ಕಿವೀಸ್ ಕಿವಿ ಹಿಂಡಿದ ಬಾಂಗ್ಲಾ ಹುಲಿಗಳು

By Suvarna Web DeskFirst Published Jun 10, 2017, 12:24 AM IST
Highlights

ಮಧ್ಯಮ ಕ್ರಮಾಂಕದಲ್ಲಿ ಶಕೀಬ್ ಅಲ್ ಹಸನ್(114ರನ್, 115ಎಸೆತ 11 ಬೌಂಡರಿ, 1ಸಿಕ್ಸರ್) ಹಾಗೂ ಮೊಹ್ಮದುಲ್ಲಾ(102*ರನ್, 107 ಎಸೆತ, 8 ಬೌಂಡರಿ, 2 ಸಿಕ್ಸರ್) ದಾಖಲೆಯ ದ್ವಿಶತಕದ(224ರನ್) ಜತೆಯಾಟದ ನೆರವಿನಿಂದ 5 ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿದೆ.

ಲಂಡನ್(ಜೂನ್.9): ಶಕೀಬ್ ಅಲ್ ಹಸನ್ ಹಾಗೂ ಮೊಹ್ಮದುಲ್ಲಾ ಸಮಯೋಚಿತ ಶತಕಗಳ ನೆರವಿನಿಂದ ಬಾಂಗ್ಲಾದೇಶ ಚಾಂಪಿಯನ್ಸ್ ಟ್ರೋಫಿಯಲ್ಲಿ 5 ವಿಕೆಟ್'ಗಳ ಗೆಲುವಿನ ನಗೆ ಬೀರಿತು. ಈ ಗೆಲುವಿನ ಮೂಲಕ ಮೊರ್ತಾಜ ಪಡೆ ಸೆಮೀಸ್ ತಲುಪುವ ಆಸೆ ಜೀವಂತವಾಗಿರಿಸಿಕೊಂಡರೆ, ನ್ಯೂಜಿಲ್ಯಾಂಡ್ ಟೂರ್ನಿಯಿಂದ ಹೊರಬಿದ್ದಿತು.

ಕಿವೀಸ್ ಪಡೆ ನೀಡಿದ 265ರನ್'ಗಳ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ ಒಂದು ಹಂತದಲ್ಲಿ 33ರನ್'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆರಂಭದಲ್ಲೇ ಮಾರಕ ದಾಳಿ ನಡೆಸಿದ ಅಗ್ರಕ್ರಮಾಂಕ ಮೂವರು ಬ್ಯಾಟ್ಸ್'ಮನ್'ಗಳಿಗೆ ಆರಂಭದಲ್ಲೆ ಪೆವಿಲಿಯನ್ ದಾರಿ ತೋರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಕೀಬ್ ಅಲ್ ಹಸನ್(114ರನ್, 115ಎಸೆತ 11 ಬೌಂಡರಿ, 1ಸಿಕ್ಸರ್) ಹಾಗೂ ಮೊಹ್ಮದುಲ್ಲಾ(102*ರನ್, 107 ಎಸೆತ, 8 ಬೌಂಡರಿ, 2 ಸಿಕ್ಸರ್) ದಾಖಲೆಯ ದ್ವಿಶತಕದ(224ರನ್) ಜತೆಯಾಟದ ನೆರವಿನಿಂದ 5 ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿದೆ. ಬಾಂಗ್ಲಾ ಈ ಪಂದ್ಯ ಗೆದ್ದರೂ ಸೆಮೀಸ್ ತಲುಪುದು ಇನ್ನೂ ಖಚಿತವಾಗಿಲ್ಲ. ಶನಿವಾರ ನಡೆಯುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಒಂದುವೇಳೆ ಆಸ್ಟ್ರೇಲಿಯಾ ಸೋತರೆ ಮೊರ್ತಾಜ ಪಡೆ ಸೆಮೀಸ್ ಹಂತಕ್ಕೆ ತಲುಪಲಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ನಿಗದಿತ 50 ಓವರ್'ಗಳಲ್ಲಿ 265ರನ್'ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ನಾಯಕ ಕೇನ್ ವಿಲಿಯಮ್ಸನ್(57) ಹಾಗೂ ಅನುಭವಿ ಆಟಗಾರ ರಾಸ್ ಟೇಲರ್(63) ಭರ್ಜರಿ ಜತೆಯಾಟದ ಮೂಲಕ ತಂಡಕ್ಕೆ ನೆರವಾದರು. ಒಂದು ಹಂತದಲ್ಲಿ ಮುನ್ನೂರರ ಗಡಿ ದಾಟುವ ವಿಶ್ವಾಸದಲ್ಲಿದ್ದ ಕಿವೀಸ್ ಪಡೆಗೆ ಮೊಸಾದಿಕ್ ಹುಸೇನ್ ಅವಕಾಶ ಮಾಡಿಕೊಡಲಿಲ್ಲ. ಕೆಳಕ್ರಮಾಂಕದ ಬ್ಯಾಟ್ಸ್'ಮನ್'ಗಳು ದಿಢೀರ್ ಕುಸಿತ ಕಂಡಿದ್ದರಿಂದ 265ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರ ಮೊಸಾದಿಕ್ ಹುಸೇನ್ ಮೂರು ವಿಕೆಟ್ ಪಡೆದು ಮಿಂಚಿದರು.

 ಸಂಕ್ಷಿಪ್ತ ಸ್ಕೋರ್:

ನ್ಯೂಜಿಲ್ಯಾಂಡ್ : 265/8

ರಾಸ್ ಟೇಲರ್ : 63

ಕೇನ್ ವಿಲಿಯಮ್ಸನ್ : 57

ಮೊಸಾದಿಕ್ ಹುಸೇನ್ : 13/3

ಬಾಂಗ್ಲಾದೇಶ : 268/5

ಶಕೀಬ್ ಅಲ್ ಹಸನ್ : 114

ಮೊಹ್ಮದುಲ್ಲಾ : 102*

ಥೀಮ್ ಸೌಥಿ : 45/3

ಪಂದ್ಯ ಪುರುಷೋತ್ತಮ: ಶಕೀಬ್ ಅಲ್ ಹಸನ್

click me!