ಮೂರು ಮಾದರಿ ಕ್ರಿಕೆಟ್'ಗೂ ಸರ್ಫಾಜ್ ನಾಯಕ

By Suvarna Web DeskFirst Published Jul 4, 2017, 6:29 PM IST
Highlights

ಈ ಹಿಂದೆ ಪಾಕಿಸ್ತಾನ ಟೆಸ್ಟ್ ತಂಡವನ್ನು ಮಿಸ್ಬಾ-ಉಲ್ ಹಕ್ ಮುನ್ನಡೆಸುತ್ತಿದ್ದರು.

ಕರಾಚಿ(ಜು.04): ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವನ್ನು ಚಾಂಪಿಯನ್ಸ್ ಪಟ್ಟಕ್ಕೇರಿಸಿದ ಸರ್ಫಾಜ್ ಅಹಮ್ಮದ್ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಪ್ರಧಾನಮಂತ್ರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಟೆಸ್ಟ್ ತಂಡದ ನಾಯಕನ್ನಾಗಿ ಸರ್ಫಾಜ್ ಅಹಮ್ಮದ್ ಅವರನ್ನು ನೇಮಿಸಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್'ಗೆ ಸರ್ಫಾಜ್ ನಾಯಕರಾದಂತಾಗಿದೆ.

ಈ ಮೊದಲು ಸರ್ಫಾಜ್ ಅಹಮ್ಮದ್ ಟಿ20 ಹಾಗೂ ಏಕದಿನ ತಂಡದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಟೆಸ್ಟ್ ತಂಡವನ್ನು ಅವರೇ ಮುನ್ನಡೆಸುವುದರಿಂದ ಮೂರೂ ಮಾದರಿಯ ತಂಡಕ್ಕೂ ಸರ್ಫಾಜ್ ಅವರೇ ನಾಯಕರಾಗಿ ಮುಂದುವರೆಯಲಿದ್ದಾರೆ.

ಈ ಹಿಂದೆ ಪಾಕಿಸ್ತಾನ ಟೆಸ್ಟ್ ತಂಡವನ್ನು ಮಿಸ್ಬಾ-ಉಲ್ ಹಕ್ ಮುನ್ನಡೆಸುತ್ತಿದ್ದರು. 2014ರ ಬಳಿಕ ಪಾಕಿಸ್ತಾನ ತಂಡವು ಮತ್ತೊಮ್ಮೆ ಮೂರು ಮೂರು ಮಾದರಿಯ ಕ್ರಿಕೆಟ್'ಗೂ ಒಬ್ಬನೇ ನಾಯಕನನ್ನು ಹೊಂದಿದಂತಾಗಿದೆ.  

click me!