ಫ್ರೆಂಚ್ ಓಪನ್’ನಲ್ಲಿ ಸೆರೆನಾಗಿಲ್ಲ ಶ್ರೇಯಾಂಕ..!

Published : May 23, 2018, 02:51 PM IST
ಫ್ರೆಂಚ್ ಓಪನ್’ನಲ್ಲಿ ಸೆರೆನಾಗಿಲ್ಲ ಶ್ರೇಯಾಂಕ..!

ಸಾರಾಂಶ

ಟೆನಿಸ್’ನಿಂದ ಹೊರಗುಳಿವ ಮುನ್ನ ನಂ.01 ಶ್ರೇಯಾಂಕಿತೆಯಾಗಿದ್ದ ಸೆರೆನಾ, ಇದೀಗ ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ಒಂದು ವರ್ಷದ ಬಳಿಕ 453ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ. 

ಪ್ಯಾರಿಸ್[ಮೇ.23]: ವಿಶ್ವ ಮಾಜಿ ನಂ.1 ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಫ್ರೆಂಚ್ ಓಪನ್‌ನಲ್ಲಿ ಶ್ರೇಯಾಂಕ ನೀಡಲು ಆಯೋಜಕರು ನಿರಾಕರಿಸಿದ್ದಾರೆ. 3 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಆಡುತ್ತಿದ್ದಾರೆ. 
ಇಂಡಿಯಾನ ವೆಲ್ಸ್ ಮತ್ತು ಮಿಯಾಮಿ ಓಪನ್‌ನಲ್ಲಿ ಸೆರೆನಾ ಆರಂಭಿಕ ಸುತ್ತುಗಳಲ್ಲಿ ನಿರ್ಗಮಿಸಿದ್ದರು. 36 ವರ್ಷ ವಯಸ್ಸಿನ ಸೆರೆನಾ ಇತ್ತೀಚೆಗಷ್ಟೇ ಮ್ಯಾಡ್ರಿಡ್ ಮತ್ತು ರೋಮ್ ಕ್ಲೇ ಕೋರ್ಟ್ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಹೀಗಾಗಿ ಆಯೋಜಕರು ಅವರಿಗೆ ಶ್ರೇಯಾಂಕ ನೀಡದಿರಲು ನಿರ್ಧರಿಸಿದ್ದಾರೆ. 
ಟೆನಿಸ್’ನಿಂದ ಹೊರಗುಳಿವ ಮುನ್ನ ನಂ.01 ಶ್ರೇಯಾಂಕಿತೆಯಾಗಿದ್ದ ಸೆರೆನಾ, ಇದೀಗ ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ಒಂದು ವರ್ಷದ ಬಳಿಕ 453ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ.  ಮೇ 27 ರಿಂದ ಜೂನ್ 10 ರವರೆಗೆ ಫ್ರೆಂಚ್ ಓಪನ್ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್
BCCI Chief Selector: ಅಜಿತ್ ಅಗರ್ಕರ್ ರಾಜೀನಾಮೆ ಖಚಿತ..! ಹೊಸ ಅಪ್‌ಡೇಟ್ ಕೊಟ್ಟ ಬಿಸಿಸಿಐ, ಯಾರಾಗ್ತಾರೆ ಮುಂದಿನ ಚೀಫ್ ಸೆಲೆಕ್ಟರ್?