ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸಮನ್ ಹಾಗೂ ನಾಯಕ. ಇದೀಗ ಟೀಂ ಇಂಡಿಯಾ ಮಾಜಿ ಕೋಚ್ ಕೊಹ್ಲಿ ಕುರಿತು ಮಾತನಾಡಿದ್ದಾರೆ. ಮಾಜಿ ಕೋಚ್ ಹೇಳಿದ್ದೇನು? ಇಲ್ಲಿದೆ ವಿವರ.
ಮುಂಬೈ(ಮೇ.18): ಟೀ ಇಂಡಿಯಾ ಮಾಜಿ ಮೆಂಟಲ್ ಕಂಡೀಷನ್ ಕೋಚ್ ಪ್ಯಾಡಿ ಆಪ್ಟನ್ ಆತ್ಮಚರಿತ್ರೆ ಹಲವು ಸೀಕ್ರೆಟ್‌ಗಳನ್ನು ಬಹಿರಂಗ ಪಡಿಸಿದೆ. ಪ್ಯಾಡಿ ಬರೆದ ಬೇರ್‌ಫೂಟ್ ಕೋಚ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ಯಾಡಿ ಆಪ್ಟನ್ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಕುರಿತು ಹಲವು ಸೀಕ್ರೆಟ್‌ಗಳನ್ನು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: 2023ರ ವಿಶ್ವಕಪ್ ಆಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ಎಬಿಡಿ..!
ವಿಶ್ವಕಪ್ ತಯಾರಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ಕುರಿತ ಪ್ರಶ್ನೆಗೆ ಪ್ಯಾಡಿ ಹೇಳಿಕೆ ಇದೀಗ ಸುದ್ದಿಯಾಗಿದೆ. ಯಾವುದೇ ಮಾದರಿಯಾಗಲಿ ವಿರಾಟ್ ಕೊಹ್ಲಿ ಮೊದಲ ಎಸೆತದಿಂತ ಕೊನೆಯ ಎಸೆತದವರೆಗೆ ಬ್ಯಾಟಿಂಗ್ ಟೆಂಪೋ ಒಂದೇ ರೀತಿ ಇರುತ್ತೆ. ಧೋನಿ ಕೊನೆಯ ಎಸೆತದವರೆಗೂ ಪಂದ್ಯವನ್ನೂ ಕೊಂಡೊಯ್ಡು ಗೆಲ್ಲಿಸುತ್ತಾರೆ. ಆದರೆ ಕೊಹ್ಲಿ ಸ್ಲೋ ಪಾಯ್ಸನ್. ಪಂದ್ಯ ಮುಗಿದಿದ್ದೇ ಗೊತ್ತಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈ ಮೂವರು ಕ್ಲಿಕ್ ಆದ್ರೆ ಈ ಸಲ ವಿಶ್ವಕಪ್ ನಮ್ದೇ..!
ಕೊಹ್ಲಿ ಎದುರಾಳಿಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ವಿಶ್ವ ಕ್ರಿಕೆಟ್ ಆಳುವ ಕ್ರಿಕೆಟಿಗರು ಎಂದರೆ ಅದು ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಎಂದು ಪ್ಯಾಡಿ ಹೇಳಿದ್ದಾರೆ. ಇನ್ನು ಧೋನಿ ಕೂಲ್ ಕ್ರಿಕೆಟರ್. ಹೀಗಾಗಿ ಧೋನಿ ನಿರ್ಧಾರಗಳು ತಪ್ಪಾಗೋದಿಲ್ಲ ಎಂದು ಪ್ಯಾಡಿ ಹೇಳಿದ್ದಾರೆ.