IPL 2018 ಸನ್’ರೈಸರ್ಸ್’ಗೆ ಶಾಕ್ ಕೊಟ್ಟು ಫೈನಲ್ ಪ್ರವೇಶಿಸಿದ ಸಿಎಸ್’ಕೆ

First Published May 22, 2018, 10:59 PM IST
Highlights

ಐಪಿಎಲ್ ಆರಂಭಕ್ಕೂ ಮುನ್ನ ವೃದ್ಧರ ತಂಡವೆಂಬ ಟೀಕೆಯೊಂದಿಗೆ ಕಣಕ್ಕಿಳಿದಿದ್ದ ಧೋನಿ ನೇತೃತ್ವದ ಸಿಎಸ್’ಕೆ ತನ್ನ ಆಟದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದೆ. ದಕ್ಷಿಣ ಆಫ್ರಿಕಾದ ಫಾಪ್ ಡುಪ್ಲಸಿಸ್(67*) ಏಕಾಂಗಿ ಹೋರಾಟದ ನೆರವಿನಿಂದ ರೋಚಕ ಜಯ ದಾಖಲಿಸಿದೆ. 

ಮುಂಬೈ[ಮೇ.22]: ಕೊನೆ ಓವರ್’ವರೆಗೂ ರೋಚಕತೆಯನ್ನು ಹಿಡಿದಿಟ್ಟುಕೊಂಡಿದ್ದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು 2 ವಿಕೆಟ್’ಗಳಿಂದ ಮಣಿಸಿ ಚೆನ್ನೈ ಸೂಪರ್’ಕಿಂಗ್ಸ್ ಫೈನಲ್ ಪ್ರವೇಶಿಸಿದೆ. ಈ ಮೂಲಕ 11ನೇ ಆವೃತ್ತಿಯ ಐಪಿಎಲ್’ನಲ್ಲಿ ಪ್ರಶಸ್ತಿ ಸುತ್ತ ಪ್ರವೇಶಿಸಿದ ಮೊದಲ ತಂಡ ಎನ್ನುವ ಹಿರಿಮೆಯನ್ನು ಸಿಎಸ್’ಕೆ ತನ್ನದಾಗಿಸಿಕೊಂಡಿತು. ಇದರ ಜತೆಗೆ ಈ ಆವೃತ್ತಿಯಲ್ಲಿ ಸಿಎಸ್’ಕೆ ವಿರುದ್ಧ ಹ್ಯಾಟ್ರಿಕ್ ಸೋಲು ಕಂಡಿತು.
ಐಪಿಎಲ್ ಆರಂಭಕ್ಕೂ ಮುನ್ನ ವೃದ್ಧರ ತಂಡವೆಂಬ ಟೀಕೆಯೊಂದಿಗೆ ಕಣಕ್ಕಿಳಿದಿದ್ದ ಧೋನಿ ನೇತೃತ್ವದ ಸಿಎಸ್’ಕೆ ತನ್ನ ಆಟದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದೆ. ದಕ್ಷಿಣ ಆಫ್ರಿಕಾದ ಫಾಪ್ ಡುಪ್ಲಸಿಸ್(67*) ಏಕಾಂಗಿ ಹೋರಾಟದ ನೆರವಿನಿಂದ ರೋಚಕ ಜಯ ದಾಖಲಿಸಿದೆ. 
ಸನ್’ರೈಸರ್ಸ್ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ಕೂಡಾ ಆರಂಭದಲ್ಲೇ ಆಘಾತ ಅನುಭವಿಸಿತು. ಟಿ20 ದಿಗ್ಗಜರಾದ ಶೇನ್ ವಾಟ್ಸನ್[0], ಅಂಬಟಿ ರಾಯುಡು[0], ಧೋನಿ[9] ಬ್ರಾವೋ[7], ಜಡೇಜಾ ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಫಾಪ್ ಡುಪ್ಲಸಿಸ್ ಏಕಾಂಗಿಯಾಗಿ ತಂಡವನ್ನು ಜಯದ ದಡ ಸೇರಿಸಿದರು. ಡುಪ್ಲಸಿಸ್ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಅಜೇಯ 67 ರನ್ ಸಿಡಿಸಿದರು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ 5 ಎಸೆತಗಳಲ್ಲಿ 15 ರನ್ ಚಚ್ಚಿ ಸಿಎಸ್’ಕೆ ಗೆಲುವನ್ನು ಸುಲಭಗೊಳಿಸಿದರು.
ಸನ್’ರೈಸರ್ಸ್ ಪರ ರಶೀದ್ ಖಾನ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಸನ್’ರೈಸರ್ಸ್ ಹೈದರಾಬಾದ್ ಕಾರ್ಲೋಸ್ ಬ್ರಾಥ್’ವೈಟ್ ಅವರ ಅಮೋಘ 43 ರನ್’ಗಳ ನೆರವಿನಿಂದ 139 ರನ್ ಕಲೆಹಾಕಿತ್ತು.

ಸನ್’ರೈಸರ್ಸ್’ಗೆ ಫೈನಲ್ ಪ್ರವೇಶಿಸಲು ಇನ್ನೊಂದು ಅವಕಾಶವಿದ್ದು, ಎಲಿಮಿನೇಟರ್ ಹಂತದಲ್ಲಿ ಗೆದ್ದ ತಂಡದೊಂದಿಗೆ ಇನ್ನೊಮ್ಮೆ ಕೇನ್ ವಿಲಿಯಮ್ಸನ್ ಪಡೆ ಸೆಣಸಲಿದೆ.
ಸಂಕ್ಷಿಪ್ತ ಸ್ಕೋರ್:
SRH: 139/7
ಬ್ರಾಥ್’ವೈಟ್: 43*  
ಬ್ರಾವೋ: 25/2

CSK: 140/8
ಫಾಪ್ ಡುಪ್ಲಸಿಸ್: 67*
ರಶೀದ್ ಖಾನ್: 11/2

click me!