ಅರ್ಜುನ ಪ್ರಶಸ್ತಿ: ಬುಮ್ರಾ,ಶಮಿ, ಜಡೇಜಾ ಹೆಸರು ಶಿಫಾರಸು

By Web Desk  |  First Published Apr 28, 2019, 11:30 AM IST

ಸುಪ್ರೀಂಕೋರ್ಟ್ ನೇತೃತ್ವದ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಬುಮ್ರಾ, 49 ಏಕದಿನ ಪಂದ್ಯಗಳಿಂದ 85 ವಿಕೆಟ್ ಉರುಳಿಸಿದ್ದಾರೆ. 


ನವದೆಹಲಿ: ಕ್ರೀಡಾ ಸಾಧಕರಿಗೆ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಮಹಿಳಾ ಆಟಗಾರ್ತಿ ಪೂನಮ್ ಯಾದವ್ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಶಿಫಾರಸು ಮಾಡಿದೆ. ಈ ಬಾರಿ ಕನ್ನಡಿಗರನ್ನು ಪರಿಗಣಿಸಿಲ್ಲ.  

ಜೀವನಕ್ಕಾಗಿ ಕುಲ್ಫಿ ಮಾರುತ್ತಿರುವ ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸರ್..!

Tap to resize

Latest Videos

ಸುಪ್ರೀಂಕೋರ್ಟ್ ನೇತೃತ್ವದ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಬುಮ್ರಾ, 49 ಏಕದಿನ ಪಂದ್ಯಗಳಿಂದ 85 ವಿಕೆಟ್ ಉರುಳಿಸಿದ್ದಾರೆ. 10 ಟೆಸ್ಟ್’ಗಳನ್ನು ಆಡಿದ್ದು, 49 ವಿಕೆಟ್ ಪಡೆದಿದ್ದಾರೆ. ಬುಮ್ರಾ ಎಲ್ಲಾ ಮಾದರಿಯಲ್ಲೂ ಟೀಂ ಇಂಡಿಯಾದ ಕಾಯಂ ಆಟಗಾರರಾಗಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಎನಿಸಿದ್ದಾರೆ. 

ಇನ್ನು 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಮತ್ತೋರ್ವ ವೇಗಿ ಮೊಹಮ್ಮದ್ ಶಮಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಮಹಿಳಾ ಕ್ರಿಕೆಟ್ ತಂಡದ ಲೆಗ್’ಸ್ಪಿನ್ನರ್ ಪೂನಂ ಯಾದವ್ ಕೂಡಾ ಅರ್ಜನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

click me!