ಬರೋಬ್ಬರಿ 5000 ಕಿ.ಮೀ ದೂರದ ಪ್ರತಿಷ್ಠಿತ ಡಕಾರ್ ರ‍್ಯಾಲಿಗೆ ಚಾಲನೆ ಸಿಕ್ಕಿದೆ. ಪೆರುವಿನಲ್ಲಿ ನಡೆಯುತ್ತಿರುವ ಈ ಡಕಾರ್ ರ‍್ಯಾಲಿಯ ವಿಶೇಷತೆ ಎನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಲಿಮಾ(ಜ.07): 41 ನೇ ಡಕರ್ ರ‍್ಯಾಲಿಗೆ ಚಾಲನೆ ಸಿಕ್ಕಿದೆ. ಪೆರುವಿನ ಲಿಮಾದಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ ರ‍್ಯಾಲಿಯನ್ನ ಭಾರತ 2 ತಂಡಗಳು ಪಾಲ್ಗೊಳ್ಳುತ್ತಿದೆ. ಶೆರ್ಕೋ ಟಿವಿಎಸ್ ಫ್ಯಾಕ್ಟರಿ ಟೀಂ ಹಾಗೂ ಹೀರೋ ಮೋಟರ್‌ಸ್ಪೋರ್ಟ್ಸ್. ಶೆರ್ಕೋ ತಂಡದಲ್ಲಿ ಕನ್ನಡಿಗ ಅರವಿಂದ್ ಕೆ.ಪಿ ಪ್ರಮುಖ ಆಕರ್ಷಣೆಯಾಗಿದ್ದರೆ, ಹೀರೋ ಮೋಟರ್ ಸ್ಪೋರ್ಟ್‌ನಲ್ಲಿ ಮತ್ತೊರ್ವ ಕನ್ನಡಿಗ ಸಿಎಸ್ ಸಂತೋಷ್ ಕೇಂದ್ರ ಬಿಂದು.
undefined
ಇದನ್ನೂ ಓದಿ: ಜನವರಿ 8-9ರಂದು ಭಾರತ್ ಬಂದ್: ಏಕೆ? ಯಾರಿಂದ...?
ಕಳೆದ ಡಕಾರ್ ರ‍್ಯಾಲಿಯಲ್ಲಿ ಶೆರ್ಕೋ ಟಿವಿಎಸ್ ರ‍್ಯಾಲಿ ತಂಡ ಪಾಲ್ಗೊಂಡಿತ್ತು. ಈ ಬಾರಿ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಜ.06 ರಂದು ರ‍್ಯಾಲಿಗೆ ಚಾಲನೆ ದೊರಕಿದೆ. ಕಳೆದೊಂದು ವರ್ಷದಿಂದ ಶೆರ್ಕೋ ಟಿವಿಎಸ್ ರ‍್ಯಾಲಿ ತಂಡ ಡಕಾರ್ ರ‍್ಯಾಲಿಗಾಗಿ ಅಭ್ಯಾಸ ನಡೆಸಿದೆ. ಈ ಹಿಂದಿನ ರ‍್ಯಾಲಿಗಳಲ್ಲಿ ಟಿವಿಎಸ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದೆ ಎಂದು ಶೆರ್ಕೋ ಟಿವಿಎಸ್ ಫ್ಯಾಕ್ಟರಿ ಟೀಂ ಮ್ಯಾನೇಜರ್ ಡೇವಿಡ್ ಕಾಸ್ಟ್ಯೂ ಹೇಳಿದ್ದಾರೆ.
ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!
ಟಿವಿಎಸ್ ಈ ಬಾರಿ RTR 450 ರ‍್ಯಾಲಿ ಮೋಟರ್‌ಸೈಕಲ್ ರೇಸ್‌ಗಿಳಿಸಿದೆ. ಇದರ ಗರಿಷ್ಠ ವೇಗ 180 ಕಿ.ಮೀ. 10 ಹಂತಗಳಲ್ಲಿ ಒಟ್ಟು 5000 ಕಿ.ಮೀ ದೂರದ ಡಕಾರ್ ರ‍್ಯಾಲಿ ಅತ್ಯಂತ ಸವಾಲಿನ ರ‍್ಯಾಲಿ ಎಂದೇ ಗುರುತಿಸಿಕೊಂಡಿದೆ.