ವಿಚ್ಛೇದನದ ಸುದ್ದಿಯ ನಡುವೆ, 'ಹೃದಯ ಭಾರವಾದಂತೆ ಅನಿಸಿದೆ...' ಎಂದು ಸಾನಿಯಾ ಪೋಸ್ಟ್‌!

Published : Nov 25, 2022, 01:53 PM IST
ವಿಚ್ಛೇದನದ ಸುದ್ದಿಯ ನಡುವೆ, 'ಹೃದಯ ಭಾರವಾದಂತೆ ಅನಿಸಿದೆ...' ಎಂದು ಸಾನಿಯಾ ಪೋಸ್ಟ್‌!

ಸಾರಾಂಶ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲೀಕ್ ಅವರೊಂದಿಗಿನ ವಿಚ್ಛೇದನ ವಿಚಾರದಲ್ಲಿ ಸಾನಿಯಾ ಮಿರ್ಜಾ ಇನ್ನೂ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ವರದಿಗಳ ನಡುವೆ ಪಾಕಿಸ್ತಾನದ ಚಾನೆಲ್‌ಗೆ ಇಬ್ಬರೂ ಜೊತೆಯಾಗಿ ಒಂದು ಕಾರ್ಯಕ್ರಮ ಹೋಸ್ಟ್‌ ಮಾಡಿದಾಗ, ವಿಚ್ಛೇದನ ಸುದ್ದಿ ಕೇವಲ ವದಂತಿ ಎಂದು ಹೇಳಲಾಗಿತ್ತು. ಈ ನಡುವೆ ಸಾನಿಯಾ ಮಿರ್ಜಾ ಇನ್ನೊಮ್ಮೆ ಇದೇ ರೀತಿಯ ಮತ್ತೊಂದು ಪೋಸ್ಟ್‌ ಮಾಡಿದ್ದಾರೆ.  

ನವದೆಹಲಿ (ನ.25): ಮಾಜಿ ಟೆನಿಸ್‌ ತಾರೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಮ್ಮ ಪತಿ ಶೋಯೆಬ್‌ ಮಲೀಕ್‌ರಿಂದ ವಿಚ್ಛೇದನ ಪಡೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ತಮ್ಮ ಸೋಶಿಯಲ್‌ ಮೀಡಿಯಾ ಫಾಲೋವರ್ಸ್‌ಗಳು ಹಾಗೂ ಮಾಧ್ಯಮಕ್ಕೆ ತಮ್ಮ ಕ್ರಿಪ್ಟಿಕ್‌ ಅಥವಾ ಗೌಪ್ಯ ಪೋಸ್ಟ್‌ಗಳ ಮೂಲಕ ಖಂಡಿತವಾಗಿ ಸುದ್ದಿಯಲ್ಲಿದ್ದಾರೆ. ಮಲೀಕ್‌ರಿಂದ ಸಾನಿಯಾ ಮಿರ್ಜಾ ಇನ್ನೇನು ವಿಚ್ಚೇದನ ಪಡೆದುಕೊಂಡೇ ಬಿಟ್ಟರು ಎನ್ನುವ ರೀತಿಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ 'ವಿರಹ'ದ ಹಾಗೂ ಒಬ್ಬಂಟಿತನದ ಪೋಸ್ಟ್‌ಗಳನ್ನು ಹಾಕಿದ್ದ ಸಾನಿಯಾ ಮಿರ್ಜಾ ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಉಲ್ಟಾ ಹೊಡೆದುಬಿಟ್ಟರು. ಸ್ವತಃ ಶೋಯಬ್‌ ಮಲೀಕ್‌ ಅವರೊಂದಿಗೆ ಪಾಕಿಸ್ತಾನದ ಚಾನೆಲ್‌ನಲ್ಲಿ ಟಾಕ್‌ ಶೋ ನಡೆಸಿಕೊಟ್ಟರು. ಇದರ ಬೆನ್ನಲ್ಲಿಯೇ ಸಾನಿಯಾ ಮಿರ್ಜಾ ವಿಚ್ಛೇದನ ಪಡೆದುಕೊಳ್ಳುವುದು ಸುಳ್ಳು, ಗಂಡ-ಹೆಂಡತಿ ಇಬ್ಬರೂ ಚೆನ್ನಾಗಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮದಲ್ಲಿ ಹರಿದಾಡಿದವು. ಸಾನಿಯಾ ಸಂಸಾರದ ವಿಚಾರ ತಣ್ಣಗಾಗುವ ಹೊತ್ತಿನಲ್ಲಿಯೇ ಮತ್ತೊಮ್ಮೆ ಗೌಪ್ಯ ಟ್ವೀಟ್‌ನ ಮೂಲಕ ಸಾನಿಯಾ ಮಿರ್ಜಾ ಸುದ್ದಿಯಾಗಿದ್ದಾರೆ. ಈ ಬಾರಿ ಭಾವನಾತ್ಮಕ ಕವಿತೆಯನ್ನು ಅವರು ಹಂಚಿಕೊಂಡಿದ್ದರು. ಹೃದಯ ಭಾರವಾದಂತೆ ಅನಿಸಿದಾಗಲೆಲ್ಲಾ ನಮಗೆ ನಾವು ಬ್ರೇಕ್‌ ತೆಗೆದುಕೊಳ್ಳಬೇಕು ಎನ್ನುವ ಅರ್ಥದ ಕವಿತೆಯನ್ನು ಪೋಸ್ಟ್‌ ಮಾಡಿದ್ದಾರೆ. ಅದರ ನಡುವೆಯೇ ಅವರ ವಿಚ್ಛೇದನದ ಸುದ್ದಿ ಮತ್ತೆ ಹೈಲೈಟ್‌ ಆಗಿದೆ.

