲಾಂಗ್‌ಜಂಪ್‌ನಲ್ಲಿ 7.89 ಮೀ. ದೂರಕ್ಕೆ ಜಿಗಿದ ಕರ್ನಾಟಕದ ಆರ್ಯ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಪುರುಷರ ಫುಟ್ಬಾಲ್‌ನಲ್ಲಿ ಕರ್ನಾಟಕ-ಪಂಜಾಬ್‌ ನಡುವಿನ ಪಂದ್ಯ ಗೋಲು ರಹಿತ ಡ್ರಾಗೊಂಡಿತು. ಸದ್ಯ ಕರ್ನಾಟಕ 12 ಚಿನ್ನ, 8 ಬೆಳ್ಳಿ, 9 ಕಂಚು 29 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

ನ.3ರಿಂದ ಬೆಂಗಳೂರಲ್ಲಿ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಬಿಎ)ಯು ನ.3ರಿಂದ ರಾಜ್ಯ ಅಸೋಸಿಯೇಷನ್ ಕಪ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಆಯೋಜಿಸಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಕೂಟ ನ.10ಕ್ಕೆ ಮುಕ್ತಾಯಗೊಳ್ಳಲಿದೆ. 82 ಪುರುಷ ಹಾಗೂ 40 ಮಹಿಳಾ ತಂಡಗಳು ಕೂಟದಲ್ಲಿ ಪಾಲ್ಗೊಳ್ಳಲಿವೆ ಎಂದು ಕೆಎಸ್‌ಬಿಬಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಐಎಸ್‌ಎಲ್‌ ಫುಟ್ಬಾಲ್‌: ಇಂದು ಬಿಎಫ್‌ಸಿ-ಒಡಿಶಾ

ಭುವನೇಶ್ವರ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಮಂಗಳವಾರ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡಕ್ಕೆ ಒಡಿಶಾ ಎಫ್‌ಸಿ ಸವಾಲು ಎದುರಾಗಲಿದೆ. ಪಂದ್ಯಕ್ಕೆ ಇಲ್ಲಿನ ಕಳಿಂಗಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಿಎಫ್‌ಸಿ ಕಳೆದ ಬಾರಿಯಂತೆ ಈ ಬಾರಿಯೂ ನೀರಸ ಆರಂಭ ಪಡೆದಿದ್ದು, ಆಡಿರುವ 4 ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ 4 ಅಂಕ ಪಡೆದು 10ನೇ ಸ್ಥಾನದಲ್ಲಿದೆ. ಅತ್ತ ಒಡಿಶಾ ಕೂಡಾ 4 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿ 8ನೇ ಸ್ಥಾನ ಕಾಯ್ದುಕೊಂಡಿದೆ.

ಪಂದ್ಯ: ರಾತ್ರಿ 8ಕ್ಕೆ

ಹಾಕಿ: ಅಜೇವಾಗಿ ಸೆಮೀಸ್‌ ಪ್ರವೇಶಿಸಿದ ಭಾರತ ತಂಡ

ಜೋಹರ್‌ ಬಹ್ರು: ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ಸತತ 2ನೇ ಗೆಲುವಿನೊಂದಿಗೆ ಅಜೇಯವಾಗಿಯೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೋಮವಾರ ನಡೆದ ‘ಬಿ’ ಗುಂಪಿನ 3ನೇ ಹಾಗೂ ಕೊನೆ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ವಿರುದ್ಧ 6-2 ಅಂತರದಲ್ಲಿ ಗೆಲುವು ಲಭಿಸಿತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಡ್ರಾ ಮಾಡಿಕೊಂಡಿದ್ದ ಭಾರತ, 2ನೇ ಪಂದ್ಯದಲ್ಲಿ ಮಲೇಷ್ಯಾವನ್ನು ಸೋಲಿಸಿತ್ತು. ಇದರೊಂದಿಗೆ 7 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡು ನಾಕೌಟ್‌ ಪ್ರವೇಶಿಸಿತು. ನ.3ಕ್ಕೆ ಸೆಮಿಫೈನಲ್‌ ಪಂದ್ಯ ನಿಗದಿಯಾಗಿದೆ.

click me!