ಸಚಿನ್-ಸೆಹ್ವಾಗ್ ದಾಖಲೆ ಮುರಿದ ಧವನ್-ರೋಹಿತ್ ಜೋಡಿ..!

By Web DeskFirst Published Mar 10, 2019, 3:10 PM IST
Highlights

ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಶತಕದ ಜತೆಯಾಟವಾಡುವ ಮೂಲಕ ಮುನ್ನುಗ್ಗುತ್ತಿದೆ. ಇದರ ಜತೆಗೆ ಸಚಿನ್-ಸೆಹ್ವಾಗ್ ದಾಖಲೆಯನ್ನು ಅಳಿಸಿಹಾಕಿದೆ. 

ಮೊಹಾಲಿ[ಮಾ.10]: ಟೀಂ ಇಂಡಿಯಾದ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದೆನಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಹಾಲಿ ಟೀಂ ಭಾರತ ತಂಡದ ಆರಂಭಿಕ ಜೋಡಿಯಾದ ಶಿಖರ್ ಧವನ್-ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ.
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಶತಕದ ಜತೆಯಾಟವಾಡುವ ಮೂಲಕ ಮುನ್ನುಗ್ಗುತ್ತಿದೆ. ಇದರ ಜತೆಗೆ ಟೀಂ ಇಂಡಿಯಾ ಮಾಜಿ ಆರಂಭಿಕ ಜೋಡಿಯಾದ ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ 2001ರಿಂದ 2012ರವರೆಗೆ 114 ಇನ್ನಿಂಗ್ಸ್’ಗಳಲ್ಲಿ 39.16ರ ಸರಾಸರಿಯಲ್ಲಿ 4,387 ರನ್ ಬಾರಿಸಿತ್ತು. ಇದೀಗ ಆ ದಾಖಲೆಯನ್ನು ರೋಹಿತ್-ಧವನ್ ಜೋಡಿ ಅಳಿಸಿ ಹಾಕಿದೆ.

ಇದೀಗ 102 ಇನ್ನಿಂಗ್ಸ್’ನಲ್ಲಿ ಧವನ್-ರೋಹಿತ್ ಜೋಡಿ 44.84ರ ಸರಾಸರಿಯಲ್ಲಿ 4484 ರನ್ ಬಾರಿಸಿ ಮುನ್ನುಗ್ಗುತ್ತಿದೆ. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವದ 7ನೇ ಹಾಗೆಯೇ ಭಾರತದ 2ನೇ ಆರಂಭಿಕ ಜೋಡಿ ಎನ್ನುವ ಕೀರ್ತಿಗೆ ಭಾಜನವಾಗಿದೆ. ಇನ್ನು ಏಕದಿನ ಕ್ರಿಕೆಟ್’ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಆರಂಭಿಕ ಜೋಡಿ ಎನ್ನುವ ದಾಖಲೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ-ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದು 176 ಇನ್ನಿಂಗ್ಸ್’ಗಳಲ್ಲಿ 8227 ರನ್ ಬಾರಿಸಿದೆ.

ಶತಕದಾಟದಲ್ಲೂ ಜಂಟಿ 4ನೇ ಸ್ಥಾನ: ಇನ್ನು ಧವನ್-ರೋಹಿತ್ ಜೋಡಿ 22 ಓವರ್ ಮುಕ್ತಾಯದ ವೇಳೆಗೆ 130 ರನ್ ಬಾರಿಸಿ ಬ್ಯಾಟಿಂಗ್ ಮುಂದುವರೆಸಿದ್ದು, ಈ ಜೋಡಿ 15 ಬಾರಿ ಶತಕದ ಜತೆಯಾಟವಾಡುವ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ಅತಿಹೆಚ್ಚು ಶತಕದ ಜತೆಯಾಟ ನಿಭಾಯಿಸಿದ ಜಂಟಿ 4ನೇ ಜೋಡಿ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಈ ಪಟ್ಟಿಯಲ್ಲೂ ಸಚಿನ್-ಗಂಗೂಲಿ ಅಗ್ರಸ್ಥಾನದಲ್ಲಿದ್ದು, 26 ಬಾರಿ ಶತಕದ ಜತೆಯಾಟವಾಡುವ ಮೂಲಕ ಅಗ್ರಸ್ಥಾನದಲ್ಲಿದೆ. 

click me!