
ಮುಂಬೈ(ಜೂ.08): ಐಪಿಎಲ್'ನ 10 ಆವೃತ್ತಿಯಲ್ಲಿ ಪುಣೆ ತಂಡದ ಮಾಲೀಕತ್ವ ಹೊಂದಿದ್ದ ಉದ್ಯಮಿ ಸಂಜೀವ್ ಗೊಯೆಂಕಾ, ಮುಂದಿನ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಖರೀದಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಳ್ಳಾಟ ಪ್ರಕರಣದಲ್ಲಿ ಎರಡು ವರ್ಷ ನಿಷೇಧಕ್ಕೆ ಗುರಿಯಾಗಿದ್ದ ರಾಯಲ್ಸ್ ತಂಡದಲ್ಲಿ ಶೇ.40ರಷ್ಟು ಷೇರುಗಳನ್ನು ಹೊಂದಿರುವ ಮನೋಜ್ ಬಡಾಲ್ ಅವರನ್ನು ಗೋಯಂಕಾ ಇಂಗ್ಲೆಂಡ್'ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು ಸಂಜೀವ್ ಗೊಯೆಂಕಾ ರಾಜಸ್ತಾನ ರಾಯಲ್ಸ್ ತಂಡದತ್ತ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪುಣೆ ಪ್ರಾಂಚೈಸಿ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.
ಚೆನ್ನೈ ಹಾಗೂ ರಾಜಸ್ತಾನ ತಂಡಗಳ ಬದಲಾಗಿ ಎರಡು ವರ್ಷಗಳ ಕಾಲ ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್'ಜೈಂಟ್ಸ್ ತಂಡಗಳು 9 ಮತ್ತು 10 ಆವೃತ್ತಿಯ ಐಪಿಎಲ್'ನಲ್ಲಿ ಕಾಣಿಸಿಕೊಂಡಿದ್ದವು.
ರಾಜಸ್ಥಾನ್ ರಾಯಲ್ಸ್ ತಂಡವು ಬಾಲಿವುಡ್ ತಾರೆ ಶಿಲ್ಪ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಹಾಗೂ ಉದ್ಯಮಿ ಲೆಕ್'ಲ್ಯಾನ್ ಮರ್ಡೋಕ್ ಒಡೆತನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.