Sania Mirza: ಡಿವೋರ್ಸ್ ರೂಮರ್ಸ್ ಮಧ್ಯೆ ಸಾನಿಯಾಗೆ ಮುದ್ದಾಗಿ ಬರ್ತ್‌ಡೇ ವಿಶ್ ಮಾಡಿದ ಮಲಿಕ್

ಶುಕ್ರವಾರ ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಕ್ರಿಪ್ಟಿಕ್‌ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹೃದಯ ಅತ್ಯಂತ ಭಾರವಾದಾಗ, ನಮಗೆ ನಾವೇ ಬ್ರೇಕ್‌ ನೀಡುವುದನ್ನು ಕಲಿತುಕೊಳ್ಳಬೇಕು ಎಂದು ಅದರಲ್ಲಿ ಬರೆದುಕೊಂಡಿದ್ದಾರೆ. ಇನ್ಸ್‌ಟಾಗ್ರಾಮ್‌ನ ಸ್ಟೋರಿಯಲ್ಲಿ ತಮ್ಮ ಕವಿತೆಯ ಪೋಸ್ಟ್‌ಅನ್ನು ಅವರು ಹಂಚಿಕೊಂಡಿದ್ದಾರೆ. 'ನೀವೊಬ್ಬ ಮನುಷ್ಯ. ಬೆಳಕು ಹಾಗೂ ಕತ್ತಲೆಯಿಂದ ನಿರ್ಮಾಣವಾದವನು. ಸ್ವಲ್ಪ ದುರ್ಬಲವಾಗಿರಲು ಅನುಮತಿಸುವಷ್ಟು ನಿಮ್ಮನ್ನು ಪ್ರೀತಿಸಿ. ನಿಮ್ಮ ಹೃದಯವು ಹೆಚ್ಚು ಭಾರವಾದ ದಿನಗಳಲ್ಲಿ ನಿಮಗೆ ವಿರಾಮವನ್ನು ನೀಡಲು ಕಲಿತುಕೊಳ್ಳಿ' ಎನ್ನುವ ಅರ್ಥದ ಕವಿತೆಯನ್ನು ಹಾಕಿದ್ದಾರೆ.

ಶೋಯೆಬ್‌ ಮಲಿಕ್‌ಗೂ ಮೊದಲು ಸಾನಿಯಾ ಮಿರ್ಜಾ ಜತೆ ಥಳಕು ಹಾಕಿಕೊಂಡಿದ್ದ ಅಚ್ಚರಿಯ ಹೆಸರುಗಳಿವು..!

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನದ ಕಡೆಗೆ ಸಾಗುತ್ತಿರುವ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಕೆಲವು ದಿನಗಳ ನಂತರ ಸಾನಿಯಾ ಮಿರ್ಜಾ ಅವರ ಇತ್ತೀಚಿನ ಪೋಸ್ಟ್ ದಾಖಲಾಗಿದೆ. ಗಡಿಯಾಚೆಗಿನ ತಾರಾ ಜೋಡಿಯ ಪ್ರೇಮಕಥೆಯು ಭಾರತ ಮತ್ತು ಪಾಕಿಸ್ತಾನದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!