
ಬೆಂಗಳೂರು[ಜೂ.12]: 2018ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಸ್ಥಿರ ಪ್ರದರ್ಶನ ತೋರಿದ್ದ ಬಿಸಿಸಿಐ ಆಯೋಜಿಸಿದ್ದ ಯೋ ಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದಾರೆ. ಸಂಜು ಸ್ಯಾಮ್ಸನ್ ಆಡಿದ 15 ಪಂದ್ಯಗಳಲ್ಲಿ 441 ರನ್ ಸಿಡಿಸಿ ಗಮನ ಸೆಳೆದಿದ್ದರು.
ಸಂಜು ಸ್ಯಾಮ್ಸನ್‌ಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಇದರಿಂದ ಅವರು ಸೂಕ್ತ ತರಬೇತಿ ಪಡೆಯಲು ಸಾಧ್ಯ್ಯವಾಗಿರಲಿಲ್ಲ. ಇದೇ ಕಾರಣಕ್ಕಾಗಿ ಅವರು ಯೋ-ಯೋ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇನ್ನು ಸಂಜು ಗಾಯಗೊಂಡಿರುವ ಅಂಶ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಅಧಿಕಾರಿಗಳಿಗೂ ತಿಳಿದಿತ್ತು, ಬಿಸಿಸಿಐ ಗಮನಕ್ಕೂ ಬಂದಿತ್ತು. ಆದಾಗ್ಯೂ ಸಂಜು, ಟೆಸ್ಟ್‌ನಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದರೊಂದಿಗೆ ಯೋ-ಯೋ ಟೆಸ್ಟ್ ಎಷ್ಟು ಗಂಭೀರ ಮಾನದಂಡವಾಗಿದೆ ಎಂದು ಆಟಗಾರರಿಗೆ ಬಿಸಿಸಿಐ ನೇರವಾಗಿ ತಿಳಿಸಿದೆ.
ಇದನ್ನೂ ಓದಿ: ಯೋ ಯೋ ಟೆಸ್ಟ್ ಫೇಲ್ ಆದ ಟೀಂ ಇಂಡಿಯಾದ ಐವರು ಆಟಗಾರರಿವರು..!
ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?
ಕ್ರಮಬದ್ಧ ಮತ್ತು ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ನಿರೂಪಿಸುವುದೇ ಯೋ ಯೋ ಫಿಟ್ನೆಸ್. 20 ಮೀ. ಅಳತೆಯಲ್ಲಿ 2 ಕೋನ್‌ಗಳನ್ನು ನೇರ ಲೈನ್‌ನ ಒಳಗೆ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್‌ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್‌ನ ಅಂತರದಲ್ಲಿ ಇಟ್ಟ ಕೋನ್‌ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತುವರಿಯಬೇಕು. ಒಟ್ಟು 3 ಬೀಪ್ ಧ್ವನಿಗಳ ಅಂತರದಲ್ಲಿ ಸುತ್ತಬೇಕು. ಇವು ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್‌ನ ಸೂಚನೆ ಆಗಿರುತ್ತವೆ. ಪ್ರತಿ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಗಳ ನಡುವಿನ ಅಂತರ ಕಡಿಮೆ ಆಗುತ್ತಿರುತ್ತದೆ. 2 ಬಾರಿ ಬೀಪ್ ಸಮಯದೊಳಗೆ ಒಟ್ಟಾರೆ 40 ಮೀ. ಪೂರೈಸಲು ವಿಫಲರಾದರೆ ಪರೀಕ್ಷೆ ಕೊನೆಗೊಳ್ಳುತ್ತದೆ. ಲ್ಯಾಪ್ಸ್ ಮತ್ತು ಓಟದ ವೇಗ
ಆಧರಿಸಿ ಅಂಕ ನೀಡಲಾಗುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.