ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ದಾಖಲಾದ ಅಪರೂಪದ 10 ಮೈಲಿಗಲ್ಲು!

By Web Desk  |  First Published Jan 7, 2019, 7:05 PM IST

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ಗೆಲುವಿನ ಜೊತೆಗೆ ಟೀಂ ಇಂಡಿಯಾ ಹಲವು ದಾಖಲೆ ಬರೆದಿದೆ. ಇತ್ತ ಆಸ್ಟ್ರೇಲಿಯಾ ಕೆಲ ಅಪಖ್ಯಾತಿಗೂ ಗುರಿಯಾಗಿದೆ. ಈ ಟೆಸ್ಟ್ ಸರಣಿಯಲ್ಲಿ ದಾಖಲಾದ 10 ಮೈಲಿಗಲ್ಲುಗಳ ವಿವರ ಇಲ್ಲಿದೆ.


ಸಿಡ್ನಿ(ಜ.07): ಕಾಂಗರೂಗಳ ನಾಡಿಗೆ ಪ್ರವಾಸ ಕೈಗೊಂಡ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿದ್ದರೆ, ಇದೀಗ ಟೆಸ್ಟ್ ಸರಣಿಯನ್ನ 2-1 ಅಂತರದಿಂದ ಗೆದ್ದು ಇತಿಹಾಸ ರಚಿಸಿದೆ. 4 ಪಂದ್ಯಗಳ ಟೆಸ್ಟ್ ಸರಣಿಯ ಹಲವು ಅವಿಸ್ಮರಣೀಯ ದಾಖಲೆಗಳಿಗೂ ಸಾಕ್ಷಿಯಾಯಿತು. ಈ ಸರಣಿಯಲ್ಲಿ ದಾಖಲಾದ 10 ಮೈಲಿಗಲ್ಲುಗಳ ವಿವರ ಇಲ್ಲಿದೆ.

ಇದನ್ನೂ ಓದಿ: ಜನವರಿ 8-9ರಂದು ಭಾರತ್ ಬಂದ್: ಏಕೆ? ಯಾರಿಂದ...?

Tap to resize

Latest Videos

 ಟೆಸ್ಟ್ ಸರಣಿಯಲ್ಲಿ ದಾಖಲಾದ ಅಪರೂಪದ ಮೈಲಿಗಲ್ಲುಗಳಿವು:
1. ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ  ಚೊಚ್ಚಲ ಟೆಸ್ಟ್ ಸರಣಿ ಗೆಲುವು
2. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅತಿವೇಗವಾಗಿ 19 ಸಾವಿರ ರನ್ ಪೂರೈಕೆ[399]
3. ಆಸಿಸ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ರಿಷಬ್ ಪಂತ್
4. ಸರಣಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಚೇತೇಶ್ವರ್ ಪೂಜಾರ (521 ರನ್)
5. ಟೆಸ್ಟ್ ಸರಣಿಯೊಂದರಲ್ಲಿ 300+ ರನ್ ಹಾಗೂ 20+ ಬಲಿಪಡೆದ ಮೊದಲ ಕೀಪರ್ ರಿಷಬ್ ಪಂತ್
6. ಚೇತೇಶ್ವರ್ ಪೂಜಾರ ಈ ಸರಣಿಯಲ್ಲಿ ಎದುರಿಸಿದ ಚೆಂಡುಗಳು ಬರೋಬ್ಬರಿ 1258
7. 2018ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರ ವಿದೇಶದಲ್ಲಿ ಗರಿಷ್ಠ ರನ್ ಬಾರಿಸಿದ ವಿರಾಟ್ ಕೊಹ್ಲಿ (1138 ರನ್)
8. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ 295ನೇ ಕ್ರಿಕೆಟಿಗ ಮಯಾಂಕ್ ಅಗರ್ವಾಲ್
9. ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಶತಕ ಸಿಡಿಸಿಲ್ಲ..!
10. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಏಷ್ಯಾದ ಮೊದಲ ಹಾಗೂ ವಿಶ್ವದ 5ನೇ ತಂಡ ಎನ್ನುವ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.

click me!