
ಪ್ಯಾರಿಸ್(ಜೂ.09): ವಿಶ್ವದ ನಂ.1 ಶ್ರೇಯಾಂಕಿತ ಬ್ರಿಟನ್'ನ ಆ್ಯಂಡಿ ಮರ್ರೆಯನ್ನು ಮಣಿಸಿದ ಸ್ಟಾನಿಸ್ಲಾಸ್ ವಾವ್ರಿಂಕಾ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್'ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಭಾರೀ ರೋಚಕತೆಯಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಆ್ಯಂಡಿ ಮರ್ರೆ ವಿರುದ್ಧ ವಾವ್ರಿಂಕಾ 6-7(6-8), 6-3, 5-7, 7-6(7-3),6-1 ಸೆಟ್'ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದರು.
ಸುಮಾರು 4 ಗಂಟೆ 34 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ವಾವ್ರಿಂಕಾ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದರು.
ಒಂದೂ ಸೆಟ್ ಸೋಲದೆ ಸೆಮಿಫೈನಲ್ ವರೆಗೂ ಸಾಗಿ ಬಂದಿದ್ದ ವಾವ್ರಿಂಕಾಗೆ ಮೊದಲ ಸೆಟ್'ನಲ್ಲೇ ಆಘಾತ ಎದುರಾಯಿತು. ಆದರೆ ದ್ವಿತೀಯ ಸೆಟ್'ನಲ್ಲಿ ತಿರುಗಿಬಿದ್ದ ಸ್ವಿಸ್ ಆಟಗಾರ, ಮೂರನೇ ಸೆಟ್'ನಲ್ಲಿ ಮತ್ತೆ ಮುಗ್ಗರಿಸಿದರು.
ಟೈ ಬ್ರೇಕರ್ ಮೂಲಕ 4ನೇ ಸೆಟ್ ಗೆಲ್ಲುತ್ತಿದ್ದಂತೆ ವಾವ್ರಿಂಕಾ ಆತ್ಮವಿಶ್ವಾಸ ಇಮ್ಮಡಿಗೊಂಡಿತು. 5ನೇ ಹಾಗೂ ಕೊನೆಯ ಸೆಟ್‌ನಲ್ಲಿ 5-0 ಗೇಮ್'ಗಳ ಮುನ್ನಡೆ ಕಾಯ್ದುಕೊಂಡಿದ್ದ ಸ್ವಿಸ್ ಆಟಗಾರ, ಸರ್ವ್ ಕಳೆದುಕೊಳ್ಳುವ ಮೂಲಕ ಒಂದು ಗೇಮ್ ಬಿಟ್ಟುಕೊಟ್ಟರು. ಆದರೆ ಮರು ಗೇಮ್'ನಲ್ಲೇ ಮರ್ರೆ ಸರ್ವ್ ಮುರಿದ ವಾವ್ರಿಂಕಾ, ಪಂದ್ಯವನ್ನು ತಮ್ಮದಾಗಿಸಿಕೊಂಡು ಗೆಲುವಿನ ನಿಟ್ಟುಸಿರು ಬಿಟ್ಟರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.