
38ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಸೆಲೆಕ್ಟ್ ಆದ ಫಾಸ್ಟ್ ಬೌಲರ್ ಆಶೀಶ್ ನೆಹ್ರಾ ಬಗ್ಗೆ ಕೆಲವರು ಟೀಕಿಸ್ತಾರೆ. ಈ ವಯಸ್ಸಿನಲ್ಲಿ ಆತನಿಗೆ ಚುಟುಕು ಕ್ರಿಕೆಟ್ ಆಡೋಕೆ ಸಾಧ್ಯವಾಗುತ್ತಾ..? ಬೇರೆ ಯಾವ ಬೌಲರ್ ಇರಲಿಲ್ವಾ ಸೆಲೆಕ್ಟ್ ಮಾಡೋಕೆ ಅಂತ ಜರಿಯುತ್ತಿದ್ದಾರೆ. ಆದ್ರೆ ಆಶೀಶ್ ನೆಹ್ರಾ ಸೆಲೆಕ್ಟ್ ಆಗಿದ್ದರಿಂದ ಟೀಂ ಇಂಡಿಯಾದಲ್ಲಿರುವ ಯುವ ಬೌಲರ್ಸ್ ಫುಲ್ ಖುಷಿಯಾಗಿದ್ದಾರೆ. ಯಾಕೆ ಗೊತ್ತಾ..? ನೆಹ್ರಾ ಅಂದ್ರೆ ಅವರಿಗೆ ಅಚ್ಚುಮೆಚ್ಚು.
ಬೌಲರ್ ಕಮ್ ಬೌಲಿಂಗ್ ಕೋಚ್ ನೆಹ್ರಾ
ಆಶೀಶ್ ನೆಹ್ರಾ ಕೇವಲ ಬೌಲರ್ ಅಲ್ಲ. ಟೀಂ ಇಂಡಿಯಾ ಬೌಲಿಂಗ್ ಕೋಚ್. ಟಿ20 ಸರಣಿಯಲ್ಲಿ ಆಡ್ತಿರೋ ಯುವ ಬೌಲರ್ಸ್ಗೆ ನೆಹ್ರಾನೇ ಗುರು. ಬೌಲಿಂಗ್ ಕೋಚ್ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿರಬಹುದು. ಆದ್ರೆ ಪಂದ್ಯ ನಡೆಯುವಾಗ ಮೈದಾನದಲ್ಲೇ ಬೌಲರ್ಸ್'ಗೆ ಟಿಪ್ಸ್ ಕೊಡೋದು ಇದೇ ನೆಹ್ರಾ. ಹೀಗಾಗಿಯೇ ನೆಹ್ರಾ ಯುವ ಬೌಲರ್ಸ್ಗೆ ಆಪ್ತರಾಗಿರೋದು. ನೆಹ್ರಾ ಆಯ್ಕೆ ಯಾರಿಗೆ ಲಾಭವಾಗಿದ್ಯೋ ಗೊತ್ತಿಲ್ಲ. ಆದ್ರೆ ತಂಡದಲ್ಲಿರುವ ಯಂಗ್ ಬೌಲರ್ಸ್'ಗೆ ಮಾತ್ರ ತುಂಬಾ ಸಹಾಯ ಆಗ್ತಿದೆ.
§ಆಶೀಶ್ ನೆಹ್ರಾ ಅನುಭವಿ ಬೌಲರ್. ಟಿ20 ವಿಶ್ವಕಪ್ ಸೇರಿದಂತೆ ಅವರ ಜೊತೆ ಕೆಲ ಪಂದ್ಯಗಳನ್ನ ಆಡಿದ್ದೇನೆ. ಅವರು ತಂಡದಲ್ಲಿರುವ ನಮಗೆ ಒಳ್ಳೆಯದು. ಅವರು ತಮ್ಮ ಅನುಭವಗಳನ್ನ ನಮ್ಮ ಬಳಿ ಹಂಚಿಕೊಳ್ಳುತ್ತಾರೆ. ನನ್ನನ್ನು ಸೇರಿದಂತೆ ಯುವ ಬೌಲರ್ಸ್ಗೆ ಅವರಿಂದ ತುಂಬಾ ಸಹಾಯವಾಗುತ್ತದೆ. ಅವರು ಕೇವಲ ವೇಗದ ಬೌಲರ್ ಅಲ್ಲ. ಅವರು ತಂಡದ ಗೆಲುವಿಗೆ ತುಂಬಾ ನೆರವಾಗುತ್ತಾರೆ§ ಎಂದು ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿಕೊಂಡಿದ್ದಾರೆ.
ನೆಹ್ರಾನಿಂದ ರಣತಂತ್ರಕ್ಕೂ ಅನುಕೂಲ
ಚುಟುಕು ಕ್ರಿಕೆಟ್'ನ ಒಂದು ಇನ್ನಿಂಗ್ಸ್ ಕೇವಲ ಒಂದುವರೆ ಗಂಟೆಯಲ್ಲಿ ಮುಗಿದು ಹೋಗುತ್ತೆ. ಮೈದಾನದಲ್ಲಿ ಇರೋ 90 ನಿಮಿಷದಲ್ಲಿ ಫಟಾಫಟ್ ಅಂತ ರಣತಂತ್ರ ಅಣಿಯಬೇಕು. ಟೀಂ ಇಂಡಿಯಾ ಫೀಲ್ಡಿಂಗ್ ವೇಳೆ ಬೌಲಿಂಗ್ ಚೇಂಜ್ ಮಾಡ್ಬೇಕು. ಫೀಲ್ಡ್ ಸೆಟ್ ಮಾಡ್ಬೇಕು. ಬೌಲರ್ಸ್ಗೆ ಟಿಪ್ಸ್ ಕೋಡ್ಬೇಕೆ. ಈ ಎಲ್ಲದಕ್ಕೂ ನೆಹ್ರಾ ಸೇವೆ ಭಾರತಕ್ಕಿದೆ.
ನೆಹ್ರಾ ಆಯ್ಕೆಯಿಂದ ಒಬ್ಬ ಫಾಸ್ಟ್ ಬೌಲರ್ಸ್ಗೆ ರೆಸ್ಟ್ ಸಿಕ್ಕಂತಾಗಿದೆ. ಯುವ ಬೌಲರ್ಸ್ಗೆ ಎಕ್ಸ್ಟ್ರಾ ಕೋಚ್ ಸಿಕ್ಕಂತಾಗಿದೆ. ಬೌಲಿಂಗ್ ಚೇಂಜಸ್ ಮಾಡಲು ನಾಯಕ ಕೊಹ್ಲಿ ಒಬ್ಬ ಸಹಪಾಠಿ ಸಿಕ್ಕಂತಾಗಿದೆ. ಇಷ್ಟು ಸಾಕಲ್ವಾ ನೆಹ್ರಾ ಆಯ್ಕೆ ಸಮರ್ಥಿಸಿಕೊಳ್ಳಲು. ಇನ್ನು 4 ಓವರ್ನಲ್ಲಿ 30 ರನ್ ನೀಡಿದ್ರೂ ಅದು ಗ್ರೇಟ್. ಇದಕ್ಕಿಂತ ಹೆಚ್ಚು ರನ್ ನೆಹ್ರಾ ನೀಡಲ್ಲ. ಆಶೀಶ್ ನೆಹ್ರಾ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳು ಇಂದು ರಾಂಚಿಯಲ್ಲಿ ಏನ್ ಮಾಡ್ತಾರೆ ನೀವೇ ನೋಡಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.