ಗಬ್ಬರ್ ಸಿಂಗ್ ಶತಕ; ರೋಹಿತ್ ಸೆಂಚುರಿ ಜಸ್ಟ್ ಮಿಸ್..!

By Web DeskFirst Published Mar 10, 2019, 3:53 PM IST
Highlights

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟ್ಸ್’ಮನ್’ಗಳಾದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಉತ್ತಮ ಆರಂಭ ಒದಗಿಸಿಕೊಟ್ಟಿತು. ಸತತ ರನ್ ಬರ ಅನುಭವಿಸುತ್ತಿದ್ದ ಧವನ್ 16ನೇ ಏಕದಿನ ಶತಕ ಸಿಡಿಸಿ ಮಿಂಚಿದರು.

ಮೊಹಾಲಿ[ಮಾ.10]: ಕಳಪೆ ಫಾರ್ಮ್’ನಿಂದ ಬಳಲುತ್ತಿದ್ದ ಗಬ್ಬರ್ ಸಿಂಗ್ ಖ್ಯಾತಿಯ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ 95 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟ್ಸ್’ಮನ್’ಗಳಾದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಉತ್ತಮ ಆರಂಭ ಒದಗಿಸಿಕೊಟ್ಟಿತು. ಸತತ ರನ್ ಬರ ಅನುಭವಿಸುತ್ತಿದ್ದ ಧವನ್ 16ನೇ ಏಕದಿನ ಶತಕ ಸಿಡಿಸಿ ಮಿಂಚಿದರು. 97 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಭರ್ಜರಿ ಶತಕ ಸಿಡಿಸಿದರು. 18 ಇನ್ನಿಂಗ್ಸ್’ಗಳ ಬಳಿಕ ಧವನ್ ಬ್ಯಾಟ್’ನಿಂದ ಮೂರಂಕಿ ಮೊತ್ತ ದಾಖಲಾಗಿದೆ. ಇದಷ್ಟೇ ಅಲ್ಲದೇ ತವರಿನಲ್ಲಿ 5ನೇ ಹಾಗೂ ಆಸ್ಟ್ರೇಲಿಯಾ ವಿರುದ್ದ ಶಿಖರ್ ಧವನ್ ಸಿಡಿಸಿದ ಮೂರನೇ ಶತಕ ಇದಾಗಿದೆ.

ಸಚಿನ್-ಸೆಹ್ವಾಗ್ ದಾಖಲೆ ಮುರಿದ ಧವನ್-ರೋಹಿತ್ ಜೋಡಿ..!

ರೋಹಿತ್ ಶರ್ಮಾ ವಿಕೆಟ್ ಒಪ್ಪಿಸುವ ಮುನ್ನ ಭಾರತ 31 ಓವರ್’ಗಳಿಗೆ ಬರೋಬ್ಬರಿ 193 ರನ್’ಗಳ ಜತೆಯಾಟ ನಿಭಾಯಿಸಿತು. ಈ ಮೂಲಕ ಆಸ್ಟ್ರೇಲಿಯಾ ವಿರುದ್ದ ಮೊದಲ ವಿಕೆಟ್’ಗೆ ಗರಿಷ್ಠ ರನ್’ಗಳ ಜತೆಯಾಟ ಮೂಡಿಬಂದಿತು. ಈ ಮೊದಲು ಧವನ್-ರೋಹಿತ್ ಜೋಡಿಯೇ 2013ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲ ವಿಕೆಟ್’ಗೆ 178 ರನ್ ಸಿಡಿಸಿದ್ದರು. ರೋಹಿತ್ ವಿಕೆಟ್ ಒಪ್ಪಿಸುವ ಮುನ್ನ 92 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 95 ರನ್ ಬಾರಿಸಿದ್ದರು.

click me!