ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್ ಸರ್ದಾರ್ ಸಿಂಗ್ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ನಲ್ಲಿ ನೀರಸ ಪ್ರದರ್ಶನದಿಂದ ಹತಾಶೆಗೊಳಗಾಗಿರುವ 32 ವರ್ಷದ ಸರ್ದಾರ್ ಸಿಂಗ್, ತಮ್ಮ 12 ವರ್ಷದ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
ನವದೆಹಲಿ (ಸೆ.13): ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್ ಸರ್ದಾರ್ ಸಿಂಗ್ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ನಲ್ಲಿ ನೀರಸ ಪ್ರದರ್ಶನದಿಂದ ಹತಾಶೆಗೊಳಗಾಗಿರುವ 32 ವರ್ಷದ ಸರ್ದಾರ್ ಸಿಂಗ್, ತಮ್ಮ 12 ವರ್ಷದ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
ನಾನು ಸುಮಾರು 12 ವರ್ಷಗಳ ಅವಧಿ ದೇಶಕ್ಕಾಗಿ ಆಡಿದ್ದೇನೆ. ಅಂತಾರಾಷ್ಟ್ರೀಯಾ ಹಾಕಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದು ಭವಿಷ್ಯದ ತಾರೆಗಳಿಗೆ ಇದು ಉತ್ತಮ ಸಮಯ ಎಂದಿದ್ದಾರೆ. 2006ರಲ್ಲಿ ಪಾಕ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯಾ ಹಾಕಿಗೆ ಪಾದಾರ್ಪಣೆ ಮಾಡಿದ್ದ ಸರ್ದಾರ್ ಸಿಂಗ್, ಈವರೆಗೆ 350 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
8 ವರ್ಷಗಳ ಕಾಲ ಭಾರತೀಯ ಹಾಕಿ ತಂಡವನ್ನ ಮುನ್ನಡೆಸಿರುವ ಸರ್ದಾರ್, 17 ಗೋಲು ಸಿಡಿಸಿದ್ದಾರೆ. ಇನ್ನು ಇವರ ಪ್ರತಿಭೆಯನ್ನ ಗುರುತಿಸಿ ಕೇಂದ್ರ ಸರ್ಕಾರ 2012 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.