ಕೋಚ್ ಇಲ್ಲದೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿರುವ ಟೀಂ ಇಂಡಿಯಾ !

Published : Jul 04, 2017, 05:35 PM ISTUpdated : Apr 11, 2018, 12:35 PM IST
ಕೋಚ್ ಇಲ್ಲದೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿರುವ ಟೀಂ ಇಂಡಿಯಾ !

ಸಾರಾಂಶ

ದ್ರಾವಿಡ್ ಅವರ ಕೋಚ್ ಅವಧಿ ವಿಸ್ತರಣೆಯಾದ ನಂತರ ಅವರ ಸಂಭಾವನೆ 4.5 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಡೆಲ್ಲಿ ಡೇರ್ ಡೇವಿಲ್ ಮೆಂಟರ್ ಸ್ಥಾನವನ್ನು ಅವರು ತೊರೆದಿದ್ದರು.

ಮುಂಬೈ(ಜು.04): ಇದೊಂದು ರೀತಿಯಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಸಂದಿಗ್ಧ ಪರಿಸ್ಥಿತಿ ಎನ್ನಬಹುದು. ಭಾರತ 'ಎ' ಹಾಗೂ 'ಅಂಡರ್ 19' ತಂಡಕ್ಕೆ ಕೋಚ್ ಆಗಿ ಮತ್ತೆರಡು 2 ವರ್ಷ ನೇಮಕವಾದ ನಂತರ ಮೊದಲ ಬಾರಿಗೆ ತನ್ನ ತಂಡದ ಆಟಗಾರರಿಗೆ ಮಾರ್ಗದರ್ಶನ ಮಾಡುವ ಸೌಭಾಗ್ಯ ದೊರೆಯುತ್ತಿಲ್ಲ. ಜುಲೈ 15 ರಿಂದ 'ಅಂಡರ್ 19' ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ಇದೇ ಸಂದರ್ಭದಲ್ಲಿ 'ಭಾರತ ಎ' ತಂಡ 'ದಕ್ಷಿಣ ಆಫ್ರಿಕಾ' ಪ್ರವಾಸ ಕೈಗೊಂಡು 2 ಟೆಸ್ಟ್ ಹಾಗೂ ತ್ರಿಕೋನ ಏಕದಿನ ಸರಣಿಯನ್ನು ಆಡಲಿದೆ. ಈ ಸಂದರ್ಭದಲ್ಲಿ ದ್ರಾವಿಡ್ 'ಎ' ತಂಡದೊಂದಿಗೆ ಹೊರಡಲಿದ್ದಾರೆ.

ಈ ಹಿನ್ನಲೆಯಲ್ಲಿ  ಅಂಡರ್ 18 ತಂಡವು ದ್ರಾವಿಡ್ ಅವರ ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳಲಿದೆ. ಇದಕ್ಕೆ ಸ್ಪಷ್ಟಿಕರಣ ನೀಡಿರುವ ಬಿಸಿಸಿಐ ಅಧಿಕಾರಿಗಳು ದ್ರಾವಿಡ್ ಅವರ ಜಾಗಕ್ಕೆ ನಾವು ಮತ್ತೊಬ್ಬ ಕೋಚ್ ಅವರನ್ನು ನೇಮಕ ಮಾಡುತ್ತೇವೆ' ಎಂದು ತಿಳಿಸಿದ್ದಾರೆ. ದ್ರಾವಿಡ್ ಅವರ ಕೋಚ್ ಅವಧಿ ವಿಸ್ತರಣೆಯಾದ ನಂತರ ಅವರ ಸಂಭಾವನೆ 4.5 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಡೆಲ್ಲಿ ಡೇರ್ ಡೇವಿಲ್ ಮೆಂಟರ್ ಸ್ಥಾನವನ್ನು ಅವರು ತೊರೆದಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?