ಟೀಂ ಇಂಡಿಯಾಕ್ಕೆ ಸ್ಫೋಟಕ ಆಟಗಾರ ಹೇಳಿದ ಮಿಶನ್ ಆಸ್ಟ್ರೇಲಿಯಾ ಕತೆ!

Published : Sep 12, 2018, 10:00 PM ISTUpdated : Sep 19, 2018, 09:24 AM IST
ಟೀಂ ಇಂಡಿಯಾಕ್ಕೆ ಸ್ಫೋಟಕ ಆಟಗಾರ ಹೇಳಿದ ಮಿಶನ್ ಆಸ್ಟ್ರೇಲಿಯಾ ಕತೆ!

ಸಾರಾಂಶ

ಆಂಗ್ಲರ ನೆಲದಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಹಿರಿಯ ಆಟಗಾರರೊಬ್ಬರು ಚೈತನ್ಯ ತುಂಬಿದ್ದಾರೆ. ಹಿರಿಯ ಆಟಗಾರ ಮಾಡಿರುವ ಟ್ವೀಟ್ ನಿಜಕ್ಕೂ ವಿಭಿನ್ನವಾಗಿದೆ.

ನವದೆಹಲಿ[ಸೆ.12] ರಾಜ್ಯದಲ್ಲಿ ಆಪರೇಶನ್ ಕಮಲದ ಮಾತು ಹರಿದಾಡುತ್ತಿದ್ದರೆ ಅತ್ತ ಟೀಂ ಇಂಡಿಯಾ ಇನ್ನೊಂದು ಆಪರೇಶನ್ ಗೆ ಸಿದ್ಧವಾಗಬೇಕಿದೆ. ಹಾಗಾದರೆ ಅದು ಯಾವ ಆಪರೇಶನ್? ಏನಿದು ಹೊಸ ಮಿಶನ್?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯನ್ನ 4-1 ಅಂತರದಿಂದ ಕೈಚೆಲ್ಲಿರುವ ನಂಬರ್​ ಸ್ಥಾನದಲ್ಲಿರುವ ಟೀಂ ಇಂಡಿಯಾ ಅನೇಕರಿಂದ ಟೀಕೆಗೆ ಒಳಗಾಗಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್ ತಂಡಕ್ಕೆ ಪ್ರೇರಣೆ ನೀಡುವ ಮಾತನಾಡಿದ್ದಾರೆ.

ಟ್ವಿಟ್ಟರ್​​ನಲ್ಲಿ ಸರಣಿ ಗೆದ್ದ ಇಂಗ್ಲೆಂಡ್​ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿರುವ ಸೆಹ್ವಾಗ್​, ಟೀಂ ಇಂಡಿಯಾ ಕೂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ,  ಕೆಲವೊಂದು ವೇಳೆ ಬ್ಯಾಟ್​​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ.. ಅದಕ್ಕೆ ಹಲವು ಕಾರಣ ಇದೆ ಎಂದಿದ್ದಾರೆ.

ಆದರೆ ರಾಹುಲ್ ಹಾಗೂ ಪಂತ್​ ಬ್ಯಾಟಿಂಗ್​ ನಿಜಕ್ಕೂ ಅಮೋಘವಾಗಿತ್ತು. ಮುಂದಿನ ವಿದೇಶಿ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಸಾಕಷ್ಟು ತರಬೇತಿ ಮಾಡಿಕೊಳ್ಳಬೇಕು. ಮುಗಿದಿದ್ದು ಮುಗಿದಿದೆ. ಇನ್ನು ಮುಂದೆ ಮಿಶನ್ ಆಸ್ಟ್ರೇಲಿಯಾ ಶುರುಮಾಡಬೇಕಿದೆ ಎಂದಿದ್ದಾರೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!